ಪಾವಗಡ: ಭಾರತ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯಲು ಹಲವಾರು ಹೋರಾಟಗಾರರ ಶ್ರಮ ಮತ್ತು ಬಲಿದಾನದ ಫಲವೇ ಕಾರಣ ಎಂದು ಹೆಚ್ ವಿ ಕುಮಾರಸ್ವಾಮಿ ತಿಳಿಸಿದರು.
ಪಟ್ಟಣದ ಶ್ರೀ ವೆಂಕಟೇಶ್ವರ ಆಂಗ್ಲ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ 78ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿ ದೇಶಪ್ರೇಮ ಬರಿ ಅಗಸ್ಟ್15ಕ್ಕೆ ಮಾತ್ರ ಸೀಮಿತವಾಗಿರಬಾರದು ಪ್ರತಿಯೊಬ್ಬ ಭಾರತೀಯನ ನರ ನರಗಳಲ್ಲಿಯೂ ದೇಶಪ್ರೇಮ ತುಂಬಿರಬೇಕು ಎಂದರು.
ಶಾಲಾ ಕಾಲೇಜುಗಳಲ್ಲಿ ವಾರಕ್ಕೆ ಒಮ್ಮೆಯಾದರೂ ಸ್ವಾತಂತ್ರ್ಯ ಸ್ವತಂತ್ರ ಹೋರಾಟಗಾರರ ಬಗ್ಗೆ ಮಕ್ಕಳಿಗೆ ತಿಳಿಸಿಕೊಡುವುದು ಅತ್ಯಗತ್ಯ ಎಂದರು.
ನಮ್ಮ ದೇಶದ ಇತಿಹಾಸ, ಸಂಸ್ಕೃತಿ, ಸಂಪ್ರದಾಯ, ಇಂದಿನ ಪೀಳಿಗೆಯ ಮಕ್ಕಳಿಗೆ ತಿಳಿಸಬೇಕು ಎಂದರು.
ಇಂದು ಪ್ರತಿಯೊಬ್ಬ ನಾಗರಿಕನು ನೆಮ್ಮದಿಯ ಸಮೃದ್ಧಿಯ ಜೀವನ ಸಾಗಿಸಲು ಸ್ವತಂತ್ರ ಹೋರಾಟಗಾರರ ತ್ಯಾಗದ ಪ್ರತಿಫಲವೇ ಆಗಿದೆ ಎಂದರು.
ಸ್ವಾತಂತ್ರ್ಯ ದಿನಾಚರಣೆ ಭಾರತೀಯರ ಪಾಲಿಗೆ ಒಂದು ಪವಿತ್ರವಾದ ದಿನ ಎಂದರು.
ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಶಾಲೆ ವಿದ್ಯಾರ್ಥಿಗಳು ದೇಶಭಕ್ತಿ ಗೀತಗಳಿಗೆ ನೃತ್ಯ ಪ್ರದರ್ಶನ ಮಾಡಲಾಯಿತು, ಶಾಲೆಯ ಪುಟಾಣಿ ಮಕ್ಕಳು ಸ್ವತಂತ್ರ ಹೋರಾಟಗಾರರು ವೇಷಗಳನ್ನು ಧರಿಸಿದ್ದು ಪ್ರಮುಖ ಆಕರ್ಷಣೆಯಾಗಿತ್ತು, ವೇಷಗಳನ್ನು ಧರಿಸಿದ ಮಕ್ಕಳಿಗೆ ಕಾರ್ಯಕ್ರಮದಲ್ಲಿ ಬಹುಮಾನವನ್ನು ವಿತರಿಸಲಾಯಿತು
ಸಂಸ್ಥೆಯ ಕಾರ್ಯದರ್ಶಿಯಾದ ಹೆಚ್ ವಿ ಕುಮಾರಸ್ವಾಮಿ ಯವರ ಹುಟ್ಟು ಹಬ್ಬದ ಪ್ರಯುಕ್ತ ಶ್ರೀ ವೆಂಕಟೇಶ್ವರ ಎಜುಕೇಶನಲ್ ಟ್ರಸ್ಟ್ ವತಿಯಿಂದ ಸಿಬ್ಬಂದಿಗಳು ಕೇಕ್ ಕತ್ತರಿಸಿ ಸಂಭ್ರಮಾಚರಿಸಿದರು.
ಕಾರ್ಯಕ್ರಮದಲ್ಲಿ ಜೈ ಗುರುದೇವ ಶಾಲೆಯ ಖಜಾಂಶಿ ಎನ್ ಪರoದಾಮರೆಡ್ಡಿ, ಕೆ.ಟಿ ಹಳ್ಳಿ ರಾಜೇಶ್, ಹಿರಿಯ ಮುಖಂಡ ಲಿಂಗದಹಳ್ಳಿ ಮಂಜುನಾಥ್, ಯೋಗಾನಂದ, ಪುರಸಭೆ ಮಾಜಿ ಅಧ್ಯಕ್ಷರಾದ ವೇಲುರಾಜು, ಪಟ್ಟ ಗೋವಿಂದಪ್ಪ, ನಾಗಾರ್ಜುನ ರೆಡ್ಡಿ, ಬಾಲಾಜಿ ಶಂಭು ಅಮರ್ , ಶಾಲೆಯ ಮುಖ್ಯ ಶಿಕ್ಷಕ , ಸಹ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರು ಹಾಜರಿದ್ದರು.
ವರದಿ. ಕೆ. ಮಾರುತಿ ಮುರಳಿ