ಕೊಟ್ಟೂರು:ತಾಲೂಕು ಕೇಂದ್ರವಾದ ಕೂಡ್ಲಿಗಿ ಪಟ್ಟಣದಿಂದ ನಮ್ಮ ಗ್ರಾಮಗಳಿಗೆ ಕೇವಲ 2 ಸರ್ಕಾರಿ ಬಸ್ಸಗಳು ಬರುತ್ತಿದ್ದು ಕೂಡ್ಲಿಗಿಯಿಂದ ಸೂಲದಹಳ್ಳಿ, ಪೂಜಾರಹಳ್ಳಿ, ಗಂಗಮ್ಮನಹಳ್ಳಿ, ಸುಂಕದಕಲ್ಲು ಗ್ರಾಮಗಳ ಮಾರ್ಗದಿಂದ ನಮ್ಮ ಗ್ರಾಮಗಳಿಗೆ ಬೆಳಿಗ್ಗೆ 9 ಗಂಟೆ 15 ನಿಮಿಷಕ್ಕೆ ಸರ್ಕಾರಿ ಬಸ್ಸು ಬರುತ್ತಿದ್ದು ಅದರೆ ಈ ಎರಡು ಬಸ್ಸುಗಳು ರಾಂಪುರ ಗ್ರಾಮಕ್ಕೆ ಬರುವಷ್ಟರಲ್ಲಿ ಬಸ್ಸುಗಳಲ್ಲಿ ಜಾಗ ಇಲ್ಲದೆ ಸಾರ್ವಜನಿಕರು ವಿಧ್ಯಾರ್ಥಿಗಳು ಸಂಪೂರ್ಣ ತುಂಬಿರುತ್ತವೆ.
ರಾಂಪುರ ಗ್ರಾಮದ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ವ್ಯವಹಾರಿಕವಾಗಿ ಕೊಟ್ಟೂರು ಪಟ್ಟಣವನ್ನು ಅವಲಂಭಿಸಿರುವ ಸಾರ್ವಜನಿಕರಿಗೆ ಸಾರಿಗೆ ಸಂಪರ್ಕ ವ್ಯವಸ್ಥೆ ಹೆಚ್ಚಾಗಿ ಇರುವುದಿಲ್ಲ ಆದ್ದರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಕೊಟ್ಟೂರಿಗೆ ಹೋಗಲು ಅಗುತ್ತಿಲ್ಲಾ ಹಾಗೂ ಮುಂದಿನ ಗ್ರಾಮವಾದ ಹೊಸಕೋಡಿಹಳ್ಳಿ ಗ್ರಾಮದವರಿಗೂ ಕೂಡಾ ಇದೇ ಪರಿಸ್ಥಿತಿ ಇರುವುದರಿಂದ ದಿನಾಲೂ ಗ್ರಾಮಗಳಿಗೆ ಬರುತ್ತಿರುವ ಬಸ್ಸುಗಳನ್ನು ಹತ್ತದೆ ಆಗುತ್ತಿಲ್ಲವಾದ್ದರಿಂದ ಬಸ್ ನಲ್ಲಿ ಜಾಗವಿಲ್ಲದೆ ಪಾದಯಾತ್ರೆ ಮೂಲಕ ಕೊಟ್ಟೂರಿಗೆ ಬರುತ್ತಿರುವುದು ಬಹಳ ವಿಷಾಧನೀಯವಾಗಿದೆ ಹಾಗಾಗಿ ವಿಧ್ಯಾರ್ಥಿಗಳ ಹಿತದೃಷ್ಟಿಯಿಂದ ರಾಂಪುರ ಮತ್ತು ಹೊಸಕೋಡಿಹಳ್ಳಿ ಗ್ರಾಮಗಳಿಗೆ ಮಾತ್ರ ದಿನಾಲು ಬೆಳಿಗ್ಗೆ 9 ಗಂಟೆಗೆ ಮತ್ತು ಮಧ್ಯಾಹ್ನ 02-30 ಕ್ಕೆ ಬಸ್ ಬಿಡಬೇಕೆಂದು
ಕೊಟ್ಟೂರು ತಾಲೂಕು ರಾಂಪುರ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ರಾಂಪುರ ಮತ್ತು ಹೊಸಕೋಡಿ ಹಳ್ಳಿ ಗ್ರಾಮಗಳಿಗೆ ಹೆಚ್ಚುವರಿ ಸರ್ಕಾರ ಬಸ್ ಗಳನ್ನು ಬಿಡುವ ಹಾಗೂ ನಿಗದಿತ ಬಸ್ ಬಿಡುವಂತೆ ಗ್ರಾಮ ಪಂಚಾಯತಿ ಸದಸ್ಯರು ಮತ್ತು ಸಾರ್ವಜನಿಕರು ಕೂಡ್ಲಿಗಿ ಡಿಪೋ ಮ್ಯಾನೇಜರಿಗೆ ಮನವಿ ಸಲ್ಲಿಸಲು ಪಟ್ಟಣದ ಸರ್ಕಾರಿ ಬಸ್ ಕಂಟ್ರೋಲ್ ರೂಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಅಂಗಡಿ ನಾಗರಾಜ ರಾಂಪುರ,ಬಸಣ್ಣ ಹೊಸಕೋಡಿಹಳ್ಳಿ,ಶಿಕ್ಷಕರಾದ ಎಕಾಂತ,ಕನ್ನಕಟ್ಟಿ ಸಂತೋಷ ಹಾಗೂ ಇನ್ನಿತರರು ಇದ್ದರು.
ವರದಿ:ವೈ.ಮಹೇಶ್ ಕುಮಾರ್, ಕೊಟ್ಟೂರು