ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಚಿಕ್ಕತಿರುಪತಿ ಸಮೀಪದ ಗೋಲ್ಡನ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ಸ್ ನ, ಸ್ಕೂಲ್, ಹಾಗೂ ಪಿ.ಯು ಕಾಲೇಜು ಸಹಯೋಗದಲ್ಲಿ ಇಂದು 78 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಧ್ವಜರೋಹಣವನ್ನು ನೆರವೇರಿಸಿ ಮಾತನಾಡಿದ ನೋಕಿಯಾ ಕಂಪನಿಯ ಪ್ರಧಾನ ವಾಸ್ತು ಶಿಲ್ಪಿಗಳಾದ ರಾಜೀವ್ ಶರ್ಮಾರವರು ಭಾರತ ದೇಶ ಭವ್ಯ ಪರಂಪರೆತೆಹೊಂದಿರುವ ಪ್ರಬುದ್ಧ ನೆಲ, ಈ ನೆಲದಲ್ಲಿ ಸುಮಾರು ವರ್ಷಗಳು ಬ್ರಿಟಿಷರ ಕಪಿಮುಷ್ಟಿಯಲ್ಲಿ ನಾವು ಅನುಭವಿಸಿದ ನೋವು,ಯಾತನೆ ಇವುಗಳಿಂದ ಮುಕ್ತಿ ಹೊಂದಿದ ಸುದಿನವೇ ಸ್ವಾತಂತ್ರ್ಯ ದಿನ ಆಗಿದೆ. ಈ ದೇಶದ ಸ್ವಾತಂತ್ರ್ಯ ಪಡೆಯಲು ತಮ್ಮ ದೇಹ ತ್ಯಾಗ ಬಲಿದಾನ ಮಾಡಿದ ಮಹಾನ್ ವ್ಯಕ್ತಿಗಳನ್ನು ಪ್ರತಿ ದಿನವು ಸ್ಮರಿಸುವಂತ ದಿನ ಆಗಬೇಕಾಗಿದೆ. ಅಂಬೇಡ್ಕರ್, ಗಾಂಧಿ, ತಿಲಕ್, ಭಗತ್ ಸಿಂಗ್, ಸರೋಜಿನಿ ನಾಯ್ಡು, ಸುಭಾಷ್ ಚಂದ್ರಬೋಸ್, ಲಾಲಾ ಲಾಜಪತ್ ರಾಯ್, ಇನ್ನೂ ಮುಂತಾದ ಸ್ವಾತಂತ್ರ್ಯ ಹೋರಾಟಗಾರರನ್ನು ನಾವು ಪೂಜಿಸಬೇಕು, ಸ್ಮರಿಸಬೇಕು ಓದಬೇಕು ಎಂದರು.
ನಾಗರಾಜ್ ಮಾತನಾಡಿ ಆಗಸ್ಟ್ 15, 1947 ಅದೆಷ್ಟೋ ಕೆಚ್ಚೆದೆಯ ವೀರರು, ರಾಷ್ಟ್ರ ಪ್ರೇಮಿಗಳು, ಹೋರಾಟಗಾರರು ಕಂಡ ಕನಸು ನನಸಾದ ದಿನ
ಈ ದಿನಕ್ಕಾಗಿ ಅದೆಷ್ಟೋ ಮಂದಿ ಜೀವ ಕಳೆದುಕೊಂಡಿದ್ದಾರೆ, ಬ್ರಿಟಿಷರ ಗುಂಡೇಟು ತಿಂದಿದ್ದಾರೆ, ರಕ್ತ ಹರಿಸಿದ್ದಾರೆ. ಇವರೆಲ್ಲಾ ತಮ್ಮ ಬದುಕನ್ನೇ ತೇಯ್ದು ಸ್ವಾತಂತ್ರ್ಯದ ಕನಸನ್ನು ಕಂಡಿದ್ದರು. ಈ ಕನಸು ನನಸಾದ ಕ್ಷಣಕ್ಕೆ ಈಗ 78ನೇ ವರ್ಷ ನಾವು ನಮ್ಮ ರಾಷ್ಟ್ರದ ಸ್ವಾತಂತ್ರ್ಯವನ್ನು ಆಚರಿಸುತ್ತಿರುವಾಗ ನಿಮಗೆ ಹೆಮ್ಮೆ ಮತ್ತು ಸಂತೋಷದ ದಿನವನ್ನು ಬಯಸುತ್ತೇವೆ. ಈ ಸ್ವಾತಂತ್ರ್ಯ ದಿನವು ಸ್ವಾತಂತ್ರ್ಯ ಮತ್ತು ಏಕತೆಯ ಮೌಲ್ಯಗಳನ್ನು ಎತ್ತಿಹಿಡಿಯಲು ನಮಗೆ ಸ್ಫೂರ್ತಿ ನೀಡಲಿ. ನಮ್ಮ ಶ್ರೀಮಂತ ಪರಂಪರೆಯನ್ನು ಮತ್ತು ನಾವು ಪ್ರೀತಿಸುವ ಸ್ವಾತಂತ್ರ್ಯವನ್ನು ಸದಾ ಆಚರಿಸೋಣ ಎಂದರು.
ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ದೇಶಭಕ್ತಿ ಗೀತೆಗಳು, ಮಕ್ಕಳ ಭಾಷಣ, ಪಿರಮಿಡ್ ಎಲ್ಲಾರ ಗಮನ ಸೆಳೆಯಿತು ಮಕ್ಕಳಿಗೆ ಸಿಹಿ ಹಂಚಿಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಗೋಲ್ಡನ್ ಇಂಟರ್ ನ್ಯಾಷನಲ್ ಸ್ಕೂಲ್ ನ ಪ್ರಾಂಶುಪಾಲರಾದ ಹುಸ್ನ ಹುಸೇನ್ ಉಪ ಪ್ರಾಂಶುಪಾಲರಾದ ಅಕ್ಬರ್ ಆಲಿ, ಮುಖ್ಯೋಪಾಧ್ಯಾಯರಾದ ಲಕ್ಷ್ಮಮ್ಮ, ತಬುಸುಂ, ಆಯೇಷಾ, ಹುಜರಾ, ನೇತ್ರಾವತಿ, ಮಹಮ್ಮದ್ ಷರೀಫ್ ಗೋಲ್ಡನ್ ಇಂಡಿಪೆಂಡೆಂಟ್ ಪಿ.ಯು. ಕಾಲೇಜಿನ ಪ್ರಾಂಶುಪಾಲರಾದ ಸೈಯದ್ ಶಾಕೀರ್, ಉಪನ್ಯಾಸಕಾರಾದ ವೆಂಕಟೇಶ್, ದಿವ್ಯಾ, ನವೀನ್, ದೈಹಿಕ ಶಿಕ್ಷಕರಾದ ಪದ್ಮಾವತಿ, ಸಂಪತ್, ಸಂಯೋಜಕರುಗಳು, ಶಿಕ್ಷಕರು, ಉಪನ್ಯಾಸಕರು, ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗ ಹಾಜರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.