ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದ ಮುನ್ಸಿ ಕಾಲೋನಿ ಬಡಾವಣೆಯೋ ಅಥವಾ ಹಳ್ಳ-ಕೊಳ್ಳವೋ ಎಂದು ಸಾರ್ವಜನಿಕರಲ್ಲಿ ಭಯದ ವಾತಾವರಣ ಮೂಡಿದೆ ಏಕೆಂದರೆ ಜನ ವಸತಿ ಬಡಾವಣೆ ಆಗಿದ್ದರೂ ಡ್ರೇನೇಜ್ ಇಲ್ಲ,ವಿದ್ಯುತ್ ದೀಪಗಳಿಲ್ಲ,ಯಾವುದೇ ಪ್ರಾಣಿಗಳು ಮೃತ ಪಟ್ಟರೆ ತೆರವುಗೊಳಿಸುವುದಿಲ್ಲ ಇದಕ್ಕೆ ಪ್ರಮುಖವಾಗಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ನಿರ್ಲಕ್ಷವೇ ಕಾರಣವೆಂದು ಬಡಾವಣೆಯಲ್ಲಿ ವಾಸಿಸುವ ಜನರು ಉಗಿಯುತ್ತಿದ್ದಾರೆ.ನಿನ್ನೆ ಬೆಳಿಗ್ಗೆ ಏಳು ಗಂಟೆಗೆ ಬಡಾವಣೆಯಲ್ಲಿ ಹಂದಿ ಸತ್ತುಬಿದ್ದು ಗಬ್ಬು ನಾರುತ್ತಿದ್ದು ಮತ್ತು ಇತರೆ ಪ್ರಾಣಿಗಳು ಬಿಸಾಡಿ ತಿನ್ನುತ್ತಿರುವುದು ಬಡಾವಣೆ ಜನ ನೋಡಿ ಅಧಿಕಾರಿಗಳಲ್ಲಿ ಮತ್ತು ಸಿಬ್ಬಂದಿಯವರಿಗೆ ತಿಳಿಸಿದರೂ ಯಾವುದೇ ರೀತಿಯಾಗಿ ಸ್ಪಂದನೆ ಮಾಡದೆ ಕರ್ತವ್ಯ ಲೋಪ ಎಸಗಿದ್ದಾರೆ. ಸತ್ತ ಪ್ರಾಣಿಯಲ್ಲಿ ಹಲವಾರು ರೀತಿಯ ಬ್ಯಾಕ್ಟೀರಿಯಾ ಮತ್ತು ವೈರಸ್ ಗಳಿಂದ ಸಾರ್ವಜನಿಕರ ಆರೋಗ್ಯದಲ್ಲಿ ಸಮಸ್ಯೆಯಾದರೆ ಯಾರು ಹೊಣೆ ಇಂತಹ ಘಟನೆಗಳು ಮೇಲಾಧಿಕಾರಿಗಳ ಗಮನಕ್ಕೆ ಬರೋದಿಲ್ವಾ ಎಂದು ಬಡಾವಣೆಯ ಜನರು ಕರುನಾಡ ಕಂದ ಪತ್ರಿಕೆ ಮುಂದೆ ಅಧಿಕಾರಿಗಳ ಬೇಜವಾಬ್ದಾರಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರದಿ: ಚಂದ್ರಶಾಗೌಡ ಮಾಲಿ ಪಾಟೀಲ್