ಚಿತ್ತಾಪೂರ:ಐತಿಹಾಸಿಕ ಕಲ್ಯಾಣ ಕರ್ನಾಟಕ ಹೆಬ್ಬಾಗಿಲು ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸುಗೂರ ಎನ್ ಗ್ರಾಮದಲ್ಲಿ ಹಿಂದು -ಮುಸ್ಲಿಂ ಸಮುದಾಯದ ಭಾಂಧವರು ,ಮತ್ತು ಸುಗೂರ ಎನ್ ಗ್ರಾಮಸ್ಥರು ಎಲ್ಲರೊ ಸೇರಿ ಮೊಹರಂ ಹಬ್ಬವನ್ನು ಶ್ರದ್ಧೆ, ಭಕ್ತಿಯಿಂದ ಆಚರಿಸಲಾಯಿತು.
ಕಳೆದ ಐದು ದಿನಗಳ ವರೆಗೆ ಪಂಜಾ ಹಾಗೂ ಡೋಲಿ ದೇವರನ್ನು ಪ್ರತಿಷ್ಠಾಪಿಸಿ, ವಿವಿಧ ಧಾರ್ಮಿಕ ಕಾರ್ಯಕ್ರಮ,ತಮಟೆ ಕುಣಿತ, ಹಳ್ಳಿಯಲ್ಲಿ ಯುವಕರು ಬಿದುರಿನ ಪಟ್ಯಾ ತಿರುಗುವುದು,ಮತ್ತು ಗ್ರಾಮದ ಹಿರಿಯರು ಮೊಹರಂ ಪದಗಳ ಹಾಡುವುದು, ಹಮ್ಮಿಕೊಳ್ಳುವ ಮೂಲಕ ಹಿಂದು- ಮುಸ್ಲಿಂ ಬಾಂಧವರು ಮೊಹರಂ ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಅನೇಕ ಭಕ್ತರು ದೇವರಿಗೆ ತಮ್ಮ ಭಕ್ತಿಯ ಸೇವೆಗೈದರು. ಇನ್ನೂ ಕೆಲ ಕಡೆ ಮಸೀದಿ ಮುಂದಿನ ಅಲಾಯಿ ದೇವರ ಎದುರಿಗೆ ಅಗ್ನಿ ಕುಂಡ ನಿರ್ಮಿಸಿ ರಾಜಬಕ್ಸಾರ್ ಪೀರ್,ಇಮಾಮೆಕಾಸಿಂ ಪೀರ್, ಬಾರೆಇಮಾಮ್ ಪೀರ್,ಕುಂಡದಲ್ಲಿನ ಅಗ್ನಿ ತುಳಿದು ಭಕ್ತಿಯ ಪರಾಕಾಷ್ಠೆ ಮೆರೆದರು.
ಬುಧವಾರ ಮೊಹರಂ ಕಡೆಯ ದಿನವಾಗಿದ್ದರಿಂದ ರಾತ್ರಿ ಪಂಜಾ ಹಾಗೂ ಡೋಲಿ ದೇವರ ಭವ್ಯ ಮೆರವಣಿಗೆ ನಡೆದು ಸುಗೂರ ಎನ್ ಗ್ರಾಮದ ಅಗಸಿ ಬಳಿಯ ಪಕ್ಕದಲ್ಲಿ ಇರುವ ಊರ ಹೊರವಲಯದ ದೇವರ ಬಾವಿಯಲ್ಲಿ ಅಲಾಯಿ ದೇವರನ್ನು ವಿಸರ್ಜಿಸುವ ಮೂಲಕ ಮೊಹರಂ ಹಬ್ಬ ಕೊನೆಗೊಂಡಿತು.
