ಹಸಿರು ಬಳಿಯಲ್ಲಿ ಹೂ ಒಂದು
ಬೆಳೆದಿದೆ ಹೊಸ ಹುರುಪು ನೋಡು
ಒಂದೆರಡು ಬಣ್ಣ ನಿನ್ನ ಮೈಯಲ್ಲಿ ನೋಡು
ನಾರಿಯರ ಜಡೆಗೆ ಮಲ್ಲಿಗೆ ನೀ ನೋಡು
ಮನೆಯ ಹಿತ್ತಲದಲ್ಲಿ ಹೆಚ್ಚು ನೀನು
ಚೆಲುವೆರ ಅಂದದ ಜಡೆಗೆ ಹೆಚ್ಚು ನೀನು
ಸ್ವಲ್ಪ ನಾಚುವಾ ನಾರಿಯರ ಕುಸುಮಾವು
ಸೌಂದರ್ಯದ ಬಾಗಿಲು ತೆರೆಯುವ ಹೂವು
ನನ್ನ ಆಸೆ ಚಿಕ್ಕದು ನನ್ನವಳ ಆಸೆ ಹೆಚ್ಚು
ನಾಡಿಗೆ ನೀನ ನಡೆ ಊರೆಲ್ಲಾ ಹೂ ವನವು ಹೆಚ್ಚು
ಕಣ್ಣಿನ ರೆಪ್ಪೆವು ಬಡಿಯುತ್ತಿದೆ ಹೂವಿನ ನೋಟಕ್ಕೆ
ಕೈ ಬಿಸಿ ಕರದಿದೆ ಬಿಳಿನೇರಳೆಯ ಬಣ್ಣದ ನೋಟಕ್ಕೆ
ಕಾಡಿನಲ್ಲಿ ಬದುಕಲು ಸಾಧ್ಯವಿದೆ ನೀನು
ನನಗೆ ನಿನ್ನ ಬಿಟ್ಟು ಇರಲು ಸಾಧ್ಯವಿಲ್ಲ ನಿಜಕ್ಕೂ
ಗಿಡಗಳ ಬಡ್ಡಿಯಲ್ಲಿ ಬೆಳೆದು ಬದುಕಿ ನಿಜಕ್ಕೂ
ದೇವರ ಪೂಜೆಗೆ ನೀನೇ ಪುಣ್ಯ ನಿಜಕ್ಕೂ
-ಕು.ಮಹಾಂತೇಶ ಖೈನೂರ,ಸಾ:ಯಾತನೂರ