ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ಪಟ್ಟಣದಲ್ಲಿ ಸರ್ಕಾರಿ ಆಸ್ಪತ್ರೆಯ ಎದುರು ಲಕ್ಷಾಂತರ ರೂಗಳನ್ನು ಖರ್ಚು ಮಾಡಿ ನಿರ್ಮಾಣ ಮಾಡಿರುವ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಭವನ ಅವೈಜ್ಞಾನಿಕವಾಗಿದೆ ಎಂದು ರುದ್ರೇಶ್ ದಿಡಗೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿಎಸ್ಎಸ್ ಇವರು ಆರೋಪ ಮಾಡಿದ್ದಾರೆ.
ಈ ಭವನವು ಮುಖ್ಯ ರಸ್ತೆಯ ಪಕ್ಕದಲ್ಲಿ ನಿರ್ಮಾಣ ಮಾಡಿದ್ದಾರೆ ಆದರೆ ಈ ಭವನ ರಸ್ತೆಯ ಮಟ್ಟಕ್ಕಿಂತ ತೆಗ್ಗು ಪ್ರದೇಶದಲ್ಲಿ ನಿರ್ಮಾಣವಾಗಿದೆ ಅಂದು ನಿರ್ಮಾಣ ಮಾಡುವಾಗ ರಸ್ತೆಯ ಮಟ್ಟಕ್ಕೆ ಎತ್ತರವಾಗಿ ಅಡಿಪಾಯ ಮಾಡಬಹುದಿತ್ತು ಆದರೆ ಆ ರೀತಿ ನಿರ್ಮಾಣ ಮಾಡದೆ ಇರುವುದು ಈ ದುರವಸ್ಥೆಗೆ ಕಾರಣವಾಗಿದೆ ರಸ್ತೆಯ ಪಕ್ಕದಲ್ಲಿರುವ ಕಾಲುವೆಯ ಕೊಳಚೆ ನೀರು,ಭವನದ ಎದುರು ಹರಿದು ಬಂದು ಭವನದ ಪಕ್ಕ ನಿಲ್ಲುತ್ತದೆ ಅದಲ್ಲದೇ ಈ ಭವನವು ತೆಗ್ಗು ಪ್ರದೇಶದಲ್ಲಿ ಇರುವುದರಿಂದ ರಸ್ತೆಯಿಂದ ಹರಿದು ಬರುವ ನೀರು ಭವನದ ಕಡೆ ಹರಿದು ಬರುತ್ತದೆ ಆದ್ದರಿಂದ ಮುಂದಿನ ದಿನಗಳಲ್ಲಿ ಕಟ್ಟಡಕ್ಕೆ ತೊಂದರೆ ಆಗುತ್ತದೆ ಲಕ್ಷಾಂತರ ರೂಗಳನ್ನು ಖರ್ಚು ಮಾಡಿ ನಿರ್ಮಾಣ ಮಾಡಿರುವ ಈ ಭವನ ಸಾರ್ವಜನಿಕ ಉಪಯೋಗಕ್ಕೆ ಬಾರದೆ ಹೋದರೆ ಸರ್ಕಾರದ ಹಣ ವ್ಯರ್ಥವಾಗುತ್ತದೆ ಆದ್ದರಿಂದ ತಾಲೂಕ ಆಡಳಿತ ಇತ್ತ ಕಡೆ ಗಮನಹರಿಸಿ ಸೂಕ್ತವಾದ ಕ್ರಮವನ್ನು ಕೈಗೊಳ್ಳಬೇಕು ಇಲ್ಲವಾದರೆ ಮುಂದೊಂದು ದಿನ ಸಂಬಂಧಪಟ್ಟ ಇಲಾಖೆಯ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಹೇಳಿದರು.
ವರದಿ-ಪ್ರಭಾಕರ ಡಿ.ಎಂ