ಕಲಬುರಗಿ/ಚಿತ್ತಾಪುರ:ಡೆಂಗ್ಯೂ, ಚಿಕನ್ ಗುನ್ಯಾ ಸೇರಿದಂತೆ ಇತರೆ ಸಾಂಕ್ರಾಮಿಕ ರೋಗಗಳ ತಡೆಗಟ್ಟುವ ನಿಟ್ಟಿನಲ್ಲಿ ಪಟ್ಟಣದ ತರಕಾರಿ ಮಾರುಕಟ್ಟೆ,ಹೋಟಲ್ ಗಳು,ಬಾರ್ ಗಳಲ್ಲಿ ಸ್ವಚ್ಛತೆ ಹಾಗೂ ಕುಡಿಯುವ ನೀರನ್ನು ಪರಿಶೀಲಿಸಲಾಯಿತು, ಗ್ರಾಹಕರಿಗೆ ಶುದ್ಧ ಕುಡಿಯುವ ನೀರು ಒದಗಿಸಬೇಕು ಹಾಗೂ ತಮ್ಮ ಸುತ್ತಮುತ್ತಲಿನ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಮುಖ್ಯಾಧಿಕಾರಿ ಮನೋಜ ಕುಮಾರ ಗುರಿಕಾರ ಸೂಚಿಸಿದರು ಮತ್ತು ಟೈರ್ ಸಂಗ್ರಹ ಅಂಗಡಿ ಮತ್ತು ಗುಜರಿ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿ ಟೈರ್ ಮತ್ತು ಇತರ ಸಾಮಾಗ್ರಿಗಳಲ್ಲಿ ನೀರು ನಿಲ್ಲದಂತೆ ಕ್ರಮವಹಿಸಲು ಸೂಚಿಸಲಾಯಿತು.
ನಂತರ ಡೆಂಗ್ಯೂ, ಚಿಕನ್ ಗ್ಯೂನ್ ಸೇರಿದಂತೆ ಇತರೆ ಸಾಂಕ್ರಾಮಿಕ ರೋಗಗಳ ತಡೆಗಟ್ಟುವ ನಿಟ್ಟಿನಲ್ಲಿ ಪಟ್ಟಣದ ಸಾರ್ವಜನಿಕರಲ್ಲಿ ಮತ್ತು ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕ ಸ್ಥಳಗಳಾದ ಬಸ್ ಸ್ಟ್ಯಾಂಡ್ ಗಳಲ್ಲಿ ಭಿತ್ತಿಪತ್ರ ನೀಡುವ ಮೂಲಕ ಜಾಗೃತಿ ಮೂಡಿಸಲಾಯಿತು.
ಇದೇ ಸಂದರ್ಭದಲ್ಲಿ ಆರೊಗ್ಯ ನಿರೀಕ್ಷಕಾರದ ವೆಂಕಟೇಶ ಕುಮಾರ, ಲೋಹಿತ, ಶರಣಕುಮಾರ, ಸಿಬ್ಬಂದಿ ಭೀಮರಾಯ, ಅಂಬರೀಷ ಇದ್ದರು.
ವರದಿ ಮೊಹಮ್ಮದ್ ಅಲ್ಲಿ ಚಿತ್ತಾಪುರ