ಬೆಂಗಳೂರು: ಚಿರಂತನ ಅಭಿವೃದ್ಧಿ ಪ್ರತಿಷ್ಠಾನ,ಸ್ವರ ಚಿರಂತನ ಇವುಗಳ ಸಂಯುಕ್ತಾಶ್ರಯದಲ್ಲಿ ಕರುನಾಡ ಸಾಧಕರತ್ನ ಪ್ರಶಸ್ತಿ ಪ್ರದಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ದಿನಾಂಕ 30.06.2024ರ ಭಾನುವಾರ ಬೆಳಗ್ಗೆ 10 ಗಂಟೆಯಿಂದ ಬೆಂಗಳೂರಿನ ಗವಿಪುರ, ಕೆಂಪೇಗೌಡ ನಗರದ ಉದಯಭಾನು ಕಲಾಸಂಘ ಜರುಗುವುದು ಎಂದು ಪ್ರಕಟಣಿ ತಿಳಿಸಿದೆ.
ಇದೇ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ಮ್ಯಾನೇಜರ್ ಶ್ರೀ ಬಿ.ಎನ್. ರಮೇಶ್ ಕುಮಾರ್ ವಿರಚಿತ ಕುಮಾರ ಸಂಭವ ಕನ್ನಡ ಅವತರಣಿಕೆಯ ಲೋಕಾರ್ಪಣೆ ಜರುಗಲಿದ್ದು ಅಧ್ಯಕ್ಷತೆಯನ್ನು ನಾಡೋಜ ಡಾ. ಮಹೇಶ್ ಜೋಶಿ, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ ಇವರು ವಹಿಸುವರು.
ಶ್ರೀ ಡಾ.ಗಣಪತಿ ಹೆಗಡೆ, ಸಂಸ್ಕೃತ ವಿದ್ವಾಂಸರು ಮತ್ತು ಉಪನ್ಯಾಸಕರು ಶ್ರೀ ರಾಘವೇಂದ್ರ ವಿ ಕೊಳ್ಳೇಗಾಲ್, ನಿವೃತ್ತ ಕಾರ್ಯನಿರ್ವಾಹಕ ನಿರ್ದೇಶಕರು, ಪಂಜಾಬ್ ಮತ್ತು ಸಿಂಥ್ ಬ್ಯಾಂಕ್,
ಶ್ರೀ ಡಿ. ಕಲ್ಲೂರಾವ್, ನಿವೃತ್ತ ಮಹಾ ಪ್ರಬಂಧಕರು, ಕೆನರಾ ಬ್ಯಾಂಕ್, ಬೆಂಗಳೂರು, ಶ್ರೀ ಬಿ.ಎನ್. ರಮೇಶ್ ಕುಮಾರ್, ಸಾಹಿತಿಗಳು ಮತ್ತು ಅಂಕಣಕಾರರು, ಶ್ರೀ ಎಂ. ವೆಂಕಟೇಶ ಶೇಷಾದ್ರಿ, ನಿವೃತ್ತ ನಿರ್ದೇಶಕರು, ಕೆನರಾ ಬ್ಯಾಂಕ್ ಮಾಹಿತಿ ತಂತ್ರಜ್ಞಾನ ತರಬೇತಿ ಸಂಸ್ಥೆ, ಬೆಂಗಳೂರು, ಶ್ರೀಮತಿ ಡಾ ಅಶ್ವಿನಿ ಭಟ್ (ಕ್ಷೇತ್ರ: ಕಲೆ ಮತ್ತು ಸಂಸ್ಕೃತಿ), ಶ್ರೀ. ಶ್ರೀಕಾಂತ ಪತ್ರೆಮರ (ಕ್ಷೇತ್ರ : ಸಾಹಿತ್ಯ ಮತ್ತು ಸಂಘಟನೆ), ಶ್ರೀಮತಿ ಆಶಾ ರಮೇಶ್ (ಕ್ಷೇತ್ರ: ಭಾರತೀಯ ಸಂಸ್ಕೃತಿ), ಶ್ರೀ ವಿಪಿನ್ ಭದೌರಿಯಾ (ಕ್ಷೇತ್ರ : ಶಿಲ್ಪಕಲೆ) ಇವರುಗಳಿಗೆ “ಕರುನಾಡ ಸಾಧಕರತ್ನ ” ಪ್ರಶಸ್ತಿ ನೀಡಿ ಪುರಸ್ಕರಿಸಲಾಗುವುದು.
ಸುಗಮ ಸಂಗೀತ ಗಾಯನದಲ್ಲಿ ಖ್ಯಾತ ಹಿನ್ನೆಲೆ ಗಾಯಕಿ ಹಾಗೂ ಸ್ವರ ಸಂಯೋಜಕರಾದ ಶ್ರೀಮತಿ ಸುಮಾ ಎಲ್.ಎನ್.ಶಾಸ್ತ್ರೀ, ಗಾಯಕಿ ಶ್ರೀಮತಿ ಅನಿತಾ ಮುತ್ತು ಕುಮಾರ್, ಗಾಯಕ ಶ್ರೀ ವೀರೇಶ ಎಂಪಿಎಂ ಹಾಗೂ ವಿದ್ವಾನ್ ಶ್ರೀ ವಿಶ್ವೇಶ್ ಭಟ್ ಇವರಿಂದ ವಿಶೇಷ ಗಾಯನ ಕಾರ್ಯಕ್ರಮ ಇರುತ್ತದೆ.
ಕಾರ್ಯಕ್ರಮ ನಿರೂಪಣೆಯನ್ನು ಶ್ರೀ ಕೆ.ಜಿ. ಸಂಪತ್ ಕುಮಾರ್ ಇವರು ನಡೆಸುವರು.