ರಾಯಚೂರು/ಸಿರವಾರ: ಈ ಹಿಂದೆ ಮೊಹರಮ್ ಹಬ್ಬದಲ್ಲಿ ಗಲಾಟೆ, ಮಾರಣಾಂತಿಕ ಹಲ್ಲೆಗಳು ಜರುಗಿದ ಕಾರಣಕ್ಕೆ ಅಲಾಯಿ ಕುಣಿತ ನಿಷೇಧಿಸಲಾಗಿದೆ ಉಳಿದಂತೆ ದೇವರುಗಳ ಪೂಜೆ, ಮೆರವಣೆಗೆ ಆಚರಣೆಗೆ ಯಾವುದೇ ಅಡ್ಡಿ ಇಲ್ಲ ಎಂದು ಸಿಪಿಐ ಶಶಿಕಾಂತ ಅವರು ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಜರುಗಿದ ಮೊಹರಮ್ ಶಾಂತಿ ಸಭೆಯನ್ನುದ್ಧೇಶಿಸಿ ಅವರು ಮಾತನಾಡಿದರು, ಸಭೆಯಲ್ಲಿ ಸಾರ್ವಜನಿಕರು ಹೇಗಾದರೂ ಮಾಡಿ ಅಲಾಯಿ ಕುಣಿತ ಪ್ರಾರಂಭಿಸಬೇಕು ಯಾವುದೇ ಗಲಾಟೆಗಳ ನಡೆಯದಂತೆ ಪಟ್ಟದ ಎಲ್ಲಾ ವರ್ಗಗಳ ಮುಖಂಡರು ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಕೆಲವರು ಒತ್ತಾಯಿಸಿದರು ಆಗ ಸಿಪಿಐ ಶಶಿಕಾಂತ ಅವರು ಪ್ರಕರಣಗಳು ಇನ್ನೂ ಕೋರ್ಟ್ ನಲ್ಲಿ ನಡೆಯುತ್ತಿರುವುದರಿಂದ ಅನುಮತಿ ಕೊಡಲು ಸಾಧ್ಯವಿಲ್ಲ ಮುಂದೆ ಪ್ರಕರಣಗಳು ಮುಕ್ತಾಯಗೊಂಡಾಗ ಕೆಲ ವರ್ಷಗಳವರೆಗೆ ಕಾದರೂ ಅದರ ಜವಾಬ್ದಾರಿ ತೆಗೆದುಕೊಳ್ಳುವವರು ಬೇಕು ಸಧ್ಯಕ್ಕೆ ನೀವು ಕೇಳಿದಂತೆ ಅಲಾಯಿ ಕುಣಿತ ನಡೆಯೊಲ್ಲ ಹಬ್ಬ ಆಚರಣೆಗೆ ಯಾವುದೇ ತೊಂದರೆಯೂ ಇಲ್ಲ ಆದಾಗ್ಯೂ ಯಾರಾದರೂ ಅಲಾಯಿ ಕುಣಿಯುವುದು ಕಂಡುಬಂದಲ್ಲಿ ನಿರ್ಧಾಕ್ಷಿಣ್ಯವಾಗಿ ಅವರ ಮೇಲೆ ಕ್ರಮಕೈಗೊಳ್ಳುವುದಾಗಿ ಎಚ್ಚರಿಸಿ ಮೊಹರಮ್ ಹಬ್ಬ ಶಾಂತಿಯುವಾಗಿ ಆಚರಣೆಗೆ ಎಲ್ಲಾರೂ ಸಹಕರಿಸಬೇಕೆಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಪಿ.ಎಸ್.ಐ ಗುರುಚಂದ್ರ ಯಾದವ್, ಮುಸ್ಲಿಮ್ ಧರ್ಮ ಗುರುಗಳಾದ ಮಂಜೂರ್ ಹಸೇನ್ ಖಾಜಿ ನವಾಜ್ ಖಾಜಿ ಸೇರಿದಂತೆ ಎಲ್ಲಾ ಸಮುದಾಯಗಳ ಮುಖಂಡರು ಇದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.