ಯಾದಗಿರಿ/ವಡಗೇರಾ:ಶಿವಶರಣ ಹಡಪದ ಅಪ್ಪಣ್ಣನವರು ಕಾಯಕ ಜೀವಿಯಾಗಿದ್ದರು, ಅವರ ಕಾಯಕನಿಷ್ಠೆ ಅತ್ಯಂತ ಶ್ರೇಷ್ಠವಾದದ್ದು ಎಂದು ತಹಶೀಲದಾರ ಶ್ರೀನಿವಾಸ ಚಾಪೆಲ್ ನುಡಿದರು.ವಡಗೇರಾ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಶಿವಶರಣ ಹಡಪದ ಅಪ್ಪಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಶಿವಶರಣ ಹಡಪದ ಅಪ್ಪಣ್ಣನವರು ಒಂದೇ ಜಾತಿಗೆ ಸೀಮಿತವಾಗದೆ ಸಮಾಜದ ಒಳಿತಿಗಾಗಿ ಶ್ರಮಿಸಿದಂತ ಮಹಾನ್ ಶರಣರು ಅವರ ತತ್ವ ಆದರ್ಶಗಳು ಇಂದಿಗೂ ಕೂಡಾ ಸರ್ವಕಾಲಿಕ ಶ್ರೇಷ್ಠ ಎಂದು ಹೇಳಿದರು.ಈ ಸಂದರ್ಭದಲ್ಲಿ ಉಪ ತಹಶೀಲ್ದಾರ ಸಂಗಮೇಶ್ ದೇಸಾಯಿ, ಕಂದಾಯ ನಿರೀಕ್ಷಕರಾದ ಸಂಜಿವ್ ಕುಮಾರ್ ಕಾವಲಿ,ರಾಮನಗೌಡ ಯಕ್ಷಿಂತಿ ,ಗುರು ಚೌಕಿಮಠ, ಸಮಾಜದ ಮುಖಂಡರಾದ ಅಮರೇಶ ಹಡಪದ ,ಸಂಗಮೇಶ ಹಡಪದ,ಚಂದ್ರಶೇಖರ ಹಡಪದ,ಕಮಲಾಕರ ಹಡಪದ,ಬಸವರಾಜ ಕೊಡ್ಡದೋರ,
ನಾಗರಾಜ ಹಡಪದ, ಸಂಗಮೇಶ ಹಡಪದ ಮತ್ತು ತಹಶೀಲ್ದಾರ್ ಕಚೇರಿಯ ಸಿಬ್ಬಂದಿಗಳಾದ ಸುನಿತಾ ಹೇರುಂಡಿ, ದೇವು ನಾಯಕ್, ಖಂಡಪ್ಪ ಮೈಲಾಪುರ್, ಮಂಜು ಯಾದಗಿರಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ವರದಿ: ಶಿವರಾಜ ಸಾಹುಕಾರ್, ವಡಗೇರಾ