ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದಲ್ಲಿ ನಡೆಯುತ್ತಿರುವ ಕೆಶಿಪ್ ರಸ್ತೆ ಕಾಮಗಾರಿಯ ಬ್ಯಾರಿ ಕೇಡ್ ಗುಣಮಟ್ಟದಿಂದ ಅಳವಡಿಸಿ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಬಿಲ್ ತಡೆಹಿಡಿಯಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎಂ.ಆರ್. ಮಂಜುನಾಥ್ ಸೂಚನೆ ನೀಡಿದರು.
ಹನೂರು ಪಟ್ಟಣದ ಪ್ರಮುಖ ಮುಖ್ಯ ರಸ್ತೆ ಎರಡು ಬದಿಯಲ್ಲಿ ಸಾರ್ವಜನಿಕರ ಸುರಕ್ಷತೆಗಾಗಿ ನಿರ್ಮಾಣ ಮಾಡುತ್ತಿರುವ ಬ್ಯಾರಿಕೇಡ್ ನಿರ್ಮಾಣ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ಪಟ್ಟಣದ ಆರ್ ಎಸ್ ದೊಡ್ಡಿ ಬಳಿ ಜರುಗಿತು.
108 ಕೋಟಿ ವೆಚ್ಚದ ಕೆಸಿಎಫ್ ರಸ್ತೆ ಕಾಮಗಾರಿ ಪರಿಶೀಲಿಸಿದ ನಂತರ ಗುತ್ತಿಗೆದಾರರ ಜೊತೆ ಮಾತನಾಡಿದ ಅವರು ಎರಡು ರಸ್ತೆ ಬದಿಯಲ್ಲಿ ಮಾಡಲಾಗುತ್ತಿರುವ ಬ್ಯಾರಿಕೇಡ್ ಗುಣಮಟ್ಟದಿಂದ ಕೂಡಿಲ್ಲ ಜೊತೆಗೆ ಅದಕ್ಕೆ ಬಣ್ಣ ಬಳಿಯುತ್ತಿರುವುದು ಮಣ್ಣು ಮತ್ತು ಎರಡು ಬದಿಯಲ್ಲಿರುವ ಧೂಳನ್ನು ಸ್ವಚ್ಛಗೊಳಿಸಲು ಬೆಳೆಯುತ್ತಿರುವ ಬಣ್ಣ ಸಹ ಕಳಪೆ ಮಟ್ಟದ್ದು ಹೀಗಾಗಿ ನಡೆಯುತ್ತಿರುವ ಕಾಮಗಾರಿ ಉತ್ತಮ ಗುಣಮಟ್ಟದ ಪೈಪ್‌ಗಳನ್ನು ಬಳಸಿ ಬ್ಯಾರಿಕೇಡ್ ನಿರ್ಮಾಣ ಮಾಡಬೇಕು ಕಳಪೆ ಗುಣಮಟ್ಟ ಕಂಡು ಬಂದರೆ, ಶಿಸ್ತು ಕ್ರಮ ಕೈಗೊಳ್ಳುವ ಮೂಲಕ ಬಿನ್ ತಡೆಹಿಡಿಯಲು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಪರಿಶೀಲಿಸಿ ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ಎಲ್ಲೇಮಾಳ ಗ್ರಾಮ ಪಂಚಾಯಿತಿ ಸದಸ್ಯ ಚಿನ್ನವೆಂಕಟ್,ಮುಖಂಡರುಗಳಾದ ತಂಗವೇಲು, ಚಣ್ಣಲಿಂಗನಹಳ್ಳಿ ವೆಂಕಟೇಶ್ ಹಾಗೂ ಇನ್ನಿತರ ಮುಖಂಡರುಗಳು ಉಪಸ್ಥಿತರಿದ್ದರು.
ವರದಿ:ಉಸ್ಮಾನ್ ಖಾನ್