ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ರವರ ಪುತ್ತಿಳಿಗೆ ಮಾಲಾರ್ಪಣೆ ಮಾಡುವುದರ ಮೂಲಕ ಮತ್ತು ಮಾದಿಗ ದಂಡೋರ ರಾಷ್ಟ್ರೀಯ ಅಧ್ಯಕ್ಷರಾದ ಮಂದ ಕೃಷ್ಣ ಮಾದಿಗ ರವರ ಮತ್ತು ಪ್ರೋ.ಬಿ ಕೃಷ್ಣಪ್ಪನವರ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡುವುದರ ಮೂಲಕ ವಿಜಯೋತ್ಸವ ಆಚರಿಸಲಾಯಿತು.
ಈ ಕಾರ್ಯವನ್ನು ಕುರಿತು ಮಾತನಾಡಿದ ದಲಿತ ಮುಖಂಡರಾದ ಸಿ ಕೆ ತಿಪ್ಪೇಸ್ವಾಮಿ ರವರು 30 ವರ್ಷಗಳಿಂದ ಪರಿಶಿಷ್ಟ ವರ್ಗಗಳ ಒಳಮೀಸಲಾತಿ ವರ್ಗೀಕರಣಕ್ಕಾಗಿ ಹೋರಾಟ ನಡೆಸಿದ ಮಂದ ಕೃಷ್ಣ ಮಾದಿಗರವರಿಗೆ ಮತ್ತು ಪ್ರೋ. ಬಿ ಕೃಷ್ಣಪ್ಪನವರಿಗೆ ಅಂಭಿನಂದನೆಗಳನ್ನು ಸಲ್ಲಿಸಿದರು ನಂತರ ಒಳಮೀಸಲಾತಿ ವರ್ಗೀಕರಣಕ್ಕಾಗಿ ಮನೆ ಮಕ್ಕಳನ್ನು ಬಿಟ್ಟು ಬೀದಿಗಿಳಿದು ಹೋರಾಟ ನಡೆಸಿದ ಎಲ್ಲಾ ದಲಿತ ಮುಖಂಡರಿಗೂ ಅಭಿನಂದನೆ ಸಲ್ಲಿಸಿ ಅವರ ಹೋರಾಟವನ್ನು ಸ್ಮರಿಸಿದ ತಿಪ್ಪೇಸ್ವಾಮಿ ರವರು ನೇರವಾಗಿ ರಾಜ್ಯ ಸರ್ಕಾರಕ್ಕೆ ಅತಿ ಜರೂರಾಗಿ ವರ್ಗೀಕರಣ ಪ್ರಕ್ರಿಯೆಯನ್ನು ರಾಜ್ಯದಲ್ಲಿ ಜಾರಿಗೆ ತರುವಂತೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರು ಹಾಗೇನಾದರೂ ವರ್ಗೀಕರಣ ಪ್ರಕ್ರಿಯೆಯನ್ನು ಜಾರಿಗೆ ತರುವಲ್ಲಿ ಮೀನಾಮೇಷ ಮಾಡಿದರೆ ಮುಂಬರುವ ದಿನಗಳಲ್ಲಿ ಮತದಾನದ ಮೂಲಕ ತಕ್ಕ ಪಾಠ ಕಲಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಂತರ ಮಾತನಾಡಿದ ಹನುಮಂತರಾಯಪ್ಪನವರು ವರ್ಗೀಕರಣ ಹೋರಾಟದಲ್ಲಿ ಭಾಗಿಯಾದ ಎಲ್ಲಾ ದಲಿತ ಮುಖಂಡರಿಗೆ ಧನ್ಯವಾದಗಳು ಹೇಳಿದರು. ನಂತರ ರಾಜ್ಯದಲ್ಲಿ ಅಹಿಂದ ಹೆಸರು ಹೇಳಿಕೊಂಡು ರಾಜ್ಯದಲ್ಲಿ135 ಜನ ಶಾಸಕರನ್ನು ಪಡೆದು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯನವರೇ ಇಷ್ಟು ದಿನ ನೀವು ವರ್ಗೀಕರಣಕ್ಕೆ ಕಾನೂನು ತೊಡಕು ಇದೆ ಎಂದು ಸಾಬೂಬು ಹೇಳುತ್ತಾ ಬಂದಿದ್ದೀರಿ ಈಗ ಅದಕ್ಕೆಲ್ಲಾ ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದೆ ಆದ್ದರಿಂದ ಕೂಡಲೇ ಈ ವರ್ಗೀಕರಣ ಪ್ರಕ್ರಿಯೆಯನ್ನು ರಾಜ್ಯದಲ್ಲಿ ಜಾರಿಗೆ ತರುವಂತೆ ಆಗ್ರಹಿಸಿದರು ಹಾಗೇನಾದರೂ ನೀವು ಉಢಾಪೇ ಮಾತುಗಳನ್ನು ಹಾಡುತ್ತಾ ವರ್ಗೀಕರಣ ಪ್ರಕ್ರಿಯೆಯನ್ನು ಮಾಡದಿದ್ದ ಪಕ್ಷದಲ್ಲಿ ರಾಜ್ಯಾದಂತ ಹೋರಾಟ ಮಾಡಿ ನಿಮ್ಮ ಮನೆಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಈ ವಿಜಯೋತ್ಸವದಲ್ಲಿ ದಲಿತ ಮುಖಂಡರಾದ ವಿ ನಾಗೇಶ್,ಪೆದ್ದಣ್ಣ,ಕಡಪಲಕೆರೆ ನರಸಿಂಹಪ್ಪ, ಬಿ ಹೊಸಹಳ್ಳಿ ಮಲ್ಲಿಕಾರ್ಜುನ, ನಾಗಭೂಷಣ, ಬಿ ಎಸ್ ಪಿ ಮಂಜು ಕಡಪಲಕೆರೆ ಹನುಮಂತರಾಯಪ್ಪ ಇನ್ನೂ ಅನೇಕ ದಲಿತ ಮುಖಂಡರು ಭಾಗವಹಿಸಿದ್ದರು.
ವರದಿ-ಪೃಥ್ವಿರಾಜು.ಜಿ.ವಿ