ಹನೂರು:ಕಳೆದ ಲೋಕಸಭಾ ಕ್ಷೇತ್ರದಲ್ಲಿ
ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಅಭಿನಂಧನಾ ಯಾತ್ರೆ ಹಾಗೂ ಶ್ಯಾಮ್ ಪ್ರಸಾದ್ ಮುಖರ್ಜಿಯವರ. ಪುಣ್ಯಸ್ಮರಣೆ ಮತ್ತು ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಪರಾಜಿತ ಅಭ್ಯರ್ಥಿ ಎಸ್ ಬಾಲರಾಜ್ ತಿಳಿಸಿದರು.
ಹನೂರು ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಮಾತನಾಡಿದ ಅವರು ಹನೂರು ಕ್ಷೇತ್ರದ ವ್ಯಾಪ್ತಿಯಲ್ಲಿನ ಜೆ ಡಿ ಎಸ್ ಮತ್ತು ಬಿಜೆಪಿಯ ಕಾರ್ಯಕರ್ತರ ಕೃತಜ್ಞತೆಯನ್ನು ಹಮ್ಮಿಕೊಳ್ಳಲಾಗಿದೆ ಕಳೆದ ಚುನಾವಣೆಯಲ್ಲಿ ನಡೆದ ಘಟನಾವಳಿಗಳನ್ನು ನೆನೆಯ ಬೇಕಾಗಿದೆ ರಾಷ್ಟ್ರೀಯ ಪಕ್ಷದಲ್ಲಿ ನಮ್ಮಂತ ಸಾಮಾನ್ಯ ಕಾರ್ಯಕರ್ತರಿಗೆ ಟೀಕೇಟ್ ನೀಡಿ ಹುರಿದುಂಬಿಸಿದ್ದವರು ನಮ್ಮಲ್ಲಿದ್ದಾರೆ ನಮಗೆ ಮೂವತ್ಮೂರು ವರ್ಷಗಳ ವಯಸ್ಸಿನಲ್ಲಿ ಚುನಾವಣಾ ಸ್ಪರ್ದಿಸಿದ್ದವನು ನಾನು ಆಗಲು ಸೋಲಾಯಿತು ನಮ್ಮಲ್ಲಿನ ಅನೇಕ ಕೊರತೆಗಳಿದ್ದವು ಕಳೆದ ಒಂದು ವರ್ಷದಿಂದ ಕಾರ್ಯಕರ್ತರು ಪಕ್ಷದ ಸಂಘಟನೆಯನ್ನು ಮಾಡಿದರು ಸಹ ಚುನಾವಣಾ ರಾಜಕೀಯದಲ್ಲಿ ಸೋಲಾಯಿತು ಪಕ್ಷ ಕೊಟ್ಟಂತಹ ಹಲವಾರು ಕಾರ್ಯಕ್ರಮಗಳನ್ನು ನಾವು ಮನೆಮನೆಗೆ ತಲುಪಿಸಿದ್ದೆವೆ ಆದರೂ ಪೂರ್ಣ ಪ್ರಮಾಣದಲ್ಲಿ ವಿಪಲವಾಗಿದೆ ಮೋದಿಜೀಯವರ ಹೆಸರಿನಲ್ಲಿ ಚುನಾವಣೆಯನ್ನು ಎದುರಿಸಿದ್ದೆವೆ ನಮ್ಮ ಸರ್ಕಾರವು ಅತಿ ಹೆಚ್ಚು ಶೌಚಾಲಯ,ಅಕ್ಕಿ,ಮನೆಗಳನ್ನು ಬಡವರಿಗೆ ನೀಡಿದ ಕೀರ್ತಿ ನಮಗೆ ಸೇರಿದ್ದು ಕ್ಷೇತ್ರದಲ್ಲಿ ನಾನು ಸ್ಪರ್ಧಿಸಿದರ ಬಗ್ಗೆ ಮಾಹಿತಿ ಕಾರ್ಯಕರ್ತರಿಗೆ ನೀಡುವಲ್ಲಿ ನಾವು ವಿಪಲವಾಗಿದ್ದೆವೆ ದಲಿತರ ಉದ್ಧಾರಕ್ಕಾಗಿ ನಾವು ಮಾಡಿದ ಕೆಲಸವನ್ನು ಮತದಾರರಿಗೆ ತಲುಪಿಸುವಲ್ಲಿ ಎಡವಿದ್ದೇವಿ.ಚುನಾವಣೆಯಲ್ಲಿ ಪ್ರಚಾರದ ಕೊರತೆಯಾಗಿದೆ ನಮ್ಮಲ್ಲಿ ಪಕ್ಷವನ್ನು ಸಮರ್ಥವಾಗಿ ನಿಭಾಯಿಸುವವರಿಗೆ ಹುದ್ದೇಯನ್ನು ನೀಡಬೇಕಾಗಿದೆ. ಮುಖಂಡರು ಪ್ರವಾಸಗಳನ್ನು ಸಹ ಮಾಡಬೇಕು ಈಗಾಗಲೇ ಮತಗಳಿಕೆಯಲ್ಲಿ ನಮಗೆ ಹೆಚ್ಚಿನ ಮತ ತಲುಪಿದೆ ಅಭ್ಯರ್ಥಿಯ ಬಗ್ಗೆ ಅಪಪ್ರಚಾರ ಮಾಡಿದ್ದರು ನನ್ನ ಸೋಲಿಗೆ ಜಾತಿಗಳನನ್ನು ಎತ್ತಿಕಟ್ಟುವ ಕೆಲಸವನ್ನು ಸಹ ಮಾಡಿದರು ದಲಿತರ ಉದ್ದಾರಕ್ಕಾಗಿ ಹಣವನ್ನು ಖಾಲಿ ಮಾಡಿದ ಕೀರ್ತಿ ಕಾಂಗ್ರೇಸ್ ಸರ್ಕಾರಕ್ಕೆ ಸೇರಿದ್ದು ರಾಜ್ಯದಲ್ಲಿ ಒಬ್ಬ ದಲಿತರ ನಾಯಕರನ್ನು ಹುಟ್ಟುಹಾಕಿಲ್ಲ ದಲಿತರ ಉದ್ದಾರ ಮಾಡಿಲ್ಲ ಎಂದು ತಿಳಿಸಿದರು .
ಇದೆ ಸಮಯದಲ್ಲಿ ಡಾಕ್ಟರ್ ಪ್ರೀತನ್ ಮಾತನಾಡಿ ನಾವು ಒಗ್ಗಟ್ಟಾಗಿ ಹೋರಾಟ ಮಾಡಿದ ನಂತರವೂ ನಮಗೆ ಸೋಲಾಗಿದೆ ಅದರ ಅರಿವು ನಮಗಾಗಬೇಕು ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಯ ಬಗ್ಗೆ ಮಾಹಿತಿ ನೀಡಿ ಮತ ಸೆಳೆದಿದ್ದಾರೆ ಆದರೆ ಅದರಿಂದಲೇ ರಾಜ್ಯ ಅಭಿವೃದ್ಧಿಗೆ ಮಾರಕವಾಗುತ್ತದೆ ಮುಂದಿನ ದಿನಗಳಲ್ಲಿ ನಡೆಯುವ ಎಲ್ಲಾ ಅಭ್ಯರ್ಥಿಗಳಿಗೂ ಪಕ್ಷದ ಎಲ್ಲಾ ಕಾರ್ಯಕರ್ತರಿಗೂ ಜಯಗಳಿಸಬೇಕು ಆಗ ಮಾತ್ರ ಪಕ್ಷದ ಉಳಿವಿಗೆ ಸಾಧ್ಯವಾಗುತ್ತದೆ ಎಂದರು.
ಬಿಜೆಪಿಯ ಜಿಲ್ಲಾ ಪ್ರಮುಖರಾದ ಡಾಕ್ಟರ್ ದತ್ತೇಶ್ ಕುಮಾರ್ ಮಾತನಾಡಿ ಈಗಾಗಲೇ ನಮ್ಮ ಮುಖಂಡರು ಪಕ್ಷದ ಸೋಲಿನ ಬಗ್ಗೆ ಸೂಕ್ಷ್ಮವಾಗಿ ಹೇಳಿದ್ದಾರೆ ಅಮೇರಿಕಾದ ಅಬ್ರಾಹಂ ಲಿಂಕನ್ ರವರು ಹದಿನಾಲ್ಕು ಭಾರಿ ಸ್ಪರ್ಧಿಸಿ ಸೋತಿದ್ದರು ನಂತರ ವಿಜಯ ಸಾದಿಸಿ ಇತಿಹಾಸ ಸೃಷ್ಟಿಸಿದರು ಹನೂರು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಮಗೆ ಪೂರಕವಾದ ವಾತವರಣವಿತ್ತು ನಮಗೆ ನೀಡಿದ ಜವಾಬ್ದಾರಿ ಸಮಪರ್ಕವಾಗಿ ನಿಭಾಯಿಸಿದ್ದೆವೆ ನನಗೆ ಜವಾಬ್ದಾರಿ ನೀಡಿದ ಕೌದಳ್ಳಿ ಮತ್ತು ಹನೂರು ಪಟ್ಟಣದಂತಹ ಕಾರ್ಯಕರ್ತರು ಅತಿ ಹೆಚ್ಚು ಮತ ನೀಡಿ ಕಾಂಗ್ರೆಸ್ ಮತದ ಅಂತರವನ್ನು ಕಡಿಮೆ ಮಾಡಿದ್ದೇವೆ ಮುಂದಿನ ದಿನಗಳಲ್ಲಿ ನಡೆಯುವ ಚುನಾವಣಾ ಕಾರ್ಯಕರ್ತರದ್ದಾಗಿದೆ ನಮ್ಮ ಪಕ್ಷವು ಒಬ್ಬ ಮುಸ್ಲಿಂ ಸಮುದಾಯದ ವ್ಯಕ್ತಿಯನ್ನು ನಿಲ್ಲಿಸಿ ಗೆಲ್ಲಿಸಿಕೊಂಡ ಉದಾಹರಣೆಯಿದೆ ಮುಂದಿನ ದಿನಗಳಲ್ಲಿ ಜೆಡಿಎಸ್ ಮತ್ತು ಬಿಜೆಪಿ ಅಧಿಕಾರದ ಗದ್ದುಗೆಯಿಡಿಯಲು ತೀರ್ಮಾನಿಸಿದ್ದೇವೆ ಬಾಲ್ ರಾಜು ರವರು ಯುವಕರಾಗಿದ್ದು ಮುಂದಿನ ದಿನಗಳಲ್ಲಿ ಅವರಿಗೆ ಅವಕಾಶವನ್ನು ಮತದಾರರು ನೀಡಬೇಕು ಎಂದರು.
ಇದೆ ವೇಳೆ ಮಾತನಾಡಿದ ನೀಶಾಂತ್ ರವರು ಹನೂರು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸಂವಿಧಾನದ ಬದಲಾವಣೆ ವಿಷಯ ಬಹುಮಟ್ಟಿಗೆ ಪ್ರಭಾವ ಬೀರಿತು ಮುಂದಿನ ದಿನಗಳಲ್ಲಿ ಇಂತಹ ಸುಳ್ಳು ಸುದ್ದಿಯನ್ನು ತಡೆಯಲು ಪ್ರಯತ್ನಿಸಬೇಕು , ಪ್ರತಿಬೂತ್ ನಲ್ಲಿಯೂ ಕಾರ್ಯಕರ್ತರ ಸೇನಾ ಪಡೆ ಸಜ್ಜುಗೊಳಿಸಲು ಪ್ರಯತ್ನಿಸಲಾಗುವುದು ಎಂದರು .
ಇದೇ ಸಂದರ್ಭದಲ್ಲಿ ಮಾಜಿ ಸಚಿವರಾದ ಎನ್ ಮಹೇಶ್, ಮಾಜಿ ಶಾಸಕರಾದ ನಿರಂಜನ್ ಕುಮಾರ್, ಎಮ್ ವಿ ಪಣೀಶ್,ನೂರೋಂದ್ ಶೇಟ್ರು ಜಯಸುಂದರ್ ,ಮಂಡಲ ಅಧ್ಯಕ್ಷರಾದ ವೃಷಬೇಂದ್ರ , ಜಿಲ್ಲಾ ಕಾರ್ಯದರ್ಶಿ ವೆಂಕಟೇಗೌಡ ,ಬಸವರಾಜು ,ಜೆಡಿಎಸ್ ಮುಖಂಡರಾದ ಕೃಷ್ಣೆಗೌಡ ಸೇರಿದಂತೆ ಇನ್ನಿತರರು ಹಾಜರಿದ್ದರು.
ವರದಿ:ಉಸ್ಮಾನ್ ಖಾನ್