ವಿಜಯನಗರ ಜಿಲ್ಲೆಯ ಕೊಟ್ಟೂರು
ಪಟ್ಟಣದ ಪ್ರವಾಸ ಮಂದಿರದಲ್ಲಿ ಕೊಟ್ಟೂರು ತಾಲೂಕಿನಲ್ಲಿ ನ್ಯಾಯಾಲಯ ಸ್ಥಾಪನೆಗಾಗಿ ಕೊಟ್ಟೂರು ತಾಲೂಕು ವಕೀಲರ ನ್ಯಾಯಾಲಯ ಹೋರಾಟ ಸಮಿತಿಯ ಸದಸ್ಯರು ಸಭೆಯನ್ನು ಪ್ರವಾಸ ಮಂದಿರದಲ್ಲಿ ಆಯೋಜಿಸಲಾಗಿತ್ತು ,
ಪಟ್ಟಣದಲ್ಲಿ ಹಲವು ವರ್ಷಗಳ ಬೇಡಿಕೆಯಾದ ನ್ಯಾಯಾಲಯ ಸ್ಥಾಪನೆಗಾಗಿ ಕೊಟ್ಟೂರು ತಾಲೂಕಿನ 70 ರಿಂದ 75 ವಕೀಲರುಗಳು ಸಭೆ ಸೇರಿ ಒಂದು ಸಮಿತಿಯನ್ನು ಸ್ಥಾಪಿಸಿ ಅಧ್ಯಕ್ಷರಾಗಿ ಎಂ.ಗುರುಸಿದ್ದನಗೌಡ ಉಪಾದ್ಯಕ್ಷರಾಗಿ ಪಿ,ಪ್ರಭುದೇವ್,ಕಾರ್ಯದರ್ಶಿಯಾಗಿ ಶಿವಾನಂದಪ್ಪ ಬಾವಿಕಟ್ಟಿ ಹಾಗೂ ಜಂಟಿ ಕಾರ್ಯದರ್ಶಿಯಾಗಿ ಕೆ.ಗುರುಬಸವರಾಜ ಮತ್ತು ಟಿ, ಹನುಮಂತಪ್ಪ, ಖಜಾಂಚಿಯಾಗಿ ಟಿ.ಎಂ.ಸೋಮಯ್ಯ ಇವರಗಳನ್ನು ಅವೀರೋಧವಾಗಿ ಅಯ್ಕೆ ಮಾಡಿ ಹೋರಾಟದ ರೂಪರೇಶಗಳನ್ನು ತಯಾರಿಸಿ ಸದರಿ ಮನವಿಯನ್ನು ಶೀಘ್ರದಲ್ಲಿ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯ ಬಳ್ಳಾರಿ ಹಾಗೂ ಜಿಲ್ಲಾ ಆಡಳಿತ್ಮಾಕ ನ್ಯಾಯಾಧೀಶರಿಗೆ ಮನವಿಯನ್ನು ಸಲ್ಲಿಸಲು ಈ ಸಭೆಯಲ್ಲಿ ತೀರ್ಮಾನಿಸಲಾಯಿತು.
ಕೊಟ್ಟೂರು ತಾಲೂಕಿನಲ್ಲಿ ನ್ಯಾಯಾಲಯದ ಅತಿ ಅವಶ್ಯಕತೆ ಇರುವುದರಿಂದ ತಾಲೂಕಿನ ಜನರ ನೀರಿಕ್ಷೆಯೂ ಸಹ ಇರುವುದರಿಂದ ತಾಲೂಕಿನ ಜನರು ಬೆಂಬಲ ಸೂಚಿಸುತ್ತಾರೆ ಈ ಸಮಿತಿಯ ಹೋರಾಟವು ನ್ಯಾಯಾಲಯ ಸ್ಥಾಪನೆ ಅಗಬೇಕೆಂದು ಬಹುದಿನಗಳ ಬೇಡಿಕೆಯಾಗಿರುತ್ತದೆ ಈ ಸಂದರ್ಭದಲ್ಲಿ ತಾಲೂಕಿನ ವಕೀಲರ ಸಮಿತಿಯ ಎಲ್ಲಾ ಸದಸ್ಯರು ಇದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.