ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ನಲ್ವತ್ತು ವರ್ಷ ಪೂರೈಸುತ್ತಿರುವ ಪಾವಗಡ ಪ್ರಥಮ ದರ್ಜೆ ಕಾಲೇಜಿನ ಐತಿಹಾಸಿಕ ದಿನ ಅದ್ದೂರಿಯಾಗಿ ಆಚರಿಸೋಣ ಶಾಸಕ ಹೆಚ್.ವಿ.ವೆಂಕಟೇಶ್

ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದ ಶ್ರೀಮತಿ ಮತ್ತು ಶ್ರೀ ವೈ ಇ ರಂಗಯ್ಯ ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಂಕಿರ್ಣದಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದ ನೂತನ ಕಚೇರಿಯನ್ನು ಪಾವಗಡ ಶಾಸಕರಾದ ಹೆಚ್ ವಿ ವೆಂಕಟೇಶ್ ರವರು ಉದ್ಘಾಟಿಸಿ ಮಾತನಾಡಿದರು ಪಾವಗಡ ಬರದ ನಾಡು ಎಂಬ ಹೆಗ್ಗಳಿಕೆ ಹೆಸರ ವಾಸಿಯಾಗಿರಬಹುದು ಆದರೆ ವಿದ್ಯಾಭ್ಯಾಸಕ್ಕೆ ಯಾವುದೇ ಬರ ಇಲ್ಲ ಏಕೆಂದರೆ ಪಾವಗಡ ಪಟ್ಟಣದಲ್ಲಿ ಓದಿದಂತಹ ಅನೇಕರು ಇಂದು ಉತ್ತಮ ಹುದ್ದೆಗಳಲ್ಲಿ ಇರುವಂತದ್ದು ನಾವು ಕಾಣುತ್ತಿದ್ದೇವೆ. ಇವತ್ತು ಕೆಎಸ್ಐಎಸ್ ಹಾಗೂ ಯುನಿವರ್ಸಿಟಿ ಲೆವೆಲ್ ಗಳಲ್ಲಿ ದೊಡ್ಡ ದೊಡ್ಡ ಹುದ್ದೆಗಳು ಇರುವುದು ನಾವು ಗಮನಿಸಬಹುದು.

ನಮ್ಮ ತಂದೆಯ ಅವಧಿಯಲ್ಲಿ ಪ್ರಪ್ರಥಮ ಬಾರಿಗೆ ಇಂಥ ಪ್ರಥಮ ದರ್ಜೆ ಕಾಲೇಜು ಆಗಿ ಅಂದಿನ ದಾನಿಗಳದಂತ ಶೆಟ್ಟಿ ಅವರ ಮನವೊಲಿಸಿ ಇಷ್ಟು ದೊಡ್ಡ ಮಟ್ಟದಲ್ಲಿ ಒಂದು ಕಾಲೇಜು ಆಗಲು ಮುಖ್ಯ ಕಾರಣಕರ್ತರು ಅದೇ ಹಾದಿಯಲ್ಲಿ ನಾನೂ ಸಹ ಈಗಾಗಲೇ ಹಲವು ಸುಮಾರು ಕೋಟಿಗಟ್ಟಲೆ ಕೆಲಸವನ್ನು ಮಾಡಿಸಿದ್ದೇನೆ ಇನ್ನು ಮುಂದಿನ ದಿನಗಳಲ್ಲಿ ನಾಲ್ಕು ಕೋಟಿ ವೆಚ್ಚದಲ್ಲಿ ಆಡಿಟೋರಿಯಂ ಪಕ್ಕದಲ್ಲಿಯೇ ಒಂದು ಹಾಸ್ಟೆಲ್ ನಿರ್ಮಾಣ ಇನ್ನು ಅನೇಕ ನನ್ನದೇ ಆದ ಒಂದು ಆಸೆ ಉಳ್ಳಂತಹ ಒಂದು ಕಾರ್ಯಕ್ರಮಗಳು ಇಟ್ಟುಕೊಂಡಿದ್ದನೆ.

ಇಂತಹ ಒಂದು ಹಳೆ ವಿದ್ಯಾರ್ಥಿಗಳ ಸಂಘ ಉತ್ತಮ ರೀತಿಯಲ್ಲಿ ಬೆಳೆಯಬೇಕು ಹಾಗೂ ಹೊಸದಾಗಿ ಆಯ್ಕೆಯಾಗಿರುವ ಸದಸ್ಯರು ಉತ್ತಮ ಕೆಲಸ ತಿಳಿದಂತಹ ಒಂದು ತಂಡವನ್ನು ರಚಿಸಿದ್ದೀರಿ ಮುಂದಿನದರಲ್ಲಿ ಉತ್ತಮವಾಗಿ ಸಂಘ ಬೆಳೆಯಲಿ ಎಂದರು.
ಹಳೆಯ ವಿದ್ಯಾರ್ಥಿಗಳ ಸಂಘದ ಗೌರವ ಅಧ್ಯಕ್ಷ ಚಿನ್ನ ವೆಂಕಟರಮಣಪ್ಪ,ಸಂಘದ ಅಧ್ಯಕ್ಷರಾಗಿ ತಿಪ್ಪೇಸ್ವಾಮಿ,ಉಪಾಧ್ಯಕ್ಷರಾಗಿ ಸ್ಟುಡಿಯೋ ಅಮರ್, ಪ್ರಧಾನ ಕಾರ್ಯದರ್ಶಿಯಾಗಿ ಫಾಸ್ಟಿಂಗ್ ಮೈಕಲ್ ಪ್ರದೀಶ್, ಕಾರ್ಯದರ್ಶಿಯಾಗಿ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಕೆ.ಓ.ಮಾರಪ್ಪ,ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಶ್ರೀಮತಿ ನಾಗರತ್ನಮ್ಮ ಎಸ್.ರವರು, ಪದಾಧಿಕಾರಿಗಳಾದ ವೆಂಕಟೇಶಲು, ಮಲ್ಲಿಕಾರ್ಜುನ,ಇಮ್ರಾನ್ ಉಲ್ಲಾ,ಸತ್ಯನಾರಾಯಣ, ನರಸಿಂಹ ಮೂರ್ತಿ,ಚಿನ್ನ ರೆಡ್ಡಿ, ಗಂಗಾಧರ,ನಾಗವೀಣ, ಭವ್ಯ,ಮಂಜುನಾಥ್, ಚಿರಂಜೀವಿ ನೂತನ ಕಮಿಟಿಯ ಸದಸ್ಯರಾಗಿದ್ದಾರೆ.

ಹಳೆ ವಿದ್ಯಾರ್ಥಿಗಳ ಸಂಘದ ಕಾರ್ಯಕ್ರಮಕ್ಕೆ ಭಾಗವಹಿಸಿದ್ದ ಮುಖಂಡರು ಪುರಸಭಾ ಮಾಜಿ ಅಧ್ಯಕ್ಷರಾದ ಶಂಕರ್ ರೆಡ್ಡಿ ಪುರಸಭೆ ಸದಸ್ಯರಾದ ರಾಜೇಶ್ ರವಿ ರವರು,ಸಮಾಜ ಸೇವಕರಾದ ಬತ್ತಿನೇನಿ ನಾಗೇಂದ್ರ ರಾವ್ ರವರು, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಶ್ರೀಧರ್. ಪ್ರಹ್ಲಾದ್ ರವರು ಮತ್ತು ಕಾಲೇಜು ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ