ಕಲಬುರಗಿ: ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಂ.ಎಸ್.ಕೆ ಮಿಲ್ ನ (NTC) ಸರಕಾರಿ ಮನೆಗಳು ಸುಮಾರು ನೂರು ವರ್ಷದ ಹಳೆಯ ಕಟ್ಟಡದ ಮನಗಳಿದ್ದು ಮಳೆಗಾಳದಲ್ಲಿ ನಿರಂತರ ಮಳೆಯಿಂದಾಗಿ ಮನೆಯ ಕೊಠಡಿಗಳು ಸೋರಿ ಹಾನಿಯಾಗಿತ್ತಿದೆ ಎಂದು ಬಡಾವಣೆ ನಿವಾಸಿ ಶಿವುಕುಮಾರ ಎಮ್ ಗೋಕುಳ ಅವರು ಅಸಮಾಧನ ವ್ಯಕ್ತಪಡಿಸಿದರು.
ಈ ಕುರಿತು ಪ್ರಕಟಣೆ ನೀಡಿದ ಅವರು ಸುಮಾರು 1923 ರಲ್ಲಿ ಈ ಕಟ್ಟಡಗಳು ಕೇಂದ್ರ ಸರಕಾರದ ವತಿಯಿಂದ ನಿರ್ಮಾಣ ಮಾಡಲಾಗಿದ್ದು,ಇದರಿಂದ ಈಗ ಈ ಕಟ್ಟಡಗಳು ಮಳೆ ಬಂದು ಪೂರ್ತಿಯಾಗಿ ಸೋರುತ್ತಿವೆ.ಇದರಿಂದ ಅಲ್ಲಿನ ನಿವಾಸಿಗಳು ಮಳೆಯಲ್ಲೇ ಜೀವನ ನಡೆಸುತ್ತಿದ್ದಾರೆ. ಈ ಕುರಿತು ಸುಮಾರು ಬಾರಿ ಈ ಹಿಂದೆ ಜಿಲ್ಲಾಡಳಿತಕ್ಕೆ ಮನವಿ ಮಡಿದರು ಯಾವುದೇ ಪ್ರಯೋಜನವಾಗಿಲ್ಲ. ಈ ಎಂ.ಎಸ್.ಕೆ.ಮಿಲ್ ಬಡಾವಣೆಗೆ ಸಂಬಂಧಪಟ್ಟ ಅಧಿಕಾರಿಗಳು ಈ ಕಡೆ ಗಮನ ಹರಿಸುತ್ತಿಲ್ಲ.ಈ ದುರ್ಬಲ ಸ್ತಿತಿಯಲ್ಲಿರುವ ಮನೆಗಳ ಕಟ್ಟಡಗಳ ಬಗ್ಗೆ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಯಾವುದೇ ಕ್ರಮಕೈಗೊಳುತ್ತಿಲ್ಲ ಎಂದು ಅವರು ಆರೋಪಿಸಿದರು.
ಕೂಡಲೇ ಜಿಲ್ಲಾಧಿಕಾರಿಗಳು ಹಾಗೂ ಮಹಾನಗರ ಪಾಲಿಕೆಯ ಅಧಿಕಾರಿಗಳು ಈ ಕಟ್ಟಡಗಳ ಕಡೆ ಗಮನ ಹರಿಸಿ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ದುಸ್ಥಿತಿಯಲ್ಲಿರುವ ಮನೆಗಳನ್ನು ದುರಸ್ಥಿತಿ ಮಾಡಿಕೊಡಬೇಕು ಎಂದು ಅವರು ಮನವಿ ಮಾಡಿಕೊಂಡರು.
