ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನಲ್ಲಿ ಮನನೊಂದ ಪಿಜಿ ವಿದ್ಯಾರ್ಥಿಗಳು ಕಾಂಗ್ರೆಸ್ ಸರ್ಕಾರಕ್ಕೆ ಚಿ* ತು* ಎಂದು ಉಗಿದಿದ್ದಾರೆ ಏಕೆಂದರೆ ನಾವು 2023-24 ನೇ ಸಾಲಿನಲ್ಲಿ ಪೋಸ್ಟ ಗ್ರ್ಯಾಜುವೇಟ್ ಅಡ್ಮಿಷನ್ ದಾಖಲಾತಿ ಮಾಡಿಕೊಂಡು ಇಂದಿಗೆ ಒಂದು ವರ್ಷಗಳು ಕಳೆಯುತ್ತಿದ್ದರು ಎಸ್ ಎಸ್ ಪಿ ಸ್ಕಾಲರ್ಶಿಪ್ ಸರ್ಕಾರ ಕೊಟ್ಟಿಲ್ಲ ಇದರಿಂದ ನಮ್ಮ ಶೈಕ್ಷಣಿಕ ಸಾಧನೆಗೆ ಸಿದ್ರಾಮಯ್ಯನ ಸರ್ಕಾರ ವಿದ್ಯಾರ್ಥಿಗಳಿಗೆ ಕೂಡಲೆ ಪೆಟ್ಟು ಕೊಟ್ಟು ಶೈಕ್ಷಣಿಕವಾಗಿ ಹಿಂದೆ ಉಳಿಸಿದ್ದಾರೆ.ನಮ್ಮ ವಿದ್ಯಾರ್ಥಿ ವೇತನವನ್ನು ಬೇರೆ ಯಾವುದೋ ಪಂಚ ಗ್ಯಾರೆಂಟಿಗಳಿಗೆ ಬಳಸಿಕೊಂಡು ನಮಗೆ ಅನ್ಯಾಯ ಮಾಡುತ್ತಿದೆ. ಕೇವಲ ಕೆಲವೆ ಕೆಲವು ದಿನಗಳು ಕಾಲವಕಾಶ ಸರ್ಕಾರಕ್ಕೆ ಕೊಡುತ್ತೇವೆ ಒಂದು ವೇಳೆ ಸ್ಕಾಲರ್ಶಿಪ್ ಕೊಡಲು ವಿಳಂಬ ಮಾಡಿದರೆ ನಾವು ಬಡ ವಿದ್ಯಾರ್ಥಿಗಳು ನಮ್ಮ ಹತ್ತಿರ ದುಡ್ಡಿಲ್ಲ ದಾಖಲಾತಿ ರದ್ದಾಗುತ್ತದೆ ದಯವಿಟ್ಟು “ನಮ್ಮ ಹಣ ನಮ್ಮ ಹಕ್ಕು” ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ಈ ಸ್ಕಾಲರ್ಶಿಪ್ ಬರದೆ ಹೋದರೆ ಮುಂಬರುವ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಿ ವಿಧಾನಸೌಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡುತ್ತೇವೆ ಎಂದು ವಿದ್ಯಾರ್ಥಿಗಳು ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.
ವರದಿ: ಚಂದ್ರಶಾಗೌಡ ಮಾಲಿ ಪಾಟೀಲ್ (ಜೇವರ್ಗಿ)