ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ 78 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಏರ್ಪಡಿಸಲಾಗಿತ್ತು.
78ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾವಹಿಸಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಶಾಸಕ ಹೆಚ್.ವಿ ವೆಂಕಟೇಶ್ ತಾಲ್ಲೂಕಿನ ಸರ್ವತೋಮುಖ ಅಭಿವೃದ್ದಿಗೆ ನಮ್ಮ ತಂದೆಯಂತೆ ನಾನೂ ಸಹ ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ, ತಾಲ್ಲೂಕಿನ ಅಭಿವೃದ್ದಿಗಾಗಿ ಸರ್ಕಾರದ ಸಚಿವರ ಜೊತೆ ಚರ್ಚಿಸಿ ಹೆಚ್ಚಿನ ಅನುದಾನವನ್ನು ತಂದು ಅಭಿವೃದ್ದಿ ಮಾಡಲಾಗುತ್ತದೆ. ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಲಾಗಿದೆ. ಈ ಗ್ಯಾರಂಟಿಯಿಂದ ಕೆಲ ವರ್ಗದ, ಬಡವರು, ಕೂಲಿ ಕಾರ್ಮಿಕರು, ಹಿಂದುಳಿದ ಹಾಗೂ ಬಡತನ ರೇಖೆಗಿಂತ ಕೆಳಗಿರುವ ತಮ್ಮ ಕುಟುಂಬ ನಿರ್ವಹಣೆಗೆ ಗ್ಯಾರಂಟಿಗಳು ಉತ್ತಮ ಯೋಜನೆಗಳಾಗಿವೆ ಎಂದರು.
ತಾಲ್ಲೂಕು ತಹಶೀಲ್ದಾರ್ ಕಾರ್ಯಕ್ರಮದಲ್ಲಿ ಮಾತನಾಡಿ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಹೋರಾಟದ ಇತಿಹಾಸವಿದೆ. 78ನೇ ಸ್ವಾತಂತ್ರ್ಯ ದಿನೋತ್ಸವನ್ನು ಆಚರಿಸುತ್ತಿರುವ ಈ ದಿನ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವಿರರನ್ನು ನೆನೆದು ಗೌರವಿಸುವುದು ನಮ್ಮಲ್ಲರ ಆದ್ಯ ಕರ್ತವ್ಯವಾಗಿದೆ. ಸ್ವಾತಂತ್ರ್ಯ ಪಡೆಯಲು ಅನೇಕ ರೀತಿಯಾದ ಹೋರಾಟಗಳನ್ನು ನಡೆಸಲಾಗಿದೆ ಅದರಲ್ಲಿ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ, ಅಸಹಕಾರ ಚಳುವಳಿ, ಚೌರಿ – ಚೌರ ಚಳುವಳಿ ನಡೆಸಲಾಯಿತು. ಅನೇಕ ಹೋರಾಟಗಾರರು ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಹೋರಾಟಗಳು ಹಾಗೂ ಚಳುವಳಿಗೆ ಮಣಿದು 1947 ಆಗಸ್ಟ್ 15 ರಂದು ನಮಗೆ ಸ್ವಾತಂತ್ರ್ಯ ಸಿಕ್ಕಿದೆ ಎಂದು ಇತಿಹಾಸವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಈ ವೇಳೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಜಾನಕಿರಾಮ್, ಕ್ಷೇತ್ರ ಶಿಕ್ಷಣಾಧಿಕಾರಿ ಇಂದ್ರಾಣಮ್ಮ, ಪುರಸಭಾ ಮುಖ್ಯಾಧಿಕಾರಿ ಜಾಫರ್ ಷರೀಫ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಅನಿಲ್, ಸುರೇಶ್, ಹನುಮಂತಪ್ಪ, ವೃತ್ತ ನಿರೀಕ್ಷಕರಾದ ಸುರೇಶ್, ಗಿರೀಶ್, ಕೃಷಿ ಇಲಾಖೆಯ ಅಜೇಯ್ ಕುಮಾರ್, ಕಾರ್ಮಿಕ ನಿರೀಕ್ಷಕರಾದ ಹರೀಶ್ ಕುಮಾರ್, ಪುರಸಭೆಯ ಸದಸ್ಯರುಗಳಾದ ರಾಜೇಶ್, ರವಿ, ಇಮ್ರಾನ್, ನಾಗಭೂಷಣ್ ರೆಡ್ಡಿ, ಮೊಹಮ್ಮದ್ ಇಮ್ರಾನ್, ಅಂಜಪ್ಪ, ರೈತ ಸಂಘದ ನರಸಿಂಹರೆಡ್ಡಿ, ಪೂಜಾರಪ್ಪ ಸೇರಿದಂತೆ ತಾಲ್ಲೂಕು ಮಟ್ಟದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
ವರೆದಿ : ಕೆ.ಮಾರುತಿ ಮುರಳಿ