ವಿದ್ಯಾರ್ಥಿಗಳ ಕಲಿಕೆಯಲ್ಲಿ ಶಿಕ್ಷೆ ಅವಶ್ಯಕತೆ ಇದ್ದೇ ಇದೆ..ಏಕೆಂದರೆ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕಾದರೆ ಅವರ ತಪ್ಪುಗಳನ್ನು ತಿದ್ದಲೇ ಬೇಕಾಗುತ್ತದೆ. ವಿದ್ಯಾರ್ಥಿಗಳು ತಪ್ಪು ಮಾಡೋದು ಸಹಜ ಆದರೂ ಅವರನ್ನು ಸರಿ ದಾರಿ ತರುವುದು ಪ್ರತಿಯೊಬ್ಬ ಶಿಕ್ಷಕನ ಕರ್ತವ್ಯವಾಗಿದೆ. ನಾವುಗಳು ಚಿಕ್ಕ ವಯಸ್ಸಿನಲ್ಲಿ ಓದಬೇಕಾದರೆ ಗುರು ಹಿರಿಯರಲ್ಲಿ ಗೌರವ ಭಾವನೆಯನ್ನು ಕಾಣುತ್ತಿದ್ದೆವು, ಭಯದಿಂದ ಅಂಜಿಕೆಯಿಂದ ಕೆಲಸ ಕಾರ್ಯವನ್ನು ಮಾಡುತ್ತಿದ್ದೆವು. ತಂದೆ ತಾಯಿಯ ಭಯ ನಮ್ಮಲ್ಲಿ ಕಾಡುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಇದ್ಯಾವುದರ ಪರಿವೇ ಇಲ್ಲದೆ ಭಯ ಅಂಜಿಕೆ ಇಲ್ಲದೆ ತಂದೆ ತಾಯಿಗಳಿಗೆ ಗೌರವ ನೀಡದೆ ,ಶಿಕ್ಷಕರ ಭಯ ಇಲ್ಲದೆ ಇರುವ ಸಂದರ್ಭ ಕಾಣುತ್ತಿದ್ದೇವೆ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ತಂದೆ ತಾಯಿಗಳು ಅವರಿಗೆ ಕೊಟ್ಟಂತಹ ಅತಿಯಾದ ಸ್ವಾತಂತ್ರದ ಕಾರಣ ಗುರು ಹಿರಿಯರಲ್ಲಿ ಭಯದ ವಾತಾವರಣ ಇಲ್ಲದೇ ಇರುವುದು! ಶಾಲೆಗಳಲ್ಲಿ ಶಿಕ್ಷಕರು ಶಿಕ್ಷಿಸದೆ ಇಲ್ಲದೆ ಇರೋದು! ಮಕ್ಕಳು ತಮಗೆ ಬಂದಂತೆ ಸ್ವಾತಂತ್ರ್ಯವನ್ನು ಉಪಯೋಗಿಸಿಕೊಳ್ಳುತ್ತಿರುವುದು ಸಮಾಜದ ಘಾತುಕ ಶಕ್ತಿಗೆ ಪ್ರಚೋದನೆ ಕೊಟ್ಟಂತೆ ಕಾಣುತ್ತಿದೆ. ಆದ್ದರಿಂದ ಪೋಷಕರು ಮಕ್ಕಳನ್ನು ಶಿಕ್ಷಿಸುವುದು. ಗುರುಗಳು ಸರಿದಾರಿಗೆ ತರಬೇಕಾದರೆ ಶಿಕ್ಷೆ ಅವಶ್ಯಕತೆ ಇದೆ. ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷೆ ಇಲ್ಲದಿದ್ದಾಗ ಜೈಲಿನಲ್ಲಿ ಕೈದಿಗಳ ಸಂಖ್ಯೆ ಹೆಚ್ಚಾಗುತ್ತಾ ಹೋಗುತ್ತಿದೆ.
-ಚಂದ್ರಶೇಖರಚಾರ್ ಎಂ,ಚಿತ್ರದುರ್ಗ