ಗದಗ ಜಿಲ್ಲೆಯ ರೋಣ ತಾಲ್ಲೂಕ ಬೆಳವಣಿಕಿ ಸಮೀಪದ ಬಳಗಾನೂರ ಗ್ರಾಮದ ಚಿಕ್ಕೇನಕೊಪ್ಪದ ಚನ್ನವೀರ ಶರಣರ ಮಠದಲ್ಲಿ ದಿ.21-07-2024 ಗುರುಪೂರ್ಣಿಮೆ ಹುಣ್ಣಿಮೆಯಂದು ಶಿವಾನುಭವ ಕಾರ್ಯಕ್ರಮದಲ್ಲಿ ತುಲಾಭಾರ ಜರುಗಿತು.
ಈ ಕಾರ್ಯಕ್ರಮದಲ್ಲಿ ಬೆಳವಣಿಕಿಯ ಭಕ್ತರಾದ ನೀಲಮ್ಮ ಈ ಕಡ್ಲಿ ಅವರ ಮಕ್ಕಳಾದ ಅನ್ನಪೂರ್ಣ, ಸುವರ್ಣ, ಗುರುಲಿಂಗಪ್ಪ, ಅಶ್ವಿನಿ ಪರಮಪೂಜ್ಯ ಶಿವಶಾಂತವೀರಶರಣರ ತುಲಾಭಾರ ಸೇವೆಗೈದರು.
ದಾನ-ಧರ್ಮವು ಮನುಷ್ಯನನ್ನು ಸನ್ಮಾರ್ಗಿಯನ್ನಾಗಿ ಮಾಡುತ್ತದೆ. ಇದರಿಂದ ಮಕ್ಕಳಲ್ಲಿ ಸಂಸ್ಕಾರವನ್ನು ಹಾಗೂ ಸೇವಾ ಮನೋಭಾವನೆಯನ್ನು ಬೆಳಸಿದಂತಾಗುತ್ತದೆ. ಎಂದು ಶರಣರು ತಮ್ಮ ಆರ್ಶಿವಚನದಲ್ಲಿ ತಿಳಿಸಿದರು. ಪೂಜ್ಯ ಶರಣರು ಇದೇ ಸಂದರ್ಭದಲ್ಲಿ ಗುರುಲಿಂಗಪ್ಪ ಈ ಕಡ್ಲಿ ಇವರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು. ಮಳೆಮಠ ಸ್ವಾಮಿಗಳು, ತ್ರಿಲೋಚನ ಮಹಾಸ್ವಾಮಿಗಳು, ಕೊಟ್ರಪ್ಪ ಹಕ್ಕಾಪಕ್ಕಿ, ಮುತ್ತಪ್ಪ ಶಿವಶಿಂಪಿ, ಗಂಗವ್ವ ಕಡ್ಲಿ, ಕಸೂರೆವ್ವ ಕಡ್ಲಿ, ನೀಲವ್ವ ಬರಶೆಟ್ಟಿ, ಚನ್ನವ್ವ ಹಕ್ಕಾಪಕ್ಕಿ, ಲಕ್ಷ್ಮವ್ವ ಗೌಡರ, ಬಸವರಾಜ ಬರಶೇಟ್ಟಿ, ಇತರರು ಸಮಾರಂಭದಲ್ಲಿ ಇದ್ದರು.
ವರದಿ ನಿಂಗರಾಜ ತಾಳಿ