ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಜನಪರ ಹೋರಾಟಗಾರ ಸಂಗಮೇಶ ಎನ್ ಜವಾದಿ

ಬೀದರ್:ರೈತಪರ ಹಾಗೂ ಬಡ ಜನರಪರ ಹೋರಾಟದ ಧ್ವನಿ, ಅಂಕಣಕಾರರು, ಪರಿಸರ ಸಂರಕ್ಷಕರು, ಸಾಂಸ್ಕೃತಿಕ ಸಂಘಟಕರು ಮತ್ತು ಬರಹಗಾರರಾಗಿ ಸಂಗಮೇಶ ಎನ್ ಜವಾದಿ ಅವರು ಹೆಸರಾಗಿದ್ದಾರೆ.

ಸಂಗಮೇಶ ಎನ್ ಜವಾದಿ ಅವರು 1984ರ ಆಗಸ್ಟ್ 2 ರಂದು ಬೀದರ ಜಿಲ್ಲೆಯ ಚಿಟಗುಪ್ಪ ತಾಲೂಕಿನ ಕೊಡಂಬಲ ಗ್ರಾಮದಲ್ಲಿ ಜನಿಸಿದರು. ವಿದ್ಯಾರ್ಥಿಯಾಗಿದ್ದ ದಿನಗಳಲ್ಲಿಯೇ ಓದು, ಬರಹದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ಜವಾದಿ ಅವರ ಕತೆ, ಕವನ, ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಾ ಬಂದಿವೆ.

ಜವಾದಿ ಅವರು ಹಲವು ತೆರದಲ್ಲಿ ಬರಹಗಳನ್ನು ಮೂಡಿಸುತ್ತಾ ಬಂದಿದ್ದಾರೆ. ಸಂಘಟನೆ ಮಾಡುವುದರಲ್ಲಿ ಎತ್ತಿದ ಕೈ, ಎಂತದೇ ಸಮಸ್ಯೆ ಬಂದರೂ, ಅಂಜದೆ ಅಳುಕದೆ ಹೋರಾಟ ಮಾಡುವ ಮನೋಧರ್ಮದ ಮೇಧಾವಿ ಈ ಜವಾದಿಯವರು.
ಎಂತದ್ದೇ ಸಮಸ್ಯೆ ಇದ್ದರೂ ಸ್ಪಂದನೆ ಮಾಡುವ ದೊಡ್ಡ ಗುಣ ಇವರಲ್ಲಿ ಎದ್ದು ಕಾಣುತ್ತದೆ. ಸರ್ವರಿಗೂ ಸಹಾಯ ಮಾಡುವ ಮಾನವೀಯತೆಯ ಸಾಕಾರ ಮೂರ್ತಿ ಈ ಜವಾದಿಯನರು ಎಂದರೆ ಖಂಡಿತವಾಗಿಯೂ ತಪ್ಪಾಗಲಾರದು.

ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದನೆ ಮಾಡುವಂತಹ ಹೃದಯ ಶ್ರೀಮಂತಿಕೆ. ನೇರ ನುಡಿಯ ವ್ಯಕ್ತಿತ್ವ, ಹೆಚ್ಚು ಪ್ರಚಾರ ಬಯಸದ ಸರಳ ಸ್ನೇಹ ಜೀವಿ.

ಪರಿಸರ ಸಂರಕ್ಷಣೆ, ಸಾಮಾಜಿಕ ಸೇವೆ, ಸಾಂಸ್ಕೃತಿಕ ಸಂಘಟನೆ,ಮಕ್ಕಳ ಮತ್ತು ವಿಕಲಚೇತನರ ಅಭಿವೃದ್ಧಿಗಾಗಿ ಸೇವಾ ಕೈಂಕರ್ಯಗಳು ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ನಿಸ್ವಾರ್ಥದಿಂದ ಹಗಲಿರುಳು ದುಡಿಯುತ್ತಿದ್ದಾರೆ.

ಜವಾದಿ ಅವರು ವರದಕ್ಷಿಣೆಗಾಗಿ ನಡೆಯುವ ದೌರ್ಜನ್ಯ, ಪರಿಸರ ಮಾಲಿನ್ಯದಿಂದ ಆಗುವ ಅಪಾಯ, ಕೊಲೆ, ಮಕ್ಕಳ ಮೇಲೆ ನಡೆಯುವ ಲೈಂಗಿಕ ಹಿಂಸೆ ಮುಂತಾದ ಪ್ರಕರಣಗಳನ್ನು ಕೈಗೆತ್ತಿಕೊಂಡು ಹೋರಾಟ ನಡೆಸಿದವರು.ಹಲವು ನಿಟ್ಡಿನಲ್ಲಿ ಸಮಾಜವನ್ನು ಒಂದುಗೂಡಿಸಿ ಜನಪರ ಹೋರಾಟ ನಡೆಸುತ್ತಾ ಬಂದವರು. ಕೌಶಲ್ಯ ಅಭಿವೃದ್ಧಿಯಲ್ಲಿ ವಿಶೇಷ ಕೌಶಲ್ಯಗಳನ್ನು ಕಲಿಸುವ ಮೂಲಕ ಮಹಿಳೆಯರಿಗೆ ವಿಶೇಷವಾಗಿ ಗ್ರಾಮೀಣ ಭಾಗದ ಮಹಿಳೆಯರಿಗೆ ಟೈಲರಿಂಗ್ ಯಂತ್ರಗಳನ್ನು ಕೊಡಿಸುವಂತಹ ಕೆಲಸ ಮಾಡಿದ್ದು ಅಭಿನಂದನಾರ್ಹರು. ಗ್ರಾಮೀಣ ಭಾಗದಲ್ಲಿ ಅನೇಕ ರೈತರಿಗೆ ಹಸುಗಳು, ಕೃಷಿ ಯಂತ್ರಗಳು, ಇನ್ನಿತರ ಕೃಷಿ ಸೌಲಭ್ಯಗಳನ್ನು ಕೊಡಿಸುವ ಮೂಲಕ ರೈತರ ಸಮಗ್ರ ಅಭಿವೃದ್ಧಿಗೆ, ಸಮಗ್ರ ವಿಕಾಸಕ್ಕೆ ಪೂರಕವಾದಂತ ಅನೇಕ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದಾರೆ.

ನಾ ಕಂಡ ಸಾಂಸ್ಕೃತಿಕ ಚಿಂತಕರು ಕೃತಿಗೆ ಗುಲಬರ್ಗಾ ವಿಶ್ವವಿದ್ಯಾಲಯದಿಂದ ರಾಜ್ಯೋತ್ಸವ ಪ್ರಶಸ್ತಿ, ಬೀದರ ಜಿಲ್ಲಾಡಳಿತದ ವತಿಯಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ.
ಭಾಲ್ಕಿ ಹಿರೇಮಠ ಸಂಸ್ಥಾನದ ವತಿಯಿಂದ ಡಾ. ಚನ್ನಬಸವ ಪಟ್ಟದ್ದೇವರು ಸಾಹಿತ್ಯ ಯುವ ಪ್ರಶಸ್ತಿ 2022 ,
ಹಾರಕೊಡ ಮಠದ ವತಿಯಿಂದ ಚನ್ನವೀರ ರತ್ನ ಪ್ರಶಸ್ತಿ 2019
ರಾಷ್ಟ್ರೀಯ ಬಸವ ದಳದ ವತಿಯಿಂದ ಹಮ್ಮಿಕೊಂಡ ಕಲ್ಯಾಣ ಪರ್ವದಲ್ಲಿ ಸೇವಾ ರತ್ನ ಪ್ರಶಸ್ತಿ 2021 ಸೇರಿದಂತೆ 50ಕ್ಕೂ ಹೆಚ್ಚು ಪ್ರಶಸ್ತಿಗಳು. ನೂರಕ್ಕೆ ಹೆಚ್ಚು ಗೌರವ ಸನ್ಮಾನಗಳು ಶ್ರೀಯುತರ ಸೇವಾ ಕೈಂಕರ್ಯಗಳಿಗೆ ಸಂದಿವೆ.

ಜವಾದಿ ಅವರು ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಬೀದರ ಜಿಲ್ಲೆಯ ಜಿಲ್ಲಾಧ್ಯಕ್ಷರು, ರಾಷ್ಟ್ರೀಯ ದೆಹಾಂಗದಾನ ಸಮಿತಿ ಬೀದರ್ ಜಿಲ್ಲೆಯ ಅಧ್ಯಕ್ಷರು, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ, ಜಿಲ್ಲಾ ಸಾವಯವ ಕೃಷಿ ಪರಿವಾರದ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಹತ್ತಾರು ಸಂಘ ಸಂಸ್ಥೆಗಳ ಜವಾಬ್ದಾರಿಗಳನ್ನು ಹೊತ್ತಿಕೊಂಡು ನಿಷ್ಕಲ್ಮಶ ಮನಸ್ಸಿನಿಂದ ಈ ನಾಡಿನ ಉನ್ನತಿಗಾಗಿ, ನಾಡಿನ ಸರ್ವಾಂಗೀಣ ಅಭಿವೃದ್ಧಿಗಾಗಿ ದುಡಿಯುತ್ತಿದ್ದಾರೆ.

ಹಾಗಾಗಿ ಬಂಧುಗಳೇ ಇಂದು ಇವರ ಜನ್ಮದಿನದ. ಪ್ರಯುಕ್ತ ಸಂಗಮೇಶ ನಾಗಶೆಟ್ಟಿ ಜವಾದಿ ರವರಿಗೆ ಈ ಸಂದರ್ಭದಲ್ಲಿ ಶುಭಾಶಯಗಳು ಹೇಳುತ್ತೇವೆ. ಇನ್ನಷ್ಟು ಸೇವಾ ಕೈಂಕರ್ಯಗಳು ನಾಡಿಗೆ ಸಲ್ಲಿಸಲಿ ಎಂದು ತುಂಬು ಹೃದಯದಿಂದ ಶುಭ ಹಾರೈಸುತ್ತೇವೆ.

-ಬಸವರಾಜ ಮಂಕಲ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ