ಚಿಕ್ಕಬಳ್ಳಾಪುರ:ಎರಡು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಟಾವಿಗೆ ಬಂದಿದ್ದ ಹಾಗಲಕಾಯಿ ಗಿಡಗಳನ್ನು ದುಷ್ಕರ್ಮಿಗಳು ರಾತ್ರೋರಾತ್ರಿ ಕತ್ತರಿಸಿ ನಾಶ ಪಡಿಸಿರುವ ಘಟನೆ ಶಿಡ್ಲಘಟ್ಟ ತಾಲೂಕಿನ ಮೇಲೂರು ಗ್ರಾಮ ಪಂಚಾಯಿತಿಯ ಚೌಡಸಂದ್ರದಲ್ಲಿ ನಡೆದಿದೆ.
ಗ್ರಾಮದ ರೈತ ಸಿ.ಎಲ್ ಲಕ್ಷ್ಮೀಪತಿ ಅವರಿಗೆ ಸೇರಿದ ಎರಡು ಎಕರೆ ಜಮೀನಿನಲ್ಲಿ ಬೆಳೆದಿದ್ದ ಹಾಗಲಕಾಯಿ ಗಿಡಗಳನ್ನು ಕತ್ತರಿಸಿ ಸುಮಾರು 1 ಲಕ್ಷ ನಷ್ಟ ಉಂಟು ಮಾಡಿದ್ದಾರೆ ಎಂದು ಗ್ರಾಮಾಂತರ ಠಾಣೆ ಪೊಲೀಸರಿಗೆ ಲಕ್ಷ್ಮೀಪತಿ ದೂರು ನೀಡಿದ್ದಾರೆ.
ಲಕ್ಷ್ಮೀಪತಿ ಎಂಬ ರೈತನ ತೋಟದಲ್ಲಿ ಬಂದಿದ್ದ ಹಾಗಲಕಾಯಿ ಗಿಡಗಳನ್ನು ನಾಶ ಪಡಿಸಿದ ಘಟನೆ ನಡೆದಿದೆ. ಇತ್ತೀಚಿನ ದಿನಗಳಲ್ಲಿ ಇಂತಹ ಘಟನೆಗಳು ಹೆಚ್ಚುತ್ತಿವೆ. ಇದು ಕ್ಷಮಿಸಲಾರದ ದುಷ್ಕೃತ್ಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ರೈತರು ಸಾಲ ಸೋಲ ಮಾಡಿ ಬೆಳೆ ಇಟ್ಟು ಅದರಿಂದ ಬರುವ ಅಲ್ಪ ಸ್ವಲ್ಪ ಹಣಕಾಸಿನ ಮೇಲೆ ಬದುಕನ್ನು ರೂಪಿಸಿಕೊಳ್ಳುವ ಕನಸನ್ನು ಕಾಣುತ್ತಾರೆ. ಆದರೆ ಕಟಾವಿಗೆ ಬರುವ ಹಂತದಲ್ಲಿ ಈ ರೀತಿ ಆದರೆ ನೇಣುಹಾಕಿಕೊಳ್ಳುವಂತ ಸ್ಥಿತಿಗೆ ರೈತ ತಲುಪುತ್ತಾನೆ. ಇಂತಹ ಪರಿಸ್ಥಿತಿ ಯಾವ ರೈತರಿಗೂ ಬರಬಾರದು. ಈ ದುಷ್ಕೃತ್ಯಕ್ಕೆ ಕಾರಣರಾದ ಆರೋಪಿಗಳನ್ನು ಪತ್ತೆ ಹಚ್ಚಿ ಶಿಕ್ಷೆಕೆಗೆ ಒಳಪಡಿಸುವ ಮೂಲಕ ಮುಂದಿನ ದಿನಗಳಲ್ಲಿ ಇಂತಹ ಕೃತ್ಯಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು. ಎರಡು ಎಕರೆ ಭೂಮಿಯಲ್ಲಿ, ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಬಂಡವಾಳ ಹೂಡಿ ಹಾಗಲಕಾಯಿ ಬೆಳೆಯನ್ನು ಬೆಳೆದಿರುವ ರೈತ ಲಕ್ಷ್ಮೀಪತಿ ಮೊದಲ ಫಸಲಿನ ನಿರೀಕ್ಷೆಯಲ್ಲಿದ್ದ ರೈತ ಇದೀಗ ಬೆಳೆ ಕಳೆದುಕೊಂಡಿರುವ ಇವರು ದುಃಖದಲ್ಲಿದ್ದಾರೆ.
ವರದಿ ಗಗನ್ ಸಾಮ್ರಾಟ್ ,ಶಿಡ್ಲಘಟ್ಟ