ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕು ಘಟಕದ ವತಿಯಿಂದ ಕರ್ನಾಟಕ ಪತ್ರಕರ್ತರ ಸಂಘದ ಮೊದಲನೇ ಪತ್ರಿಕಾ ದಿನಾಚರಣೆ ಹಾಗೂ ರಾಜ್ಯಮಟ್ಟದ ಕಾರ್ಯಕಾರಣಿ ಸಭೆ ಶನಿವಾರ ನಡೆಸಲಾಯಿತು.
ಈ ಕಾರ್ಯಕ್ರಮ ಉದ್ಘಾಟನೆಯನ್ನು ರಾಜ್ಯಾಧ್ಯಕ್ಷರಾದ ಮುರುಗೇಶ್ ಬಿ ಡಿಜಿಟಲ್ ಮಾಧ್ಯಮ ಎಷ್ಟೇ ಮುಂದುವರೆದರು ಪತ್ರಿಕೆ ಮೌಲ್ಯ ಕಡಿಮೆಯಾಗಿಲ್ಲ ಎಂದರು.ವಿಶೇಷ ಉಪನ್ಯಾಸಕ್ಕಾಗಿ ವಿಮರ್ಶಕರಾದ ಚಿಕ್ಕಮಂಗಳೂರಿನ ಡಾ.ಸತ್ಯನಾರಾಯಣ ರವರು ಬಹಳ ಧಾರ್ಮಿಕವಾಗಿ ಪತ್ರಿಕಾ ರಂಗದ ಜವಾಬ್ದಾರಿ ಬರುತ್ತದೆ ಪ್ರಾಮುಖ್ಯತೆ ಹಾಗೂ ಕುವೆಂಪು ಅವರ ಬದುಕಿನಲ್ಲಿ ಪತ್ರಿಕೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದು ಮತ್ತು ಕೆಲವು ಹಿರಿಯ ಪತ್ರಕರ್ತ ಸಂಪಾದಕರ ವಿಚಾರಗಳನ್ನು ಬಹಳ ಪ್ರಾಸ್ತಾವಕವಾಗಿ ಉಪನ್ಯಾಸ ನೀಡಿದರು.
ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಲಾಯಿತು ಅದರಲ್ಲೂ ನಂತರ ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯ ಮಟ್ಟದ ಕಾರ್ಯಕಾರಿಣಿ ಸಭೆ ನಡೆಯಿತು ಸಂಘಟನೆಯ ಬಗ್ಗೆ ಹಲವಾರು ವಿಷಯ ಚರ್ಚಿಸಲಾಯಿತು ಇದಕ್ಕೆ ಗೌರವ ಪೂರಕವಾಗಿ ರಾಘವೇಂದ್ರ ಸಾಲುಮನಿ ಕೂಡ್ಲಿಗಿ ಕರ್ನಾಟಕ ಪತ್ರಕರ್ತ ಸಂಘದ ತಾಲೂಕು ಅಧ್ಯಕ್ಷರು ಪ್ರಜಾವಾಣಿ ವರದಿಗಾರರಾದ ಗುರುಪ್ರಸಾದ್ ಅವರಿಗೆ ಮತ್ತು ಡಿಎಸ್ಎಸ್ ತಾಲೂಕು ಸಂಚಾಲಕರಾದ ಚಂದ್ರಶೇಖರ್ ರವರೆಗೂ ಮತ್ತು ಇನ್ನೂ ಹಲವರಿಗು ಸನ್ಮಾನ ಮಾಡಲಾಯಿತು.ಈ ಸಂದರ್ಭದಲ್ಲಿ ಶ್ರೀ ಸೋಮಶೇಖರ ಹಿರೇಮಠ, ಕಾರ್ಯಾಧ್ಯಕ್ಷರು, ವಿಜಯನಗರ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ಕಾಕುಬಾಳ್ ಪ್ರಕಾಶ್, ಉಪಾಧ್ಯಕ್ಷರಾದ ಭರಮಯ್ಯ, ರಾಮು ಅಸ್ರಿತ್, ಜಿಲ್ಲಾ ಗೌರವ ಅಧ್ಯಕ್ಷರಾದ ಕೆ.ಎಸ್. ಮುರಳೀಧರ, ಜಿಲ್ಲಾ ಕಾರ್ಯದರ್ಶಿ ಆರ್.ರಾಮಜೀನಾಯ್ಕ, ರಾಜ್ಯ ಸಲಹಾ ಸಮಿತಿ ಸದಸ್ಯರಾದ ಡಿ.ಎಂ.ಈಶ್ವರಪ್ಪ, ಬಾಗಲಕೋಟೆ ಜಿಲ್ಲಾ ಅಧ್ಯಕ್ಷರಾದ ಶ್ರೀ ಡಿ.ಬಿ.ವಿಜಯಶಂಕರ್, ಕೂಡ್ಲಿಗಿ ತಾಲ್ಲೂಕು ಅಧ್ಯಕ್ಷರಾದ ಸಾಲುಮನಿ ರಾಘವೇಂದ್ರ, ಕೊಟ್ಟೂರು ತಾಲ್ಲೂಕು ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಸಿದ್ದಪ್ಪ, ಕಾರ್ಯಾಧ್ಯಕ್ಷ ವಿಜಯಕುಮಾರ್.ಎಚ್.,ಚಿರಿಬಿ ಕೊಟ್ರೇಶ್, ಎಂ.ಶ್ರೀನಿವಾಸ್, ಪ್ರಕಾಶ್, ಶಿವರಾಜ್, ಕೆ.ಎಂ. ಚಂದ್ರಶೇಖರ್, ಕೆ.ಸತೀಶ್‌ಕುಮಾರ್, ಟಿ.ಕೊಟ್ರೇಶ್, ಎಂ.ಗುರುಪ್ರಸಾದ್, ಎಂ.ನಯನ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ:ವೈ.ಮಹೇಶ್ ಕುಮಾರ್ ಕೊಟ್ಟೂರು