ಕಲಬುರಗಿ:ಗುರುಪೂರ್ಣಿಮೆ ಎಂಬುವುದು ಸನಾತನ ಕಾಲದಿಂದಲೂ ಗುರುವಿನ ಜ್ಞಾನಕ್ಕೆ ತಲೆಬಾಗಿ ನಮ್ಮ ಬದುಕಿಗೆ ಅವರು ನೀಡಿದ ಕೊಡುಗೆಯ ಬಗ್ಗೆ ಕೃತಜ್ಞತೆಯನ್ನು ಸಲ್ಲಿಸಲು ಗುರುಪೂರ್ಣಿಮೆ ದಿನಾಚರಣೆಯನ್ನು ನಮ್ಮ ದೇಶದಲ್ಲಿ ಆಚರಿಸಲಾಗುತ್ತದೆ.ಅದೇ ರೀತಿಯಾಗಿ ನಮ್ಮ ಗುರುಗಳಾದಂತಹ ವಿಶೇಷವಾಗಿ ಕರಾಟೇ ಕಲೆಯನ್ನು ನನಗೆ ಕಲಿಸಿ ಉತ್ತಮ ಸಂಸ್ಕಾರವನ್ನು ಕಲಿಸಿ ಉನ್ನತ ವ್ಯಕ್ತಿಯಾಗಲು ಶ್ರಮಿಸಿದ ಮಹಾನ ಗುರು ಕಲ್ಯಾಣ ಕರ್ನಾಟಕದ ಕರಾಟೆ ಅಸೋಸಿಯೇಷನ್ ಅಧ್ಯಕ್ಷರಾದ ಶಿಹಾನ್ ದಶರಥ ದಮ್ಮನ್ಸೂರ್ ಗುರುಗಳ ಪಾದ ಕಮಲಗಳಿಗೆ ನನ್ನ ಕೋಟಿ ಕೋಟಿ ಹೃದಯಪೂರ್ವಕ ಅಭಿನಂದನೆಗಳು ಯಾಕೆಂದರೆ ವಿದ್ಯೆ ಕಲಿಸಿದ ಗುರುವಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಗುರುವಿನ ಋಣ ಏಳು ಜನ್ಮಕು ತೀರಿಸಲು ಸಾಧ್ಯವಿಲ್ಲ ಅಂತಹ ಗುರುಗಳ ಗುರು ಪೂರ್ಣಿಮೆ ಎಂಬುವುದು ಒಂದು ಪವಿತ್ರ ಸಂದರ್ಭವಾಗಿದೆ ಎಂದು ಹೇಳುವುದು ನನಗೆ ಹರ್ಷವೆನಿಸುತ್ತದೆ ಎಂದು ಜೇವರ್ಗಿ ತಾಲೂಕ ಜೆನ್ ಶಿಟೊರೀಯೊ ಕರಾಟೆ ಅಸೋಸಿಯೇಷನ್ ತಾಲೂಕ ಉಪಾಧ್ಯಕ್ಷರಾದ ಅಮರನಾಥ್ ಮಧುರಕರ ಅವರು ಪೂಜ್ಯ ಗುರುಗಳಿಗೆ ಅಭಿನಂದನೆ ಸಲ್ಲಿಸಿ ಪೂಜ್ಯ ಗುರುಗಳಿಗೆ ಗುರುಪೂರ್ಣಿಮೆಯ ಶುಭಾಶಯ ತಿಳಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.