ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ದಿಡಗೂರಿನ ಶ್ರೀ ಸಿದ್ದ ಮುಪ್ಪಿನಾರ್ಯ ಆಶ್ರಮದಲ್ಲಿ ನಿನ್ನೆ ಗುರುಪೂರ್ಣಿಮೆಯ ಅಂಗವಾಗಿ ಶ್ರೀ ಸಿದ್ಧಾರೂಢ ಮತ್ತು ಶ್ರೀ ಗುರುನಾಥರೂಢರ ಮೂರ್ತಿಗಳಿಗೆ ವಿಶೇಷ ಪೂಜೆ ಮತ್ತು ಅಲಂಕಾರ ಮಾಡಿ ಭಕ್ತರು ಮಠದಲ್ಲಿ ಗುರುವಿನ ಭಜನೆ ಮಾಡುತ್ತಾ ಶ್ರೀಗಳ ಬೆಳ್ಳಿಯ ಪಾದುಕೆಗಳಿಗೆ ಪಂಚಾಮೃತ ಅಭಿಷೇಕವನ್ನು ಮಾಡುವ ಮುಖಾಂತರ ಗುರುಪೂರ್ಣಿಮೆಯನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಈ ಕಾರ್ಯಕ್ರಮದಲ್ಲಿ ಸಮಸ್ತ ದಿಡಗೂರಿನ ಭಕ್ತವೃಂದ ಮತ್ತು ಮಹಿಳೆಯರು ಮಕ್ಕಳು ಸುತ್ತಮುತ್ತಲಿನ ಗ್ರಾಮದ ಭಕ್ತರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಶ್ರೀಗುರು ತಿಪ್ಪೇಶಪ್ಪ ಪರಮಾನಂದ ಶ್ರೀಗಳು ನಮ್ಮ ವಹಿನಿ ಮುಖಾಂತರ ಗುರು ಎಂಬುವನು ಅಜ್ಞಾನದ ಕತ್ತಲನ್ನು ಕಳೆದು ಸುಜ್ಞಾನದ ಬೆಳಕಿನೆಡೆಗೆ ನಡೆಸುವವನೇ ಗುರು ಹಾಗಾಗಿ ಗುರುವಿನ ಸ್ಮರಣೆ ಮತ್ತು ಗುರುವಿನ ಮಾರ್ಗದರ್ಶನ ನಮ್ಮ ಜೀವನಕ್ಕೆ ಮತ್ತು ಸನ್ಮಾರ್ಗಕ್ಕೆ ಸಂಸಾರದ ಭವಜೀವನವನ್ನು ಸಾಗಿಸುವುದಕ್ಕೆ ಗುರು ಬೇಕೇ ಬೇಕು ಯಾವುದೇ ಕಾರ್ಯವನ್ನು ಮಾಡುವಾಗ ಮತ್ತು ಒಂದು ಗುರಿಯನ್ನು ಮುಟ್ಟಬೇಕಾದರೆ ಹಿಂದೆ ಗುರು ಇರಲೇಬೇಕು ಗುರು ಇದ್ದರೆ ಗುರಿ ಗುರು ಇಲ್ಲದಿದ್ದರೆ ಗುರಿ ರೆಕ್ಕೆ ಇಲ್ಲದ ಪಕ್ಷಿಯಂತೆ ಎಂದು ಆಶೀರ್ವಚನ ನುಡಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಓಬಿ ಹನುಮಂತಪ್ಪ, ಶ್ರೀ ಅಣ್ಣಪ್ಪ ಸ್ವಾಮಿ, ಪಾಲಕ್, ರಾಜು, ಗಿರಿ, ಮಂಜು, ಮುಂತಾದವರು ಪಾಲ್ಗೊಂಡಿದ್ದರು ಈ ಸಂದರ್ಭದಲ್ಲಿ ಪ್ರಸಾದ ಸೇವೆ ವ್ಯವಸ್ಥೆ ಮಾಡಿದ್ದರು.
ವರದಿ ಪ್ರಭಾಕರ್ ಡಿಎಂ