ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ನಗರದಲ್ಲಿ ದಿನದಿಂದ ದಿನಕ್ಕೆ ಜನಸಂದಣಿ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ನಿಲುಗಡೆ ಸೇರಿದಂತೆ ಪಾದಚಾರಿ ಮಾರ್ಗಗಳಲ್ಲಿ ಸಾರ್ವಜನಿಕರ ಸಂಚಾರಕ್ಕೆ ರಸ್ತೆಗಳು ಮತ್ತು ಪುಟ್ ಪಾತ್ ಗಳು ಮುಕ್ತವಾಗಿಲ್ಲ ಕಾರಣ ಬೀದಿಬದಿ ರಸ್ತೆ ವ್ಯಾಪಾರಿಗಳು ಪುಟ್ ಪಾತ್ ಗಳನ್ನೂ ಅತಿಕ್ರಮಿಸಿ ಹೋಟೆಲ್, ಎಗ್ ರೈಸ್ ಶಾಪ್, ಟೀ ಶಾಪ್, ಪಾನ್ ಶಾಪ್ ಗಳನ್ನು ನಡೆಸುತ್ತಿದ್ದು , ಇದನ್ನು ಪ್ರಶ್ನಿಸಿ ಕ್ರಮ ಕೈಗೊಳ್ಳಬೇಕಿದ್ದ ಪಟ್ಟಣ ಪಂಚಾಯ್ತಿ ಮುಂಡಗೋಡ ಸಿಬ್ಬಂದಿಗಳು ಮತ್ತು ಅಧಿಕಾರಿಗಳು ಕೆಲವೊಮ್ಮೆ ತೆರವು ಮಾಡುವ ರೀತಿ ಕ್ರಮ ಕೈಗೊಂಡು ಮತ್ತೆ ಪ್ರಭಾವಿಗಳ ಫೋನ್ ಬಂದಾಗ ಮತ್ತೆ ಪುಟ್ ಪಾತ್ ವ್ಯಾಪಾರಕ್ಕೆ ಅವಕಾಶ ನೀಡುತ್ತಾರೆ ಎಂದು ಸ್ಥಳೀಯ ರಾದ ಸಂತೋಷ್ ಮಾಹಿತಿ ನೀಡಿದರು. ಸಾರ್ವಜನಿಕರು ರಸ್ತೆ ಮೇಲೆ ಸಂಚಾರ ಮಾಡಬೇಕೆಂದರೆ ಅಪಘಾತದ ಭೀತಿ ಕೂಡಾ ಇದೆ, ಸೂಕ್ತ ಪಾರ್ಕಿಂಗ್ ನಿಯಮ ಗಳಿಲ್ಲದೆ ಶಿವಾಜಿ ಸರ್ಕಲ್, ಬಸ್ ನಿಲ್ದಾಣ, ಹಳೆ ತಹಶೀಲ್ದಾರ್ ಕಚೇರಿ, ಪಟ್ಟಣ ಪಂಚಾಯ್ತಿ ಸೇರಿದಂತೆ ಎಲ್ಲಿ ಬೇಕೆಂದರಲ್ಲಿ ವಾಹನಗಳನ್ನು ಅವೈಜ್ಞಾನಿಕವಾಗಿ ನಿಲ್ಲಿಸಲಾಗುತ್ತಿದೆ. ಕಾರಣ ಕೆಲವೊಮ್ಮೆ ನಗರದ ಹೃದಯ ಭಾಗದಲ್ಲಿ ಅಪಘಾತ ಗಳಾಗಿ ವಾಹನ ಸವಾರರಿಗೆ ಪೆಟ್ಟಾಗಿರುವ ಘಟನೆ ಗಳು ನಡೆದಿವೆ. ಮುಂಡಗೋಡ ನಗರದ ಜೆ ಎಂ ಎಫ್ ಸಿ ಕೋರ್ಟ್ ನ ಮುಂಭಾಗ ಮತ್ತು ಶಿವಾಜಿ ವೃತ್ತದಲ್ಲಿ ಹೂವಿನ ವ್ಯಾಪಾರಿಗಳು, ಬಾಳೆಹಣ್ಣು ವ್ಯಾಪಾರಸ್ಥರು ಸಾಲು ಸಾಲಾಗಿ ಅಂಗಡಿ ಹಾಕಿಕೊಳ್ಳುತ್ತಾರೆ ಮತ್ತು ವ್ಯಾಪಾರ ಮುಗಿದ ಬಳಿಕ ಹೂವು, ಕೊಳೆತ ಬಾಳೆಹಣ್ಣು ಸೇರಿದಂತೆ ತ್ಯಾಜ್ಯವನ್ನು ಶಿವಾಜಿ ಪ್ರತಿಮೆಯ ಮುಂದೆ ಹಾಕಿ,ಸ್ವಚ್ಚವಾಗಿರಬೇಕಿದ್ದ ನಗರದ ಹೃದಯ ಭಾಗವನ್ನೂ ಕಸದ ರಾಶಿ ಮಾಡಿ ,ಶಿವಾಜಿ ವೃತ್ತದಲಿ ನೈರ್ಮಲ್ಯ ಕಾಪಾಡುತ್ತಿಲ್ಲ ಎಂದು ಬೆಳಿಗ್ಗೆ ವಾಯು ವಿಹಾರಕ್ಕೆ ತೆರಳುವ ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದ ಕಾರಣ ಶೀಘ್ರವೇ ಈ ಬಗ್ಗೆ ಪಟ್ಟಣ ಪಂಚಾಯ್ತಿ ಮುಂಡಗೋಡ ಅಧಿಕಾರಿಗಳು ಕ್ರಮ ಕೈಗೊಂಡು ಬೀದಿ ಬದಿ ರಸ್ತೆ ವ್ಯಾಪಾರಸ್ಥರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಿ ನಗರದ ಪುಟ್ ಪಾತ್ ಅನ್ನು ಅತಿಕ್ರಮಣ ಮುಕ್ತ ಮಾಡಬೇಕೆಂದು ಸಾರ್ವಜನಿಕರು ಒತ್ತಾಯ ಮಾಡುತ್ತಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.