ಗದಗ:ಶ್ರೀ ಅಡವಿಬಸಯ್ಯ ತೋಟದ ಶಿಕ್ಷಣ,ಸಾಹಿತ್ಯ,ಮತ್ತು ಸಾಂಸ್ಕೃತಿಕ ವೇದಿಕೆ(ರಿ.) ಮತ್ತು ಕನ್ನಡಾಂಬೆ ಯುವಕರ ಸಂಘ (ರಿ.)ಮೈನಹಳ್ಳಿ ಹಾಗೂ ಯುವ ಜಾಗೃತಿ ಪತ್ರಿಕಾ ಬಳಗ ಕೊಪ್ಪಳ ಇವರುಗಳ ಸಂಯುಕ್ತ ಆಶ್ರಯದಲ್ಲಿ ಕೊಪ್ಪಳದ ಸರಕಾರಿ ನೌಕರರ ಭವನದಲ್ಲಿ ನಡೆದ ಸಾಧಕ ಮೈನಹಳ್ಳಿಯ ಡಾ.ಷಣ್ಮುಖಯ್ಯ ತೋಟದ ಅವರ ಅಭಿನಂದನಾ ಗ್ರಂಥ ಹಾಗೂ ಅಮೃತ ಘಳಿಗೆ ಕವನ ಸಂಕಲನ ಲೋಕಾರ್ಪಣೆಯ ಸಮಾರಂಭದಲ್ಲಿ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಜಂತಲಿ ಶಿರೂರು ಗ್ರಾಮದ ಜನಪದ ಕಲಾವಿದ ಗವಿಶಿದ್ಧಯ್ಯ ಜ ಹಳ್ಳಿಕೇರಿಮಠ ಅವರಿಗೆ 2024ನೇ ಸಾಲಿನ ಗಂಗಮ್ಮ ಅಡವಿಬಸಯ್ಯ ತೋಟದ ಸ್ಮಾರಕ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಇ ಸಂದರ್ಭದಲ್ಲಿ ಶ್ರೀ ಮ.ನಿ.ಪ್ರ .ಸ್ವ. ಜಗದ್ಗುರು ಅಭಿನವ ಗವಿಶಿದ್ಧೇಶ್ವರ ಮಹಾಸ್ವಾಮಿಗಳು ಸಂಸ್ಥಾನ ಶ್ರೀ ಗವಿಮಠ ಕೊಪ್ಪಳ,ಶ್ರೀ ಷ.ಬ್ರ.108 ಸಿದ್ಧೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಉಜೈಯನಿ ಶಾಖಾ ಹೀರೇಮಠ ಮೈನಹಳ್ಳಿ ,ಕೊಪ್ಪಳದ ಸಂಸದರಾದ ಕೆ.ರಾಜಶೇಖರ ಹಿಟ್ನಾಳ,ನಿವೃತ್ತ ಪ್ರಾಚಾರ್ಯರಾದ ಪ್ರೋ.ಎಮ್ ಎಮ್ ಕೊಟ್ರಯ್ಯ, ಉನ್ನತ ಶಿಕ್ಷಣ ಪರಿಷತ್ ನಿವೃತ್ತ ವಿಶೇಷ ಅಧಿಕಾರಿಗಳಾದ ಬೆಂಗಳೂರಿನ ಡಾ.ಎಮ್.ಜಯಪ್ಪ,ಹಿರಿಯ ಜನಪದ ಕಲಾವಿದರಾದ ಗುರುರಾಜ ಹೊಸಕೋಟೆ,ಕೊಪ್ಪಳದ ಹಿರಿಯ ಸಾಹಿತಿಗಳಾಗಿರುವ ಮಹಾಂತೇಶ ಮಲ್ಲನಗೌಡರ,ಸಿರಿಗನ್ನಡ ವೇದಿಕೆಯ ರಾಜ್ಯ ಅಧ್ಯಕ್ಷರಾದ ಜಿ.ಎಸ್.ಗೋನಾಳ,ಹಿರಿಯ ಚಲನಚಿತ್ರ ನಟಿ ಮಾಲತಿ ಶ್ರೀ ಮೈಸೂರು,ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಣಿ ಸಮಿತಿಯ ಸದಸ್ಯರಾದ ಎಮ್,ಸಾಧಿಕ ಅಲಿ,ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕೊಪ್ಪಳದ ಅಧ್ಯಕ್ಷರಾದ ಬಸವರಾಜ ಗುಡ್ಲಾನೂರು,ಕೊಪ್ಪಳ ಮಿಡಿಯಾ ಕ್ಲಬ್ ರವಿಂದ್ರ,
ಕವಿ ಬಿ,ಎನ್ ಹೊರಪೇಟಿ,ಉಪನ್ಯಾಸಕರಾದ ಡಾ.ಭಾಗ್ಯಜ್ಯೋತಿ,ಸಿರಿಗನ್ನಡ ವೇದಿಕೆಯ ಜಿಲ್ಲಾ ಅಧ್ಯಕ್ಷರಾದ ಮಂಜುನಾಥ ಚಿತ್ರಗಾರ ಸೇರಿದಂತೆ ಕವಿಗಳು ಕಲಾವಿದರು ಪಾಲ್ಗೊಂಡಿದ್ಧರು.