ತುಮಕೂರು:ಇಂದು ಬೆಳಗಿನ ಜಾವ 7:00 ಗಂಟೆಗೆ ಸರಿಯಾಗಿ “ಪರಿಸರ ಯುವ ಮಿತ್ರ ಬಳಗ” ಗುಜ್ಜಾರಹಳ್ಳಿ ರವರ ವತಿಯಿಂದ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಪ್ರಸಿದ್ದಿ ಪಡೆದಿರುವ ಬೀಜದುಂಡೆ ಪ್ರಸರಣ ಕಾರ್ಯಕ್ರಮವನ್ನು ನಿಡಗಲ್ಲು ಬೆಟ್ಟದ ಅರಣ್ಯ ಪ್ರದೇಶದಲ್ಲಿ ಹಮ್ಮಿಕೊಳ್ಳಲಾಯಿತು.ಕಾರ್ಯಕ್ರಮದ ನೇತೃತ್ವವನ್ನು ಸರ್ಕಾರಿ ಪ್ರೌಢಶಾಲೆ ಅರಸೀಕೆರೆಯ ವಿಜ್ಞಾನ ಶಿಕ್ಷಕರಾದ ರೇಣುಕರಾಜ್.ಜಿ.ಹೆಚ್.ರವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಇಂದಿನ ಪ್ರಸ್ತುತ ಸನ್ನಿವೇಶದಲ್ಲಿ ಮನುಷ್ಯ ತನ್ನ ಅತಿಯಾಸೆಯಿಂದ ಗಿಡಮರಗಳನ್ನು ಕಡಿದು ನಾಶ ಮಾಡುತಿದ್ದಾನೆ.ಇದು ಹೀಗೆಯೇ ಮುಂದುವರೆದರೆ ಮುಂದೊಂದು ದಿನ ಇತ್ತೀಚಿನ ವರದಿಯ ಪ್ರಕಾರ ದೇಶದಲ್ಲಿ ಅತಿ ಕೆಟ್ಟ ಬರಗಾಲ ಅನುಭವಿಸುವ ರಾಜ್ಯಗಳಲ್ಲಿ ರಾಜಸ್ಥಾನ ಮೊದಲ ಸ್ಥಾನದಲ್ಲಿದ್ದು ನಂತರದ ದ ಸ್ಥಾನದಲ್ಲಿ ಕರ್ನಾಟಕ ರಾಜ್ಯವು ಬರುವ ಸಂಭವವಿದೆ. ಅದಕ್ಕಾಗಿ ಪ್ರಜ್ಞಾವಂತಿಕೆಯಿಂದ ನಾವುಗಳು ಪರಿಸರ ಸಂರಕ್ಷಣೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಅದಕ್ಕಾಗಿ ಇಂತಹ ಬೀಜದುಂಡೆ ಪ್ರಸರಣ ಕಾರ್ಯಕ್ರಮ ವನ್ನು ಹಮ್ಮಿಕೊಂಡ ಪರಿಸರ ಯುವಮಿತ್ರ ಬಳಗದ ಎಲ್ಲಾ ಸದಸ್ಯರುಗಳಿಗೆ ಧನ್ಯವಾದಗಳನ್ನು ತಿಳಿಸಿದರು. ನಂತರ ಈ ರೀತಿಯ ಕಾರ್ಯಕ್ರಮವನ್ನು ರಾಜ್ಯದ ಎಲ್ಲಾ ಯುವ ಮಿತ್ರರು ಹಮ್ಮಿಕೊಂಡರೆ ದೇಶದ ಅರಣ್ಯ ಸಂಪತ್ತು ಹೆಚ್ಚಿ ಪರಿಸರ ಉಳಿಯುತ್ತದೆ…ನಾವಿಲ್ಲದಿದ್ದರೂ ಪರಿಸರ ಇರುತ್ತದೆ ಆದರೆ ಪರಿಸರವಿಲ್ಲದಿದ್ದರೆ ನಾವು ಇರುವುದಕ್ಕೆ ಸಾಧ್ಯವೇ ಇಲ್ಲ ಎಂದು ತಿಳಿಸುತ್ತಾ ನಂತರ ಬೀಜದುಂಡೆಗಳನ್ನು ನಿಡಗಲ್ಲು ಅರಣ್ಯ ಪ್ರದೇಶದ ಖಾಲಿ ಸ್ಥಳಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಚಿಕ್ಕ ಗುಂಡಿಗಳನ್ನು ಮಾಡಿ ಅದರಲ್ಲಿ ಬೀಜದುಂಡೆ ಗಳನ್ನು ಇಟ್ಟು ಮಣ್ಣು ಮುಚ್ಚಲಾಯಿತು.ಮುಂದೆ ಅವು ಮಳೆ ಬಂದು ಹಸಿಯಾದಾಗ ಮೊಳಕೆಯೊಡದು ಸಸಿಗಳಾಗಿ ಮರಗಳಾಗಿ ಬೆಳೆಯುತ್ತವೆ.ಈ ಕಾರ್ಯಕ್ಕೆ ಸಹಕರಿಸಿದ ಪರಿಸರ ಯುವ ಮಿತ್ರ ಬಳಗದ ಸದಸ್ಯರುಗಳಾದ ನಮ್ಮ ಹೆಮ್ಮೆಯ ವಿದ್ಯಾರ್ಥಿಗಳಾದ ವಿನಯ್ ಕುಮಾರ್, ಭೂತೇ ಗೌಡ,ವಿದ್ಯಾಶಂಕರ್ ಗೌಡ ತ್ರಿಶೂಲ್ ಗೌಡ, ಮಹೇಶ್, ಶ್ರೀನಿವಾಸ,ಗುಜ್ಜಾರಿ, ದಿನೇಶ್, R.T.ಗೌಡ, ರೂಪಿತ್, ಹೇಮಂತ್.ರವರುಗಳು ಸುಮಾರು ಒಂದು ವಾರದಿಂದ ಕಷ್ಟಪಟ್ಟು ಬೀಜದುಂಡೆ ತಯಾರು ಮಾಡಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.