ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ರಾಮದುರ್ಗ:ಅಧಿಕಾರಿಗಳ ನೆರಳಲ್ಲಿ ಟ್ಯಾಕ್ಟರ್ ಮೂಲಕ ಅಕ್ರಮ ಮರಳು ದಂಧೆ

ಬೆಳಗಾವಿ:ಅಕ್ರಮ ಮರಳಿನ ಬಗ್ಗೆ 112 ಗೆ ಕರೆ ಮಾಡಿ ದೂರು ಸಲ್ಲಿಸಿದಾಗ ಪೊಲೀಸರು ಬರುತ್ತಾರೆ ಎಂದು ಹೇಳಿದರು ರಾಮದುರ್ಗ 112 ದಿಂದ ನನಗೆ ಕರೆ ಮಾಡಿ ನಾವು ಬರೋದು ಲೇಟು ಆಗುತ್ತೆ ಅಂತ ಹೇಳಿ ಒಂದು ಗಂಟೆ ಬಿಟ್ಟು ಬಂದರು ಅಕ್ರಮ ಮರಳು ತುಂಬಿದ ಟ್ಯಾಕ್ಟರ್ ಅಷ್ಟರಲ್ಲಿ ಹೋಗಿತ್ತು .
ಅಕ್ರಮ ಮರಳಿನ ಬಗ್ಗೆ ಎಸ್ ಪಿ ಸಾಹೇಬರಿಗೂ ಕೂಡಾ ಫೋನಿನ ಮೂಲಕ ದೂರು ನೀಡಲಾಗಿದೆ
ಅಕ್ರಮ ಮರಳಿನ ಬಗ್ಗೆ ರಾಮದುರ್ಗ ತಹಶೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ಇವರಿಗೆ ಫೋನಿನ ಮುಖಾಂತರ ಹೇಳಿದರೆ ಇವರು ಪೊಲೀಸ್ ಠಾಣೆಗೆ ತಿಳಿಸಿ ಎಂದು ಹೇಳಿದರು. ಇದಾದ ನಂತರ ರಾಮದುರ್ಗ ಪೊಲೀಸ್ ಠಾಣೆ ಪಿಎಸ್ಐ ಸುನಿಲ್ ಕುಮಾರ್ ನಾಯಕ್ ಇವರಿಗೆ ಅಕ್ರಮ ಮರಳಿನ ಬಗ್ಗೆ ತಿಳಿಸಿದರೆ ಇವರು ಹೇಳುತ್ತಾರೆ ತಹಸಿಲ್ದಾರ್ ಅವರಿಗೆ ತಿಳಿಸಿ ಎಂದು ಹೇಳಿದರು.
ಅಧಿಕಾರಿಗಳೇ ಹೀಗೆ ಹೇಳಿದರೆ ಅಕ್ರಮ ಮರಳು ತಡೆಯುವವರು ಯಾರು?
ಇವರ ಮಾತುಗಳನ್ನು ಕೇಳಿದರೆ ಸಂಪೂರ್ಣ ಅಧಿಕಾರಿಗಳ ನೆರಳಲ್ಲಿ ಅಕ್ರಮ ಮರಳು ದಂಧೆ ನಡೀತಾ ಇದೆ ಎಂದು ಸಾರ್ವಜನಿಕರಲ್ಲಿ ಚರ್ಚೆ ಆಗ್ತಾ ಇದೆ.

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನಲ್ಲಿ ಅಕ್ರಮ ಮರಳು ದಂಧೆ ಎಗ್ಗಿಲ್ಲದೆ
ರಾಜಾರೋಷವಾಗಿ ನಡೆಯುತ್ತಿದ್ದರೂ ಅಕ್ರಮ ತಡೆಯಬೇಕಿದ್ದ ಅಧಿಕಾರಿಗಳು ಮಾತ್ರ ಇಲ್ಲಿ
ಏನು ನಡೆಯುತ್ತಿಲ್ಲವೆಂಬಂತೆ ಜಾಣ ಕುರುಡುತನ ಪ್ರದರ್ಶನದ ಮಾಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.

ರಾಮದುರ್ಗ ತಾಲೂಕಿನಲ್ಲಿ ಸಿಸಿ ಟಿವಿ ಕ್ಯಾಮೆರಾ ಇದ್ದರೂ ಕೂಡ ಇಷ್ಟೆಲ್ಲಾ ಅಕ್ರಮ ಮರಳನ್ನು ಟ್ರ್ಯಾಕ್ಟರ್ ಮೂಲಕ ಸಾಗಿಸುವುದು ಸೋಜಿಗದ ಸಂಗತಿಯಾಗಿದೆ.
ಹಾಗಾದರೆ ರಾಮದುರ್ಗದಲ್ಲಿ ಸಿಸಿಟಿವಿ ಕ್ಯಾಮೆರಾ ಇರುವುದು ಯಾಕೆ?
ಅಕ್ರಮ ಮರಳು ದಂಧೆಕೋರರಿಗೆ ಕಡಿವಾಣ ಹಾಕಬೇಕಾದ ಅಧಿಕಾರಿಗಳಿಂದಲೇ ದಂಧೆಕೋರರಿಗೆ ಸಾತ್ ಸಿಗುತ್ತಿದೆ.
ಸುರೇಬಾನ ಪೋಲಿಸ್ ಠಾಣೆ ಹಾಗೂ ರಾಮದುರ್ಗ ಪೊಲೀಸ ಉಪಾಧೀಕ್ಷಕರ
ಕಾರ್ಯಾಲಯ ಮುಂದೆನೇ ಅಕ್ರಮ ಮರಳು ತುಂಬಿದ ಟ್ಯಾಕ್ಟರ್ಗಳು ರಾಜಾರೋಷವಾಗಿ ಹಾದು ಹೋಗುತ್ತಿವೆ.ರಾಮದುರ್ಗ ತಾಲ್ಲೂಕಿನಲ್ಲಿ ಒಂದು ವರ್ಷದಿಂದ ಅಕ್ರಮ ಮರಳು ದಂಧೆ ರಾಜಾರೋಷವಾಗಿ ನಡೆಯುತ್ತಾ ಇದೆ. ಮಲಪ್ರಭಾ ನದಿ ಉದ್ದಕ್ಕೂ ಚಾಲನೆ ಕಂಡಿದೆ ನದಿ ತೀರದಲ್ಲಿ ಹಾಗೂ ಹಳ್ಳದಲ್ಲಿ ಅಕ್ರಮ ಮರಳು ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ.
ಇದರ ಬಗ್ಗೆ ರಾಮದುರ್ಗ ತಾಲೂಕ ಆಡಳಿತ ಇವರಿಗೆ ಅಕ್ರಮ ಮರಳು ದಂಧೆ ತಡೆಯಬೇಕೆಂದು ದಿನಾಂಕ: 29/05/2024 ರಂದು ಅರ್ಜಿ ಸಲ್ಲಿಸಿದರು ಕೂಡಾ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ. ಮಲಪ್ರಭಾ ನದಿ ಪಾತ್ರದ ಕೆಲವು ಸ್ಥಳದಲ್ಲಿ ಅನಧಿಕೃತವಾಗಿ ಮರಳು ಎತ್ತುವ ಕೆಲಸ ನಡೆಯುತ್ತಿದೆ ಇಷ್ಟಾದರೂ ತಾಲೂಕು ಆಡಳಿತ ಅಕ್ರಮ ಮರಳು ದಂಧೆ ತಡೆಯುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಸಾರ್ವಜನಿಕ
ವಲಯದಲ್ಲಿ ಚರ್ಚೆಯಾಗುತ್ತಿದೆ.
ರಾಮದುರ್ಗ ತಾಲೂಕಿನ ಹೋಲಿಗೊಪ್ಪ, ತುರನೂರು, ಸುರೇಬಾನ, ಕೊಳಚಿ, ಅವರಾದಿ,
ಗೊನ್ನಾಗರ, ಕಲಾಲ, ಕಿತ್ತೂರು, ಮುಳ್ಳೂರು,ಚಿಪ್ಪಲಕಟ್ಟಿ, ಉಜ್ಜಿನ ಕೊಪ್ಪ, ಕಟ್ಟಕೋಳ, ಕೆ ಜುನಿಪೇಠ, ಹಳೆ ತೊರಗಲ, ಸಂಗಳ, ಸೇರಿದಂತೆ ಇನ್ನೂ ಅನೇಕ ಗ್ರಾಮಗಳಲ್ಲಿ ಮಲಪ್ರಭಾ ಹಾಗೂ ಹಳ್ಳದ ಪಾತ್ರದಲ್ಲಿ ಮರಳು ಎತ್ತುವ ಕೆಲಸ ನಡೆದಿದೆ.
ಮರಳುಕೋರರಿಗೆ ಯಾರ ಭಯವಿಲ್ಲದೆ ಅಕ್ರಮ ಮರಳುದಂಧೆ ನಡೆಸಿ
ರಾಮದುರ್ಗ ತಾಲೂಕಿನ ಸಂಪನ್ಮೂಲ ಲೂಟಿ ಮಾಡುತ್ತಿರುವುದು ಖೇದಕರ ಸಂಗತಿಯಾಗಿದೆ. ಕೆಲವೊಂದು ಕಡೆ ಖಾಸಗಿ ಜಮೀನಿನಲ್ಲಿ ಮರಳು ತೆಗೆಯುವಂತಿಲ್ಲ ಎಂಬ ನಿಯಮಗಳು ಇದ್ದರೂ ಕೂಡ ಸರಕಾರದ ಆದೇಶವನ್ನು ಗಾಳಿಗೆ ತೂರಿ
ತಮಗೆ ಇಷ್ಟ ಬಂದ ಹಾಗೆ ಮರಳು ತುಂಬುವ ಕೆಲಸ ನಡೆಯುತ್ತಿದೆ.
ಪ್ರತಿ ದಿನ ರಾಮದುರ್ಗ ತಾಲೂಕಿನಲ್ಲಿ ಸುಮಾರು 20 ರಿಂದ 30 ಟ್ಯಾಕ್ಟರ್ಗಳ ಮೂಲಕ ಬೇರೆ ಬೇರೆ ಸ್ಥಳಗಳಿಗೆ ಮರಳು ತುಂಬಿಕೊಂಡು ಹೋಗುತ್ತಿವೆ. ಇದರ ಬಗ್ಗೆ ಸಾಕಷ್ಟು ಬಾರಿ ಅಧಿಕಾರಿಗಳ ಗಮನಕ್ಕೆ ತಂದರು ಅಧಿಕಾರಿಗಳು ಜಾಣ ಕುರುಡುರಾಗಿರುವುದು ಬೇಸರದ ಸಂಗತಿಯಾಗಿದೆ.
ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಕೂಡ ವ್ಯರ್ಥ,ಹಗಲು ರಾತ್ರಿ ಎನ್ನದೇ ಬೇಕಾಬಿಟ್ಟಿ ನಡೆಯುತ್ತಿರುವ ಅಕ್ರಮ ಮರಳು ದಂಧೆ ನಡೆಯುತ್ತಿದ್ದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ. ಎಸ್. ಗುಳೇದ ಇತ್ತ ಗಂಭೀರ ಗಮನ ಹರಿಸಬೇಕಿದೆ.

ವರದಿ ಕರಿಯಪ್ಪ ಮಾ ಮಾದರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ