ಚಿತ್ತಾಪುರ:-2024-25ರ ಬಜೆಟ್‌ನಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಗೆ ಸಾಕಷ್ಟು ಹಣಕಾಸು ಹಂಚಿಕೆ ಮೀಸಲಿಡಲು ಅಂಗನವಾಡಿಗಳನ್ನು ಬಲಪಡಿಸಲು ಮತ್ತು ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಶಾಸನಬದ್ಧ ಸೌಲಭ್ಯಗಳನ್ನು ಒದಗಿಸಬೇಕು ಹಾಗೂ ಇನ್ನಿತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ವತಿಯಿಂದ ತಹಶೀಲ್ದಾರ್ ಮೂಲಕ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಗೆ ಸಾಕಷ್ಟು ಹಣ ಮೀಸಲಿಡಬೇಕು ಅದಲ್ಲದೆ ಇನ್ನಿತರ ಬೇಡಿಕೆಗಳಾದ ,ಮುಂಬರುವ ಬಜೆಟ್ ನಲ್ಲಿ ಐಸಿಡಿಎಸ್‌ಗೆ ಬಜೆಟ್ ಹಂಚಿಕೆಯನ್ನು ಹೆಚ್ಚಿಸಬೇಕು,ಸಂಪೂರ್ಣವಾಗಿ ಮೂಲಭೂತ ಸೌಕರ್ಯ ಮತ್ತು ಉತ್ತಮ ಗುಣಮಟ್ಟದ ಆಹಾರದೊಂದಿಗೆ ICDS ಯೋಜನೆಯನ್ನು ಬಲಪಡಿಸಿ. ಸಾಕಷ್ಟು ಸಂಪನ್ಮೂಲಗಳೊಂದಿಗೆ ಅಂಗನವಾಡಿ ಕೇಂದ್ರಗಳನ್ನು ಪೂರ್ಣ ಸಮಯದ ಅಂಗನವಾಡಿಗಳಾಗಿ ಜೊತೆಜೊತೆಗೆ ಪಾಲನಾ ಕೇಂದ್ರ (ಕೆಜ್) ಆಗಿ ಅಭಿವೃದ್ಧಿಪಡಿಸಬೇಕು, ಅಂಗನವಾಡಿಗಳಲ್ಲಿಯೇ ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣ (ECCE) / ಶಾಲಾಪೂರ್ವ ಶಿಕ್ಷಣ ಘಟಕಾಂಶಗಳನ್ನು ಬಲಪಡಿಸಿ. ECCE/ ಶಾಲಾಪೂರ್ವ ಶಿಕ್ಷಣವು ಔಪಚಾರಿಕ ಶಿಕ್ಷಣ ವ್ಯವಸ್ಥೆಯ ಭಾಗವಾಗಿರಲೇಬಾರದು. ಅಂಗನವಾಡಿ ಕೇಂದ್ರಗಳನ್ನು ನೋಡಲ್ ಏಜೆನ್ಸಿಗಳಾಗಿ ಜಾರಿಗೊಳಿಸುವುದರ ಜೊತೆಗೆ ECCE ಹಕ್ಕಾಗಬೇಕು, ಗ್ರೇಡ್ III ಮತ್ತು ಗ್ರೇಡ್ IV ಸರ್ಕಾರಿ ನೌಕರರಂತ ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕರನ್ನು ಖಾಯಂ ಮಾಡಿ ಖಾಯಮಾತಿ ವಿಷಯ, 45 ನೇ ILC ಶಿಫಾರಸಿನ ಪ್ರಕಾರ ತಿಂಗಳಿಗೆ ಕನಿಷ್ಠ ವೇತನ ರೂ. 26000,ಮಾಸಿಕ ಪಿಂಚಣಿ ರೂ. 10000, ಪಿಎಫ್, ಇಎಸ್‌ಐ ಇತ್ಯಾದಿ ಕೂಡಲೇ ತೀರ್ಮಾನಿಸಿ ಜಾರಿ ಮಾಡಿ. ದೇಶಾದ್ಯಂತ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಏಕರೂಪದ ಸೇವಾ ಷರತ್ತುಗಳನ್ನು ಜಾರಿಗೆ ತನ್ನಿ. ಎಲ್ಲಾ ಯೋಜನಾ ಕಾರ್ಮಿಕರಿಗೆ ಅನ್ವಯವಾಗುವಂತೆ ಕೂಡಲೇ ವೇತನ ಆಯೋಗ ರಚನೆ ಮಾಡಬೇಕು,ಗ್ರಾಚ್ಯುಟಿ ಕುರಿತು ಮಾನ್ಯ ಸುಪ್ರೀಂ ಕೋರ್ಟ್ ಆದೇಶವನ್ನು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ತಕ್ಷಣವೇ ಜಾರಿಗೊಳಿಸಬೇಕು,ಅಂಗನವಾಡಿ ನೌಕರರು ಮತ್ತು ಸಹಾಯಕಿಯರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಮತ್ತು ಕಾರ್ಮಿಕ ಸಂಘಟನೆ ಕಟ್ಟಿಕೊಳ್ಳುವ ಹಕ್ಕುಗಳನ್ನು ಗುರುತಿಸಿ ಎಲ್ಲಾ ಹಂತಗಳಲ್ಲಿ ದ್ವಿಪಕ್ಷೀಯ ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸಬೇಕು,ಯಾವುದೇ ರೂಪದಲ್ಲಿ ICDS ಅನ್ನು ಖಾಸಗೀಕರಣಗೊಳಿಸಬಾರದು; ಸಾರ್ವಜನಿಕ ವಲಯದ ಉದ್ಯಮಗಳು ಮತ್ತು ಸೇವೆಗಳನ್ನೂ ಕೂಡಾ ಖಾಸಗೀಕರಣ ಮಾಡಬಾರದು,ಶ್ರಮಿಕರಿಗೆ ಮಾರಕವಾಗಿರುವ ಕಾರ್ಮಿಕ ಸಂಹಿತೆಗಳನ್ನು ತೆಗೆಯಬೇಕು ಎಂಬ ಬೇಡಿಕೆಗಳನ್ನು ಉಲ್ಲೇಖಿಸಿದ ಮನವಿ ಪತ್ರವನ್ನು ಉಪ ತಹಶಿಲ್ದಾರ ರಾಜಕುಮಾರ ಅವರ ಮುಖಾಂತರ ಕೇಂದ್ರ ಹಣಕಾಸು ಸಚಿವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ತಾಲೂಕ ಅಧ್ಯಕ್ಷೆ ದೇವಮ್ಮ ಅನ್ನದಾನಿ,ಕಾರ್ಯದರ್ಶಿ ರಾಧಾ ಲಕ್ಕನೋರ್, ಸಂಘದ ಪದಾಧಾಕಾರಿಗಳಾದ ಅಕ್ಕಮಹಾದೇವಿ ಬೃಂಗಿಮಠ್,ರಾಧಾಬಾಯಿ ದಂಡೋತಿ,ಶಾಂತಾ,ಕಾಶಮ್ಮ,ನಿರ್ಮಲಾ,ದೀಪಿಕಾ,ಸುಮಿತ್ರಾ,ಭಾಗಮ್ಮ,ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರಾದ ಶಾಂತಾಬಾಯಿ ನಾಟಿಕರ್, ಲಕ್ಷ್ಮಿ ನಾಟಿಕಾರ್,ವಿದ್ಯಾನಿಧಿ ಕವಡೆ,ದೇವಿಂದ್ರಮ್ಮ ಸೇರಿದಂತೆ ಅನೇಕರು ಇದ್ದರು.
ವರದಿ. ಮೊಹಮ್ಮದ್ ಅಲ್ಲಿ ,ಚಿತ್ತಾಪುರ್