ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ವಿಶೇಷ ಶಾಲಾ ಸಮವಸ್ತ್ರ ವಿತರಣೆ

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಸಮೀಪದ ಹೊನ್ನರಹಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರದ ವಿಶೇಷ ಸಮವಸ್ತ್ರವನ್ನು ಎಸ್ ಡಿ ಎಂ ಸಿ ಅಧ್ಯಕ್ಷ ರಾಮನಗೌಡ ಪವಾಡಿಗೌಡ್ರ ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಇಲಾಖೆ ಮಕ್ಕಳಿಗೆ ಕೊಡ ಮಾಡುವ ಎರಡು ಜೊತೆ ಸಮವಸ್ತ್ರವಲ್ಲದೆ ಶನಿವಾರಕೊಮ್ಮೆ ಧರಿಸಲು ವಿಶೇಷ ಸಮವಸ್ತ್ರವನ್ನು ಶಾಲೆಯ ಎಸ್ ಡಿ ಎಂ ಸಿ ಹಾಗೂ ಶಾಲಾ ಸಿಬ್ಬಂದಿಯ ಅಪೇಕ್ಷೆಯ ಮೇರೆಗೆ ಪಾಲಕರು ತಮ್ಮ ಸ್ವಂತ ಖರ್ಚಿನಲ್ಲಿ ಕೊಡಿಸಿದ್ದು ಶಾಲಾ ಮಕ್ಕಳಲ್ಲಿ ಶಿಸ್ತು ಬೆಳೆಸಿಕೊಳ್ಳಲು ಸಹಕಾರಿಯಾಗಿದೆ. ಸರಕಾರ ಪೂರಕ ಪೌಷ್ಠಿಕ ಆಹಾರಗಳಾದ ಹಾಲು, ಮೊಟ್ಟೆ, ಶೇಂಗಾ ಚಿಕ್ಕಿ, ರಾಗಿ ಮಾಲ್ಟ್ ಕೊಟ್ಟಿದೆ. ಗುಣಮಟ್ಟದ ಶಿಕ್ಷಣಕ್ಕಾಗಿ ಉಚಿತ ಪಠ್ಯಪುಸ್ತಕ, ಬೋಧನೋಪಕರಣಗಳು, ಪ್ರತಿಭಾವಂತ ಶಿಕ್ಷಕರನ್ನು ನೀಡಿದೆ. ಹಲವಾರು ಸೌಲಭ್ಯಗಳನ್ನು ಹೊಂದಿರುವ ಈಗಿನ ಸರಕಾರಿ ಶಾಲೆಗಳು ಯಾವುದೇ ಖಾಸಗಿ ಶಾಲೆಗಳಿಗಿಂತ ಕಡಿಮೆ ಇಲ್ಲ ಆದ್ದರಿಂದ ಮಕ್ಕಳು ಆಸಕ್ತಿಯಿಂದ ಓದಿ ವಿದ್ಯಾವಂತರಾಗಬೇಕು ಎಂದರು.

ಎಸ್‌ಡಿಎಂಸಿ ಸದಸ್ಯ ಸಂಗಪ್ಪ ಈರಣ್ಣವರ ಮಾತನಾಡುತ್ತ, ಮಕ್ಕಳು ವೈಯಕ್ತಿಕ ಸ್ವಚ್ಛತೆ, ನೈರ್ಮಲ್ಯ, ಶಿಸ್ತು, ಸಂಯಮಕ್ಕೆ ಒತ್ತು ನೀಡುವ ಜೊತೆಗೆ ಕಲಿಕೆಯಲ್ಲೂ ಮುಂದೆ ಬಂದು ಶಾಲೆ ಮತ್ತು ಹೆತ್ತವರಿಗೆ ಕೀರ್ತಿ ತರಬೇಕೆಂದು ಕರೆ ನೀಡಿದರು.
ಶಿಕ್ಷಕ ಎಸ್ ಎಸ್ ಲಾಯದಗುಂದಿ ಮಾತನಾಡಿ, ಶಾಲಾ ಅಭಿವೃದ್ಧಿಯಲ್ಲಿ ಸಮುದಾಯದ ಸಹಕಾರವು ಅತಿ ಅವಶ್ಯವಾಗಿದೆ. ಆ ನಿಟ್ಟಿನಲ್ಲಿ ನಮ್ಮ ಶಾಲೆ ಮುಂಚೂಣಿಯಲ್ಲಿದೆ ಎಂದರು.
ಶಿಕ್ಷಕರಾದ ಎಂ ಬಿ ವಂದಾಲಿ, ಎಸ್ ಎಲ್ ಕಣಗಿ, ಅಶೋಕ ಬಳ್ಳಾ, ಬಿ ಎನ್ ಗಟ್ಟಿಗನೂರ ಉಪಸ್ಥಿತರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ