ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸಿಂಗನಾಳ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ರಾಸುಗಳಲ್ಲಿ ಕಾಣಿಸಿಕೊಳ್ಳುವ ಅಗೊಜಚರ ಕಿಚ್ಚನ ಬಾವು ತಪಾಸಣೆಯನ್ನು ಕೆಎಂಎಫ್ ಕೊಪ್ಪಳ ಜಿಲ್ಲೆ ಉಪ ವ್ಯವಸ್ಥಾಪಕರಾದ ಡಾಕ್ಟರ್ ಗಂಗಾಧರ್, ಹಾಗೂ ಗವಿಸಿದ್ದಪ್ಪ ಸಹಾಯ ವ್ಯವಸ್ಥಾಪಕರ ನೇತೃತ್ವದಲ್ಲಿ ಸಂಘದಲ್ಲಿ ಹಾಲು ಶೇಖರಣೆ ಸಮಯದ ತಪಾಸಣೆ ಮಾಡಲಾಗಿತ್ತು,ರಾಸುಗಳ ಆರೋಗ್ಯವನ್ನು ಕಾಪಾಡಲು ಮತ್ತು ಹಾಲಿನ ಗುಣಮಟ್ಟವನ್ನು ಕಾಯ್ದುಕೊಳ್ಳಲು, ಪ್ರತಿ ತಿಂಗಳ 15 ನೇ ತಾರೀಕಿನಂದು ಸಂಜೆ ಮತ್ತು 16ನೇ ತಾರೀಕು ಬೆಳಿಗ್ಗೆ ಹಾಲಿನ ತಪಾಸಣೆ ಸಂಘದಲ್ಲಿ ಮಾಡಲಾಗುತ್ತದೆ. ರೈತರಿಗೆ ಉಚಿತವಾಗಿ ಕೆಚ್ಚಲ ಬಾವು ತಪಾಸಣೆ ಮಾಡಿ ಸಿಟ್ರೋಜನ್ ಎಂ, ಮೆಡಿಸನ್ ಮತ್ತು ಜಂತು ನಾಶಕ ಮಾತ್ರೆಗಳನ್ನು ರೈತರಿಗೆ ಸಂಘದ ಅಧ್ಯಕ್ಷರ ನಿರ್ದೇಶಕರ, ಸಂಯೋಗದಲ್ಲಿ ರೈತರಿಗೆ ಉಚಿತವಾಗಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಸದ್ಯಸರು ಸಿಬ್ಬಂದಿ ವರ್ಗದವರು ಭಾಗಿಯಾಗಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.