ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಚಿಕ್ಕಮಾಲಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉದ್ದನೂರು ಗ್ರಾಮ ಎನ್. ಆರ್ .ಜಿ ಕೆರೆ ಕಾಮಗಾರಿ ಹಾಗೂ ಚರಂಡಿ ಹೂಳೆತ್ತುವ ಕಾಮಗಾರಿಯು ಸರಿಯಾದ ರೀತಿಯಲ್ಲಿ ಆಗಿಲ್ಲವೆಂದು ಗ್ರಾಮದ ಕೆಲ ಮುಖಂಡರು ಆಕ್ರೋಶ ವ್ಯಕ್ತ ಪಡಿಸುತ್ತಾರೆ ಹಾಗೂ ಉದ್ದನೂರು ಕೆರೆಯ ಕಾಮಗಾರಿ ಅರ್ಧ ಭಾಗದಷ್ಟು ಕಾಮಗಾರಿ ಆಗಿರುತ್ತದೆ ಅರ್ಧ ಭಾಗ ಅಪೂರ್ಣ ರೀತಿಯಲ್ಲಿ ಬಿದ್ದಿದೆ ಹಾಗೂ ಕೆರೆಗಳು ಸಹ ಸರಿಯಾದ ರೀತಿಯಲ್ಲಿ ಆಗಿಲ್ಲ ಗಿಡ ಗಂಟೆಗಳು ಬೆಳೆದು ನಿಂತಿದೆ ಈ ವಿಚಾರವಾಗಿ ಚಿಕ್ಕ ಮಾಲಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಹೇಳಿದರೆ ಸರಿಯಾದ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ಗ್ರಾಮದ ಮುಖಂಡರು ಹಾಗೂ ಯುವಕರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ,ಹಾಗೆಯೇ ಗ್ರಾಮದ ಹೊಸ ಬಡಾವಣೆಗೆ ಎರಡು ತೊಂಬೆಗಳ ಅವಶ್ಯಕತೆ ಇದೆ ಅದನ್ನು ಸಹ ಮಾಡಿ ಕೊಡಬೇಕು ಎಂದು ಬಡಾವಣೆಯ ಮಹಿಳಾ ಸದಸ್ಯರು ಸಹ ಕೇಳಿ ಕೊಳ್ಳುತ್ತಿದ್ದಾರೆ.
ಆದ್ದರಿಂದ ಮೇಲಧಿಕಾರಿ ಆದಷ್ಟು ಬೇಗ ಪರಿಶೀಲಿಸಿ ಗ್ರಾಮಕ್ಕೆ ಸರಿಯಾದ ರೀತಿಯಲ್ಲಿ ಸ್ವಚ್ಚತೆ ಕೆರೆ ಕಟ್ಟೆ ಗಳ ಪೂರ್ಣ ಕಾಮಗಾರಿ ಮಾಡಿಸಿ ಕೊಡಬೇಕೆಂದು ಉದ್ದನೂರು ಗ್ರಾಮದ ಕೆಲ ಮುಖಂಡರು ಹಾಗೂ ಯುವಕರು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಮೂರ್ತಿಉದ್ದನೂರು,ಕುಮಾರ ಎಂ,ಸಂಪತ್,ಅಜಿತ್ ಇನ್ನಿತರ ಗ್ರಾಮಸ್ಥರು ಇದ್ದರು
ವರದಿ:ಉಸ್ಮಾನ್ ಖಾನ್