ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸುಂಕದಗದ್ದೆ ಶಾಲೆಗೆ ನಗು ಫೌಂಡೇಶನ್ ಕಡೆಯಿಂದ ಚಾಪೆ, ಸುಂದರ ಭಾರತ ಪ್ರತಿಷ್ಠಾನದಿಂದ ನೋಟ್ ಬುಕ್, ಹಿರೇಗದ್ದೆ ಶ್ರೀಧರ್ ರವರಿಂದ ಕಲಿಕಾ ಸಾಮಗ್ರಿಗಳು,ತಲಮಕ್ಕಿ ಶಾಲೆಯ ಶಿಕ್ಷಕರ ಬಳಗದಿಂದ ಟೀ -ಶರ್ಟ್ ಹಾಗೂ ಪ್ಯಾಂಟ್ ವಿತರಿಸಲಾಯಿತು. ಈ ಕಾರ್ಯಕ್ರಮವನ್ನು ಎಸ್. ಡಿ. ಎಂ. ಸಿ. ಅಧ್ಯಕ್ಷರಾದ ಸತೀಶ್ ರವರು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಎಸ್. ಡಿ.ಎಂ.ಸಿ.ಉಪಾಧ್ಯಕ್ಷರಾದ ಶ್ರೀಮತಿ ಮಮತ, ಗ್ರಾಮ ಪಂಚಾಯತ್ ಸದಸ್ಯರಾದ ಪವಿತ್ರ, ದಾನಿಗಳಾದ ಎಸ್. ಆರ್.ರಂಗನಾಥ್, ಗಿರೀಶ್ ನಾಯ್ಕ್ ಹಾಗೂ ಮುಖ್ಯಗುರುಗಳಾದ ಮಮತರವರು ಹಾಜರಿದ್ದರು.ಶಿಕ್ಷಕರಾದ ಸಿ.ಆರ್.ಸುರೇಶ್ ರವರು (ಚೌಡ್ಲಾಪುರ ಸೂರಿ)ಮಾತನಾಡಿ ದಾನಿಗಳ ಕಾರ್ಯವನ್ನು ಶ್ಲಾಘಿಸಿದರು. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮತ್ತಷ್ಟು ದಾನಿಗಳು ಕೈ ಜೋಡಿಸಲಿ ಎಂದು ಮನವಿ ಮಾಡಿದರು.
