ಧಾರವಾಡ: ಹಳೆ ಹುಬ್ಬಳ್ಳಿಯ ನವ ಅನಂದನಗರ ಮೊದಲನೇ ಬಸ್ ನಿಲ್ದಾಣ ಹತ್ತಿರದ ಉರ್ದು ಕನ್ನಡ ಸರ್ಕಾರಿ ಶಾಲೆ ಹತ್ತಿರ ಸಾಧನಾ ಏಜುಕೇಶನಲ್ ಮತ್ತು ವೆಲ್ಫೇರ್ ಸೊಸೈಟಿ ಕಚೇರಿಯ ಮುಂದೆ ಸಂಸ್ಥೆ ಅಧ್ಯಕ್ಷ ಶ್ರೀ ಯೂಸುಫ್ ಬೆಪಾರಿಯವರ ನೇತೃತ್ವದಲ್ಲಿ ಸದಸ್ಯರು ಸೇರಿದಂತೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸದಸ್ಯರು ಶ್ರೀ ಆರೀಫ್ ಬದ್ರಾಪೂರ ಅವರ ಕೈಯಿಂದ ಅಗಸ್ಟ್ 15 ರಂದು ಸ್ವಾತಂತ್ರ್ಯ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ಮಾತನಾಡಿದ ಸಾಧನಾ ಏಜುಕೆಶನಲ್ ಮತ್ತು ವೆಲ್ಫೇರ್ ಸೊಸೈಟಿ ವತಿಯಿಂದ ಶ್ರೀ ಯೂಸುಫ್ ಬೆಪಾರಿ ಅವರು ಈ ಸಂಸ್ಥೆಯ ಕಾರ್ಯಗಳು ಮತ್ತು ವೆಲ್ಫೇರ್ ಸೊಸೈಟಿ ಬಗ್ಗೆ ಮಾಹಿತಿ ನೀಡಿದರು. ಸುಮಾರು ಮೂರು ವರ್ಷಗಳಿಂದ ಸಾಮಾಜಿಕ ಕಾರ್ಯದಲ್ಲಿ ಭಾಗವಹಿಸಿ ಸರ್ಕಾರದಿಂದ ಅಂದ ಯೋಜನೆಗಳನ್ನು ಎಲ್ಲರಿಗೂ ತಲುಪುವಂತೆ ಮಾಡುತ್ತಿರುವ ಈ ಸಾಧನಾ ಎಜುಕೇಶನಲ್ ಮತ್ತು ವೆಲ್ಫೇರ್ ಸೊಸೈಟಿಯ ಕಚೇರಿ ಸ್ಥಾಪನೆಯಾಗಿ ಒಂದು ತಿಂಗಳಲ್ಲಿ ಸರ್ಕಾರದ ಅಡಿಯಲ್ಲಿ 10,000ದ ಲೋನು ಮುಲಕ. ಬಡವರಿಗೆ ನೀಡುವ ವ್ಯವಸ್ಥೆಯನ್ನು 50 ಜನರಿಗೆ ಮಾಡಿಕೊಡಲಾಗಿದೆ. ಇನ್ನು ಮುಂದೆ ಆಗುವಂತ ಯಾವುದೇ ಕೆಲಸವಾಗಲಿ ಅದಕ್ಕೆ ನಾವು ಸಿದ್ದರಾಗುತ್ತೇವೆ.ಶಿಕ್ಷಣವಾಗಲಿ,ಸಾಮಾಜಿಕವಾಗಲಿ, ಸಹಾಯಕವಾಗಲಿ,ಅಥವಾ ಕಾರ್ಮಿಕರ ಯೋಜನೆಗಳಾಗಲಿ ಸರಕಾರದಿಂದ ಯಾವ ಯೋಜನೆಗಳು ಬರುವಂತದ್ದಲ್ಲಿ ನಾವು ಮುಂದೆ ನಿಂತು ಅದನ್ನು ಬಡವರ ಮನೆಗೆ ತಲುಪುವಂತೆ ಮಾಡಿಕೊಡುತ್ತೇವೆ ಹಾಗೂ ಮುಂದಿನ ಬರುವ ದಿನಗಳಲ್ಲಿ ನಾವು ಕಾರ್ಮಿಕರ ಕಟ್ಟಡ ಸಂಸ್ಥೆಯಲ್ಲಿ ಭಾಗವಹಿಸಿ ಅದರಲ್ಲಿಯೂ ಸರ್ಕಾರದಿಂದ ಪಡೆಯುವಂತಹ ಯೋಜನೆಗಳನ್ನು ಕಾರ್ಮಿಕರಿಗೆ ತಲುಪವಂತೆಯೇ ಪ್ರಯತ್ನವನ್ನು ನೀಡುತ್ತೇವೆ ಎಂದರು. ನಾವು ಸಾಧನಾ ಎಜುಕೇಶನಲ್ ವೆಲ್ಫೇರ್ ಸೊಸೈಟಿಯಿಂದ. ಸಂಸ್ಥೆಯ ಸದಸ್ಯರು. ಶ್ರೀ ಶ್ರೀನಿವಾಸ ತಲ್ಪುರ್. ಶ್ರೀ ಸೈಯದ್ಬಸ್ತವಿ. ಶ್ರೀ ಹನೀಬ್ ಸಾಬ್ ಘೋಡೆವಾಲೆ. ಶ್ರೀ ರೈಮಾನ್ ಸಾಬ್ ಬೆಂಗಳೂರು. ಶ್ರೀ ರಬ್ಬಾನಿ ರೈಚೂರು. ಶ್ರೀ ಮಾಧಾರ ಸಾಬ್ ಬಂಕಾಪುರ್. ಶ್ರೀ ರಫಿಕ ಹುಕ್ಕೆರಿ. ಹಾಗೂ ಸದಸ್ಯರು ಸೇರಿ ಭಾಗವಹಿಸಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.