ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಕ್ಯಾನ್ಸರ್ ಗೆ ಕಾರಣವಾಗುವ ಸಾಮಾನ್ಯ ಚಿಹ್ನೆಗಳು ಮತ್ತು ರೋಗ ಲಕ್ಷಣಗಳು

ಕೆಲವೊಮ್ಮೆ ಸಾಮಾನ್ಯವಾಗಿ ಗೊತ್ತಿರದ,ಸ್ಪಷ್ಟವಾಗಿ ಗೋಚರಿಸದೇ ಇರುವ ಚಿಹ್ನೆಗಳೂ ಸಹ ಕ್ಯಾನ್ಸರ್ ಅಪಾಯದ ಎಚ್ಚರಿಕೆಯ ಗಂಟೆಯಾಗಿರಬಹುದು.ಆದರೆ,ಈ ಲಕ್ಷಣಗಳನ್ನು ನಿರ್ಲಕ್ಷಿಸುವುದರಿಂದ ಇದು ಭವಿಷ್ಯದಲ್ಲಿ ಭಾರೀ ತೊಂದರೆ ಉಂಟುಮಾಡಬಹುದು.

ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಸರ್ಜಿಕಲ್ ಆಂಕೊಲಾಜಿ ವಿಭಾಗದ ಡಾ. ಹರೀಶ್ ಇ, ವಿವಿಧ ರೀತಿಯ ಕ್ಯಾನ್ಸರ್‌ ಗೆ ಕಾರಣವಾಗಬಲ್ಲ ಕೆಲವು ಸಾಮಾನ್ಯವಾಗಿ ಗೊತ್ತಿರದ ಚಿಹ್ನೆಗಳು ಮತ್ತು ರೋಗಲಕ್ಷಣಗಳ (Uncommon Symptoms of Cancer) ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ.

ನೀವು ನಿರ್ಲಕ್ಷಿಸಲೇಬಾರದ ಸಾಮಾನ್ಯವಲ್ಲದ ಕ್ಯಾನ್ಸರ್ ಚಿಹ್ನೆ ಮತ್ತು ಲಕ್ಷಣಗಳು ಈ ಕೆಳಕಂಡಂತಿವೆ.

1)ನಿರಂತರ ಕೆಮ್ಮು ಅಥವಾ ಒರಟಾದ ಧ್ವನಿ:
ಇದು ಸಾಮಾನ್ಯವಾಗಿ ಶ್ವಾಸಕೋಶದ ಕ್ಯಾನ್ಸರ್ (Lung Cancer) ಅಥವಾ ಗಂಟಲಿನ ಕ್ಯಾನ್ಸರ್‌ಗೆ ಸಂಬಂಧಿಸಿದ ಸೂಚಕವಾಗಿದೆ.

2)ನುಂಗಲು ತೊಂದರೆ :
ಇದು ಅನ್ನನಾಳ ಅಥವಾ ಗಂಟಲು ಕ್ಯಾನ್ಸರ್‌ನ (Throat Cancer) ಸಂಕೇತವಾಗಿರುವ ಸಾಧ್ಯತೆಯಾಗಿದೆ.

3)ಭಾರಿ ತೂಕ ನಷ್ಟ :
ಹೀಗಾಗಲು ಪ್ಯಾಂಕ್ರಿಯಾಟಿಕ್,ಹೊಟ್ಟೆ, ಅನ್ನನಾಳ ಮತ್ತು ಶ್ವಾಸಕೋಶದ ಕ್ಯಾನ್ಸರ್ ಸೇರಿದಂತೆ ಹಲವು ರೀತಿಯ ಕ್ಯಾನ್ಸರ್‌ಗಳು (Cancers) ಕಾರಣವಾಗಿರಬಹುದು.

4).ದೀರ್ಘಕಾಲದ ಆಯಾಸ :
ವಿಶ್ರಾಂತಿ ತೆಗೆದುಕೊಂಡರೂ ಆಯಾಸ ಕಡಿಮೆಯಾಗದೇ ಇದ್ದರೆ ಇದು ಲ್ಯುಕೇಮಿಯಾ, ಕೊಲೊನ್ ಅಥವಾ ಹೊಟ್ಟೆಯ ಕ್ಯಾನ್ಸರ್ (Stomach Cancer) ಲಕ್ಷಣವಾಗಿರುವ ಸಾಧ್ಯತೆ ಇರುತ್ತದೆ.

5).ನಿರಂತರ ತುರಿಕೆ:
ತುರಿಕೆ, ವಿಶೇಷವಾಗಿ ದೇಹದ ಕೆಳಭಾಗದಲ್ಲಿ (ಸೊಂಟದ ಕೆಳಗೆ) ಇದ್ದರೆ.ಇದು ಕೆಲವೊಮ್ಮೆ ಲಿಂಫೋಮಾ ಕ್ಯಾನ್ಸರ್‌ (Lymphoma Cancer) ಲಕ್ಷಣವಾಗಿರುವ ಸಾಧ್ಯತೆ ಇರುತ್ತದೆ.ಇದು ಕೆಲವೊಮ್ಮೆ ಲಿಂಫೋಮಾ ಕ್ಯಾನ್ಸರ್‌ ಲಕ್ಷಣವಾಗಿರುವ ಸಾಧ್ಯತೆ ಇರುತ್ತದೆ.

6).ತಡೆದುಕೊಳ್ಳಲಾಗದಷ್ಟು ನೋವು : ಬೆನ್ನುನೋವಿನಂತಹ ನಿರ್ದಿಷ್ಟ ಪ್ರದೇಶಗಳಲ್ಲಿ ನಿರಂತರವಾದ ನೋವು ಇದ್ದರೆ,ಇದು ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್‌ನ ಒಂದು ಚಿಹ್ನೆಯಾಗಿರಬಹುದು ಅಥವಾ ಮೂಳೆ ನೋವು ಇದು ಮೂಳೆ ಕ್ಯಾನ್ಸರ್ (Bone Cancer) ಅನ್ನು ಸೂಚಿಸುತ್ತದೆ.

7).ಚರ್ಮದಲ್ಲಿನ ಬದಲಾವಣೆಗಳು :
ಚರ್ಮದಲ್ಲಿ ಉಂಟಾಗುವ ಬದಲಾವಣೆಗಳು ಕೂಡ ಕ್ಯಾನ್ಸರ್‌ ಸೂಚಕವಾಗಿವೆ.ಗಾಢವಾಗಿ ಕಾಣುವ ಚರ್ಮ (ಹೈಪರ್ಪಿಗ್ಮೆಂಟೇಶನ್),ಹಳದಿ ಚರ್ಮ ಮತ್ತು ಕಣ್ಣುಗಳು (ಕಾಮಾಲೆ), ಕೆಂಪು ಚರ್ಮ (ಎರಿಥೆಮಾ),ತುರಿಕೆ ಅಥವಾ ಅತಿಯಾದ ಕೂದಲು ಬೆಳವಣಿಗೆ ಕೂಡ ಕ್ಯಾನ್ಸರ್‌ ಸೂಚಕವಾಗಿರುವ ಸಾಧ್ಯತೆ ಇರುತ್ತದೆ.

8).ಜ್ವರ :ಸೋಂಕುಗಳಿಗೆ ಸಂಬಂಧಿಸದ ಆಗಾಗ ಬರುವ ಜ್ವರ,ಲ್ಯುಕೇಮಿಯಾ ಅಥವಾ ಲಿಂಫೋಮಾ ಕ್ಯಾನ್ಸರ್‌ ಯನ್ನು ಸೂಚಿಸುತ್ತದೆ.

9).ತೀವ್ರ ರಕ್ತಸ್ರಾವ ಅಥವಾ ಡಿಸ್ಚಾರ್ಜ್ :
ಮೂತ್ರದಲ್ಲಿ ರಕ್ತ ಸ್ರಾವ ಆಗುತ್ತಿದ್ದರೆ ಮೂತ್ರಕೋಶ ಅಥವಾ ಮೂತ್ರಪಿಂಡದ ಕ್ಯಾನ್ಸರ್, ಮಲಬದ್ದತೆ ಇದ್ದರೆ ಕೊಲೊನ್ ಅಥವಾ ಗುದನಾಳದ ಕ್ಯಾನ್ಸರ್, ಯೋನಿಯಲ್ಲಿ ಹೆಚ್ಚು ರಕ್ತಸ್ರಾವವಾಗುವುದರಿಂದ ಎಂಡೊಮೆಟ್ರಿಯಲ್ ಅಥವಾ ಗರ್ಭಕಂಠದ ಕ್ಯಾನ್ಸರ್ (Cervical Cancer) ಗೆ ಕಾರಣವಾಗಬಹುದು.

10).ನರಗಳಲ್ಲಿನ ಸಮಸ್ಯೆ :
ನರಗಳು ರೋಗಗ್ರಸ್ತವಾಗುವುದರಿಂದ ದೃಷ್ಟಿ ಬದಲಾವಣೆ,ನಿರಂತರ ತಲೆನೋವು ಅಥವಾ ಮೆದುಳಿನಲ್ಲಿ ಗೆಡ್ಡೆಯಾಗಿರುವ ಚಿಹ್ನೆಯನ್ನು ಸೂಚಿಸುವ ಸಾಧ್ಯತೆಗಳಿರುತ್ತವೆ.

ಲೇಖಕರು: ಎಚ್.ಎಂ.ಖಲೀದ್, ಕೊಳ್ನಾಡ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ