ಪಾವಗಡ: ಹೋಬಳಿ ಮಟ್ಟದ ಪ್ರೌಢಶಾಲಾ ವಿಭಾಗದ ಕ್ರೀಡಾಕೂಟವನ್ನು ಉದ್ಘಾಟನೆಯನ್ನು ನೆರವೇರಿಸಿ ಕ್ರೀಡಾಪಟುಗಳು ಸೋಲು-ಗೆಲುವು ಸಮಾನವಾಗಿ ಸ್ವೀಕರಿಸಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಇಂದ್ರಾಣಮ್ಮ ತಿಳಿದರು.
2024-25 ನೇ ಸಾಲಿನ ನೀಡಗಲ್ ಹೋಬಳಿಯ ಹೋಬಳಿ ಮಟ್ಟದ ಪ್ರೌಢಶಾಲ ವಿಭಾಗದ ಕ್ರೀಡಾಕೂಟವನ್ನು ಪಟ್ಟಣದ ರಾಜೀವ ಗಾಂಧಿ ಕ್ರೀಡಾಂಗಣದಲ್ಲಿ ಗುರುವಾರ ಆಯೋಜನೆ ಮಾಡಿಲಾಗಿತ್ತು.
ಕ್ರೀಡೆಯಲ್ಲಿ ಎಲ್ಲರೂ ಗೆಲ್ಲಲು ಸಾಧ್ಯವಿಲ್ಲ ಉತ್ತಮ ಆಟವನ್ನು ಆಡಿದಂತ ಕ್ರೀಡಾ ಪಟುಗಳು ಮಾತ್ರ ಗೆಲ್ಲಲು ಸಾಧ್ಯವಾಗುತ್ತದೆ, ಆದ್ದರಿಂದ ಸೋತರು ಕೂಡಾ ನೀವು ಸಮಾನ ಮನಸ್ಸಲ್ಲಿಂದ ಗೆಲ್ಲುವವರಿಗೆ ಶುಭಾಶಯ ತಿಳಿಸಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಕ್ರೀಡಾಪಟುಗಳಿಗೆ ಅವರು ತಿಳಿಸಿದರು.
ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಶಂಕರಪ್ಪ ಅವರು ಮಾತನಾಡಿ ವಿದ್ಯಾರ್ಥಿಗಳಿಗೆ ಓದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಕ್ರೀಡೆ ಓದಿನ ಜೊತೆ ಜೊತೆಗೆ ಕ್ರೀಡೆಯನ್ನು ಆಡುವುದನ್ನು ಅಲವಡಿಸಿಕೊಳ್ಳಬೇಕು, ಕ್ರೀಡೆಯು ಕೇವಲ ಆಟವಷ್ಟೇ ಅಲ್ಲಾ ಆರೋಗ್ಯಕ್ಕೂ ಉಪಯುಕ್ತವಾಗಿದೆ ಹಾಗಾಗಿ ಓದಿನ ಜೊತೆಗೆ ಕ್ರೀಡೆಯನ್ನು ರೂಡಿಸಿಕೊಳ್ಳಿ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ತಾಲ್ಲೂಕು ದೈಹಿಕ ಶಿಕ್ಷಣ ಅಧಿಕಾರಿ ಬಸವರಾಜು,ಬಿ.ಆರ್.ಸಿ.ವೆಂಕಟೇಶ್, ನಿವೃತ್ತ ದೈಹಿಕ ಶಿಕ್ಷಕರಾದ ಹನುಮಂತ ರಾಯಪ್ಪ, ದೈಹಿಕ ಶಿಕ್ಷಕರು,ಕ್ರೀಡಾಪಟುಗಳು ಹಾಗೂ ಕ್ರೀಡಾಭಿಮಾನಿಗಳು ಹಾಜರಾಗಿದ್ದರು.
ವರದಿ:ಕೆ.ಮಾರುತಿ ಮುರಳಿ