ಬಾಗಲಕೋಟೆ: ಬೇವೂರಿನ ಶ್ರೀ ಪರಪ್ಪ ಸಂಗಪ್ಪ ಸಜ್ಜನ ಕಲಾ ಮಹಾವಿದ್ಯಾಲಯದ ಎನ್.ಎಸ್.ಎಸ್. ಶಿಬಿರಾರ್ಥಿಗಳಿಂದ ದತ್ತುಗ್ರಾಮ ಚಿಟಗಿನಕೊಪ್ಪ ಗ್ರಾಮದಲ್ಲಿ ವಿವಿಧ ಕಡೆಗಳಲ್ಲಿ ಶ್ರಮದಾನ ಕಾರ್ಯಗಳು ಜರುಗಿದವು.
ಗ್ರಾಮದ ಸಾರ್ವಜನಿಕ ದೇವಸ್ಥಾನಗಳನ್ನು ಸ್ವಚ್ಛಗೊಳಿಸಿವುದು, ಶಾಲಾ ಆವರಣವನ್ನು ಸಮತಟ್ಟಗೊಳಿಸುವುದು, ಆರೋಗ್ಯದ ಬಗ್ಗೆ ಕಾಳಜಿ ಮೂಡಿಸುತ್ತಾ ಗ್ರಾಮದ ಚರಂಡಿಗಳ ಸ್ವಚ್ಛತಾ,ರಸ್ತೆಯ ಇಕ್ಕೆಲಗಳ ಸ್ವಚ್ಛತಾ ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳು ಭಾಗವಹಿಸಿದ್ದರು.
ಸಸಿಗಳನ್ನು ನೆಟ್ಟು ಪರಿಸರ ಪ್ರೇಮ ತೋರಿದ ಶಿಬಿರಾರ್ಥಿಗಳು:
ಚಿಟಗಿನಕೊಪ್ಪ ಗ್ರಾಮದ ಶಾಲಾ ಆವರಣದ ವಿವಿಧ ಕಡೆಗಳಲ್ಲಿ, ಗ್ರಾಮದ ರಸ್ತೆಯ ಎಡಬಲಗಳಲ್ಲಿ ನಾನಾ ಬಗೆಯ ಸಸಿಗಳನ್ನು ನೆಡುವ ಭಾಗವಾಗಿ ಆಲ,ಬೇವು,ಅಶೋಕ, ಕರಿಬೇವು, ತೇಗ,ಹೆಬ್ಬೇವು, ಬಾದಾಮಿ, ಮುಂತಾದ ಸಸಿಗಳನ್ನು ನೆಟ್ಟು ಸಸ್ಯ ಸಂಪತ್ತಿನ ಬಗ್ಗೆ ಕಾಳಜಿ ಮೂಡಿಸುತ್ತಾ ಪರಿಸರ ಪ್ರೇಮ ಮೆರೆದರು.
ಶಾಲಾ ಕಾರ್ಯಕ್ರಮ ಕಟ್ಟೆ ದುರಸ್ತಿ:
ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯ ಮುಂಭಾಗದಲ್ಲಿನ ಕಾರ್ಯಕ್ರಮ ವೇದಿಕೆಯ ಕಟ್ಟೆಯನ್ನು ದುರಸ್ತಿಗೊಳಿಸುವ ಕಾರ್ಯದಲ್ಲಿ ಎನ್.ಎಸ್.ಎಸ್. ಶಿಬಿರಾರ್ಥಿಗಳು ಭಾಗಿಯಾಗಿ ವೇದಿಕೆಯ ಕಟ್ಟೆಯನ್ನು ಎತ್ತರಗೊಳಿಸಿ, ಮೆಟ್ಟಿಲುಗಳ ವ್ಯವಸ್ಥೆ ಕಲ್ಪಿಸಿ ಶಾಲಾ ವೇದಿಕೆಯನ್ನು ಸುಸಜ್ಜಿತವಾಗಿ ಮರು ನಿರ್ಮಾಣ ಮಾಡಿ ಅದೇ ವೇದಿಕೆಯಲ್ಲಿ ಶಿಬಿರಾರ್ಥಿಗಳು ವಿವಿಧ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.