ಬಾಗಲಕೋಟೆ/ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ನಗರ್ ಕೆ ಎಚ್ ಡಿ ಸಿ ಕಾಲೋನಿಯ ಪಿ ಎಂ ಭಾಂಗಿ ವೃತ್ತದಲ್ಲಿ ಹತ್ತನೆಯ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯನ್ನು ಸರಳ ರೀತಿಯಿಂದ ಆಚರಣೆ ಮಾಡಿ,ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯಾಧ್ಯಕ್ಷ ಶಿವಲಿಂಗ ಟಿರ್ಕಿ, ಯಾವ ರೀತಿ ರೈತರಿಗೆ ಕಿಸಾನ್ ಸಮ್ಮಾನ್ ಎಂದು ಪ್ರೋತ್ಸಾಹ ಮಾಡುತ್ತಿದ್ದಾರೆ ಅದೇ ರೀತಿ ಈ ನೇಕಾರಿಗೆ ಕೂಡಾ” ಬುನಕರ್ ಸಮ್ಮಾನ್” ಯೋಜನೆಯನ್ನು ರಾಜ್ಯಾದ್ಯಂತ ಹಾಗೂ ದೇಶಾದ್ಯಂತ ಜಾರಿ ಮಾಡುವುದರ ಮೂಲಕ ನೇಕಾರಿಗೆ ಪ್ರೋತ್ಸಾಹ ನೀಡಬೇಕು ಹಾಗೂ ಕಾರ್ಮಿಕ ಸೌಲಭ್ಯಗಳನ್ನು ಕೂಡ ನೀಡಬೇಕು ಹಾಗೂ ನೇಕಾರರ ನೇರ ಉತ್ಪಾದನೆ ಮಾಡಿದ ಮಾರುಕಟ್ಟೆ ಮಾಡಿಕೊಳ್ಳಲು ಸಲುವಾಗಿ ಬಸ್ಸು ನಿಲ್ದಾಣ,ರೈಲು ನಿಲ್ದಾಣ, ವಿಮಾನ ನಿಲ್ದಾಣ ಹಾಗೂ ಮಹಾನಗರಗಳಲ್ಲಿ ಮಳಿಗೆಗಳನ್ನು ಒದಗಿಸುವುದರ ಮೂಲಕ ನೇಕಾರರಿಗೆ ಧನ ಸಹಾಯ ಮಾಡಿ ಪ್ರೋತ್ಸಾಹ ಮಾಡಬೇಕು ಹಾಗೂ ನೇರವಾಗಿ ನೇಕಾರರ ಉತ್ಪಾದನೆ ಮಾರುಕಟ್ಟೆಗೆ ಅನುಕೂಲತೆಯನ್ನು ಮಾಡಬೇಕು ಯಾವ ರೀತಿ ನಮ್ಮ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಾರಣಾಸಿಯನ್ನು ದತ್ತು ಪಡೆದು ನೇಕಾರ ಮತ್ತು ನೇಕಾರಿಕೆ ಯನ್ನು ಪ್ರೋತ್ಸಾಹ ಮಾಡುತ್ತಿದ್ದಾರೆ ಅದೇ ರೀತಿ ಕರ್ನಾಟಕದಲ್ಲಿಯೂ ಕೂಡ ನೈಪನ್ಯತೆ ಹೊಂದಿರುವಂತಹ ನೇಕಾರರನ್ನು ದತ್ತು ಪಡೆದುಕೊಂಡು ರಾಜ್ಯದ ನೇಕಾರರನ್ನು ಉಳಿಸುವುದು ಹಾಗೂ ಬೆಳೆಸುವಂತ ಕೆಲಸವನ್ನು ಕೇಂದ್ರ ಸರ್ಕಾರ ಮಾಡಬೇಕು ಎಂದು ಒತ್ತಾಯ ಮಾಡಿದರು.
ಕಳೆದ ಸರ್ಕಾರದ ಅವಧಿಯಲ್ಲಿ ಕೆ ಎಚ್ ಡಿ ಸಿ ಯ ನೂರಾರು ಕೋಟಿ ಹಗರಣ
ಕಳೆದ ಸರ್ಕಾರದ ಅವಧಿಯಲ್ಲಿ ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದಲ್ಲಿ ನೂರಾರು ಕೋಟಿ ಹಗರಣವಾಗಿವೆ ಅದರ ಮರುತನಿಖೆ ಆಗಬೇಕು ಆ ಹಣವನ್ನು ಈ ನಿಗಮಕ್ಕೆ ವಾಪಸ್ ತರುವಂತ ಕೆಲಸ ಸರ್ಕಾರ ಮಾಡಬೇಕು ಎಂದು ಒತ್ತಾಯ ಮಾಡಿದರು.
ಇದೇ ಸಂದರ್ಭದಲ್ಲಿ ಕೈಮಗ್ಗ ನೇಕಾರರ ಮುಖಂಡರ ಗಳಾದ ಸದಾಶಿವ್ ಗೋಂದಕರ್, ಲವಪ್ಪ ಮರಾಟೆ , ನಾಗಪ್ಪ ಬಾವಲಿತ್ತಿ,ಹಜರತ್ ಮುಲ್ಲಾ, ಶಂಕರ್ ಕೊಣ್ಣುರ್, ಮಹದೇವ್ ಹುನ್ನೂರ,ಮಾಧವಾನಂದ ಪೋರೆ,ಜೋತಾವರ್, ಮಹಾದೇವಿ ಮುಗಳೊಳ್ಳಿ, ಜಾಯಿದ ಕಿಲ್ಲೆದಾರ್, ಮಲಿಕ್ ಜಮಾದಾರ್, ಶ್ರೀಶೈಲ್ ಮುಗಳೊಳ್ಳಿ,s m ಪಾಟೀಲ್,ಅಕ್ಬರ್ ಜಮಾದಾರ್,ಪರಪ್ಪ ಬೆಳಗೆರೆ, ಅಶೋಕ್ ಮಾಚಕನೂರ್, ಮಹೇಂದ್ರ ಕವಿಶೆಟ್ಟಿ ಇನ್ನೂ ಅನೇಕರಿದ್ದರು .
ವರದಿ:ಮಹಿಬೂಬ್ ಎಂ ಬಾರಿಗಡ್ಡಿ