ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದ 8,12,19 ಈ ಬಡಾವಣೆಗಳಲ್ಲಿ ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆಯ ನಿಧಿಯ ಅನುದಾನದಲ್ಲಿ ಸುಮಾರು 1.50 ಲಕ್ಷ ವೆಚ್ಚದ ಸಿಸಿ ರಸ್ತೆ ನಿರ್ಮಾಣಕ್ಕೆ ಶಾಸಕ ಹೆಚ್.ವಿ.ವೆಂಕಟೇಶ್ ಭೂಮಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು.
ನಂತರ ಸುಮಾರು ರೂ. 2.50/-ಕೋಟಿ ವೆಚ್ಚದಲ್ಲಿ ಪಟ್ಟಣದ ಗಂಗಮ್ಮ ದೇವಸ್ಥಾನ ಬಡವಾಣೆಯಲ್ಲಿ ಸಜ್ಜಿತವಾಗಿ ನಿರ್ಮಾಣವಾಗಿರುವ ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ಕಟ್ಟಡವನ್ನು ಮಾಜಿ ಸಚಿವ ವೆಂಕಟರಮಣಪ್ಪ ಹಾಗೂ ಶಾಸಕರಾದ ಹೆಚ್. ವಿ ವೆಂಕಟೇಶ್ ಉದ್ಘಾಟನೆಗೊಳಿಸಿ ಲೋಕಾರ್ಪಣೆ ಮಾಡಿದರು.
ಶಾಸಕರಾದ ಹೆಚ್.ವಿ.ವೆಂಕಟೇಶ್ ಮಾತನಾಡಿ ಹಂತ ಹಂತವಾಗಿ ಉದ್ಘಾಟನೆಗೆ ರೆಡಿಯಾದಂತಹ ಎಲ್ಲಾ ಕಾಮಗಾರಿಗಳನ್ನು ಬೇಗನೆ ಲೋಕಾರ್ಪಣೆ ಮಾಡುತ್ತೇವೆ ಅದರ ಜೊತೆಗೆ ಇಂದು ಕೆಂಚಮನಹಳ್ಳಿ ಗೇಟ್ ಬಳಿ ಹೋಗಿ ತುಂಗಭದ್ರಾ ಯೋಜನೆಯ ಕುಡಿಯೋ ನೀರು ಪ್ರಾರಂಭ ಮಾಡೋಣ ಎಂದರು.
ಈ ಸಂದರ್ಭದಲ್ಲಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೇಶ್ ಬಾಬು, ಸಮಾಜ ಸೇವಕ ಬತ್ತೀನೇನಿ ನಾನಿ, ಪುರಸಭೆ ಮಾಜಿ ಅಧ್ಯಕ್ಷ ಶಂಕರ್ ರೆಡ್ಡಿ, ಪುರಸಭೆ ಸದಸ್ಯರುಗಳಾದ ರಾಜೇಶ್,ರವಿ,ವೇಲುರಾಜು,ಗೊರ್ತಿ ನಾಗರಾಜ್, ಗುತ್ತಿಗೆದಾರ ಆರ್ ಎ ಹನುಮಂತರಾಯಪ್ಪ,ಸಾಗರ್, ರೈತ ಸಂಘದ ಅಧ್ಯಕ್ಷ ನರಸಿಂಹ ರೆಡ್ಡಿ ,ಗೊರ್ತಿ ನಾಗರಾಜ್ ,ರೈತ ಸಂಘ ಅಧ್ಯಕ್ಷ ಜಿ ನರಸಿಂಹ ರೆಡ್ಡಿ ಸೇರಿದಂತೆ ಮುಖಂಡರು ಹಾಜರಿದ್ದರು.