ಯಾದಗಿರಿ :ವಿಶ್ವ ಜನಸಂಖ್ಯಾ ದಿನವು ವಾರ್ಷಿಕ ಕಾರ್ಯಕ್ರಮವಾಗಿದೆ, ಇದನ್ನು ಪ್ರತಿ ವರ್ಷ ಜುಲೈ 11 ರಂದು ಆಚರಿಸಲಾಗುತ್ತದೆ, ಇದು ಜಾಗತಿಕ ಜನಸಂಖ್ಯೆಯ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತದೆ, ಜನಸಂಖ್ಯೆಯ ಹೆಚ್ಚಳಕ್ಕೆ ಕಾರಣವಾದ ಇತರೆ ಕೆಲವು ಕಾರಣ ಅವಿಭಕ್ತ ಕುಟುಂಬ ವ್ಯವಸ್ಥೆ, ಕುಟುಂಬಗಳಲ್ಲಿ ಯುವ ದಂಪತಿಗಳು ತಮ್ಮ ಮಕ್ಕಳನ್ನು ಬೆಳೆಸುವ ಜವಾಬ್ದಾರಿಯ ಕೊರತೆ, ಮನರಂಜನಾ ಸೌಲಭ್ಯ ಕೊರತೆ, ಸಂತಾನಹರಣದ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ಅಥವಾ ತಪ್ಪು ಮಾಹಿತಿಯ ಕೊರತೆ, ಅನಕ್ಷರತೆ, ಬಡತನ, ನಿರುದ್ಯೊಗ, ಬಾಲ್ಯ ವಿವಾಹ ಇನ್ನಿತರೆ ಕಾರಣಗಳಿಂದ ಭಾರತ ದೇಶದಲ್ಲಿ ಜನ ಸಂಖ್ಯೆ ಹೆಚ್ಚಾಗುತ್ತಿದೆ, ಜನ ಸಂಖ್ಯೆ ಹೆಚ್ಚಿದಂತೆ ಸಮಸ್ಯೆಗಳು ಹೆಚ್ಚಾಗುತ್ತವೆ. ಆಹಾರದ ಸಮಸ್ಯೆ, ನೀರಿನ ಸಮಸ್ಯೆ, ಬಟ್ಟೆಯ ಸಮಸ್ಯೆ, ರೋಗ ಹರುಡುವಿಕೆ ಹೀಗೆ ಹಲವಾರು ಪರಿಣಾಮ ಉದ್ದವಿಸುತ್ತದೆ. ಜನ ಸಂಖ್ಯೆ ನಿಯಂತ್ರಣಕ್ಕೆ ಸಮುದಾಯದ ಸಹಕಾರದಿಂದ ಮಾತ್ರ ಸಾದ್ಯವಿದೆ. ಒಂದು ನಿಟ್ಟಿನಲ್ಲಿ ಯುವ ಸಮುದಾಯ ಎಚ್ಚತ್ತುಕೊಳ್ಳಬೇಕು ಎಂದು ಯಾದಗಿರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಪ್ರಭುಲಿಂಗ ಮಾನಕರ್ ಕರೆ ನೀಡಿದರು.
ಜಿಲ್ಲಾ ಅಡಳಿತ ಜಿಲ್ಲಾ ಪಂಚಾಯತ್, ಯಾದಗಿರಿ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ವತಿಯಿಂದ ಸರಕಾರಿ ಮಹಿಳಾ ಪದವಿ ಕಾಲೇಜ್ ಹಮ್ಮಿಕೊಂಡಿರುವ ವಿಶ್ವ ಜನ ಸಂಖ್ಯಾ ದಿನಾಚಾರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ ಒಂದು ಅಥವಾ ಎರಡು ಮಕ್ಕಳು ಸಾಕು, ಚಿಕ್ಕ ಕುಟುಂಬ ಚೂಕ್ಕ ಕುಟುಂಬ, ಆರೋಗ್ಯವಂತ ಕುಟುಂಬ, ಅಪಾರ ಪರಿವಾರ ದೇಶಕ್ಕೆ ಬಲುವಾರ, ಶಿಕ್ಷಣ ಮೊದಲು ಮದುವೆ ನಂತರ, ಅತಿ ಸಂತಾನ ಜೀವನಬಾರ, ಮಿತ ಸಂತಾನ ಹೂವಿನ ಹಾರ ಎಂದು ತಿಳಿಸಿದರು.
ಯಾದಗಿರಿ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಜ್ಯೋತಿ ಡಿ.ಕಟ್ಟಿಮನಿ ಅವರು ಮಾತನಾಡಿ, 2024ರ ಜುಲೈ 11 ರಂದು ವಿಶ್ವ ಜನ ಸಂಖ್ಯಾ ದಿನಾಚರಣೆ ಇರುವ ಹಿನ್ನೆಲೆ ಜಾಗೃತಿ ಮೂಡಿಸಲಾಗುತ್ತಿದ್ದು, ವಿಶ್ವದ ಜನ ಸಂಖ್ಯೆ ದಿನೆ ಹೆಚ್ಚಾಗುತ್ತಿದ್ದು, ಅದರಲ್ಲಿ ಭಾರತ ದೇಶದ ಜನ ಸಂಖ್ಯೆ ವಿಪರೀತವಾಗಿ ಏರುತ್ತಿರುವುದು ಅತಂಕದ ವಿಷಯವಾಗಿದೆ ಜನ ಸಂಖ್ಯೆ ನಿಯಂತ್ರಣ ಅನಿವಾರ್ಯ ಆಗಿದೆ. ಸಾರ್ವಜನಿಕರು ಕುಟುಂಬ ಕಲ್ಯಾಣ ವಿಧಾನಗಳಾದ ತಾತ್ಕಾಲಿಕ, ಖಾಯಂ ವಿಧಾನ ಬಳಿಸಿಕೊಂಡು ಆರೋಗ್ಯ ಇಲಾಖೆಯ ಅಡಿಯಲ್ಲಿ ಬರುವ ಕುಟುಂಬ ಕಲ್ಯಾಣ ಸೇವೆ, ಸೌಲಭ್ಯ ಪಡೆದುಕೊಂಡು ಜನ ಸಂಖ್ಯೆ ನಿಯಂತ್ರಣ, ಮಕ್ಕಳ ನಡುವಿನ ಅಂತರ ಕಾಯ್ದಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವರ್ಷದ ಘೋಷವಾಕ್ಯ ಅಭಿವೃದ್ದಿ ಹೊಂದಿದ ಭಾರತದ ಹೊಸ ಗುರುತಿಗಾಗಿ ಕುಟುಂಬ ಯೋಜನೆ ಅಳವಡಿಕೆ ಪ್ರತಿ ದಂಪತಿಗಳ ಹೆಮ್ಮೆ ಇರುತ್ತದೆ. ಬಾಲ್ಯ ವಿವಾಹ ಮಾಡಿಕೊಳ್ಳದಂತೆ ವಿದ್ಯಾರ್ಥಿನಿಯರಿಗೆ ಕರೆ ನೀಡಿದ್ದರು.
ಯಾದಗಿರಿ ತಾಲೂಕಾ ಆರೋಗ್ಯ ಅಧಿಕಾರಿ ಡಾ.ಹನಮಂತ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಜನ ಸಂಖ್ಯೆ ನಿಯಂತ್ರಣ ಸಮುದಾಯ ಸಹಕಾರ ಮುಖ್ಯಾವಾಗಿ ಜನ ಸಂಖ್ಯೆ ನಿಯಂತ್ರಣ ನಮ್ಮ ಎಲ್ಲರ ಜವಾಬ್ದಾರಿ ಆಗಿದೆ. ಜುಲೈ ತಿಂಗಳಲ್ಲಿ ಡೆಂಗ್ಯೂ ಮಾಸಾಚರಣೆ ಕಾರ್ಯಕ್ರಮ ಇರುತ್ತೆ ಮಳೆಗಾಲ ಆರಂಭವಾಗಿರುವುದರಿಂದ ಶುದ್ದ ನೀರಿನಲ್ಲಿ ಈಡಿಸ್ ಇಜಿಪ್ತೆ ಜಾತಿಯ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುತ್ತವೆ ಹಾಗೂ ಸೋಂಕಿತ ಸೊಳ್ಳೆಗಳ ಕಚ್ಚುವುದರಿಂದ ರೋಗ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಆದ್ದರಿಂದ ಮನೆಯ ಒಳಗೆ ಮತ್ತು ಹೊರಗೆ ಸ್ವಚ್ಛತೆ ಕಾಪಡಿಕೊಳ್ಳುವಂತೆ, ನೀರು ನಿಲ್ಲದಂತೆ, ಲಾರ್ವಾಗಳು ಉತ್ಪತ್ತಿ ಆಗದಂತೆ, ನೋಡಿಕೊಳ್ಳುವುದು. ವಿಶ್ರಾಂತಿ ಪಡೆಯುವಾಗ ತಪ್ಪದೆ ಸೊಳ್ಳೆ ಪರದೆ ಹಾಗೂ ಸೊಳ್ಳೆ ನಿರೋದಕ ಬಳಸುವಂತೆ ಹಾಗೂ ಯಾವುದೇ ಜ್ವರ ವಿರಲಿ ಸಮೀಪದ ಆಸ್ಪತ್ರೆಗೆ ಹೋಗಿ ರಕ್ತ ಪರೀಕ್ಷೆ ಮಾಡಿಸಿಬೇಕು, ಚಿಕಿತ್ಸೆ ಪಡೆಯಬೇಕೆಂದು ತಿಳಿಸಿದರು.
ಪ್ರಾಂಶುಪಾಲರಾದ ಡಾ.ಹರೀಶ್ ರಾಥೊಡ್ ಅವರು ಮಾತನಾಡಿ ಜನಸಂಖ್ಯೆ ನಿಯಂತ್ರಣ ನಮ್ಮೆಲ್ಲರ ಜವಾಬ್ದಾರಿಯಾಗಿದ್ದು ಸುಖ, ಸಂತೋಷ, ನೆಮ್ಮದಿ, ಆರೋಗ್ಯಯುತ ಜೀವನ ನಡೆಸಬೇಕಾದರೇ ಜನಸಂಖ್ಯಾ ನಿಯಂತ್ರಣ ಅನಿವಾರ್ಯವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮ ಕಾಲೇಜಿನ ವಿದ್ಯಾರ್ಥಿನಿಯರು ನಿರೂಪಣೆ, ಸ್ವಾಗತ, ವಂದನಾರ್ಪಣೆ ನೆರವೇರಿಸಿದರು. ತುಳಸಿರಾಮ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು ಯಾದಗಿರಿ, ಹನಮಂತರಾವ್ ಕುಲಕರ್ಣಿ, ಶ್ರೀಮತಿ ರುತ್, ಖಲೀಮುದ್ದೀನ್, ಖುರ್ಷೀದ್, ಆಶಾ ಕಾರ್ಯಕರ್ತೆಯರು, ಕಾಲೇಜಿನ ಉಪನ್ಯಾಸಕರು ವಿದ್ಯಾರ್ಥಿನಿಯರು ಯಾದಗಿರಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಅವರು ತಿಳಿಸಿದ್ದಾರೆ.
ವರದಿ: ಶಿವರಾಜ ಸಾಹುಕಾರ್ ವಡಗೇರಾ