ನಂಬಿಕೆಯೇ ಜೀವನದ ಉಸಿರು,
ನಂಬಿಕೆ ಇಂದಲೇ ಜೀವನ ಹಸಿರು,
ಸೂರ್ಯ ಮುಳುಗಿ ಕತ್ಹಲಾದಾಗ
ಚಂದ್ರ ಉದಯಿಸಿ ಬೆಳಕು ನೀಡುವನೆಂಬ ನಂಬಿಕೆ,
ಮತ್ತೆ ಬೆಳಗಾಗುವ ,
ಸೂರ್ಯನ ಹೊಂಗಿರಣ ಕಾಣುವ ನಂಬಿಕೆ,
ನಂಬಿಕೆಯೆಂಬ ಗಡಿಯಾರದ ಹಿಂದೆ
ಸುತ್ತುತ್ತಿದೆ ಮಾನವ ಸಮಾಜದ ಮನಸ್ಸು..
ಮಗು ಬೆಳೆದು ಬದುಕು ನೀಡುವುದೆಂಬ ನಂಬಿಕೆ ತಂದ ತಾಯಿಗೆ,
ಏನೇ ಬರಲಿ ತಂದೆ-ತಾಯಿ
ತನಗೆ ಕಣ್ಗಾವಲಾಗಿ
ಬದುಕು ನೀಡುವರೆಂಬ
ನಂಬಿಕೆ ಮುಗ್ಧ ಮಗುವಿಗೆ
ನಂಬಿಕೆಯ ಮೇಲೆ
ತಿರುಗುತ್ತಿದೆ ಈ ಜಗವೆಲ್ಲಾ..
ದೇವರು ಪುನರ್ಜನ್ಮ ನೀಡುವನೆಂಬ ನಂಬಿಕೆ
ಬದುಕಿನ ಕೊನೆ ಕ್ಷಣವ ಎಣಿಸುತ್ತಿರುವ ರೋಗಿಗೆ,
ತನ್ನ ವೈದ್ಯಕೀಯ ಜ್ನಾನದಿಂದ
ರೋಗಿಗೆ ಜೀವ ಕೊಡುವ ನಂಬಿಕೆ ವೈದ್ಯ ಮಹಾಶಯನಿಗೆ..
ನಂಬಿಕೆಯ ಮೇಲೆ ನಡೆದಿದೆ ಬದುಕು..
ಬಿರುಬಿಸಿಲು ಕಳೆದು
ಮಳೆಯ ಸಿಂಚನ ನಡೆದು,
ತನ್ನ ಭೂಮಿ ಫಲವತ್ತತೆ ಪಡೆದು,
ತನ್ನ ಕುಟುಂಬದ ಭವಿಷ್ಯ ಬದಲಾಯಿಸಲಿದೆ ಎಂಬುದು
ನೇಗಿಲ ಯೋಗಿಯ ನಂಬಿಕೆ,
ಅಶಾಂತಿ,ಸ್ವಾರ್ಥ, ಬ್ರಷ್ಟತೆ ತೊಲಗಿ
ಸುಂದರ ದೇಶ ಕಟ್ಟುವುದು
ಯುವ ದೇಶಪ್ರೇಮಿಗಳ
ಹೃದಯದಾಳದ ನಂಬಿಕೆ..
ಎಲ್ಲ ನಂಬಿಕೆಗಳೂ
ಫಲ ನೀಡಲಿ,
ಸುಂದರ,ಸುಮಧುರ
ಸಮಾಜ ನಿರ್ಮಾಣ ಆಗಲಿ
ಎಂಬುದೇ ಎಲ್ಲರ ಅನುಕ್ಷಣದ ಹಾರೈಕೆ..
-ಡಾ. ಭೇರ್ಯ ರಾಮಕುಮಾರ್
ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿಗಳು,ಕೆ.ಆರ್.ನಗರ
ಮೈಸೂರು ಜಿಲ್ಲೆ
ಮೊಬೈಲ್-6363172368