ತುಮಕೂರು:ಇಂದು ಕರಾಳ ಶ್ರಾವಣ ಶನಿವಾರ ಎಂದರೆ ತಪ್ಪಾಗಲಾರದು ಯಾಕೆಂದರೆ ಬೆಳಿಗ್ಗೆಯಿಂದ ಒಂದಿಲ್ಲೊಂದು ಕಹಿ ಅಹಿತಕರ ಘಟನೆಗಳ ಸುದ್ದಿ ಕಾಣ ಸಿಗುತ್ತಲೇ ಇವೆ…ಅದಕ್ಕೆ ಸಾಕ್ಷಿ ಈ ಘಟನೆ.
ಪಾವಗಡ ತಾಲ್ಲೂಕಿನ ನಿಡಗಲ್ ಹೋಬಳಿಯ ಕರೆಕ್ಯಾತನಹಳ್ಳಿ ಸ್ವಾರಮ್ಮ ದೇವಸ್ಥಾನದ ಸಮೀಪದ ಶಿರಾ ಮುಖ್ಯ ರಸ್ತಯಲ್ಲಿ ಅಪಘಾತದಲ್ಲಿ ಯುವಕನೋರ್ವನ ಪ್ರಾಣ ಪಕ್ಷಿ ಹಾರಿ ಹೋದ ಘಟನೆ ಮಧ್ಯಾಹ್ನ 1.30 ಸುಮಾರಿಗೆ ನಡೆದಿದೆ.
ಪಾವಗಡ ತಾಲ್ಲೂಕಿನ ಅರಸೀಕೆರೆ ಗ್ರಾಮದ ಸುಮಾರು 28 ವರ್ಷದ ಕುಮಾರ್ ತಂದೆ ತಿಮ್ಮಣ್ಣ ಎಂದು ತಿಳಿದು ಬಂದಿದೆ. ಎಸ್ಸಿ ಸಮಾಜದ ಈತ ಜೆಸಿಬಿ ಡ್ರೈವರ್ ಕೆಲಸ ಮಾಡ್ಕೊಂಡು ಬದುಕು ದೂಡುತ್ತಿದ್ದ ಎನ್ನಲಾಗಿದೆ..ಶ್ರಾವಣ ಶನಿವಾರ ಪಾವಗಡ ಪಟ್ಟಣದ ಶನಿಮಹಾತ್ಮ ಸ್ವಾಮಿ ದರ್ಶನಕ್ಕೆ ಬಂದು ವಾಪಸ್ ತನ್ನೂರಿಗೆ ಹೋಗುವಾಗ ಮಧ್ಯಾಹ್ನ ಈ ಘಟನೆ ನಡೆದಿದೆ.
ದುರಾದೃಷ್ಟವಶಾತ್ ಈತ ಪ್ರಯಾಣಿಸುತ್ತಿದ್ದ ದ್ವಿಚಕ್ರ ವಾಹನದ ಚಕ್ರ ಪಂಕ್ಚರ್ ಆಗಿದೆ ಬೆನ್ನೆಲ್ಲೆ ರಸ್ತೆಗೆ ಬಿದ್ದಿದ್ದಾನೆ,ಹಿಂಬದಿಯಿಂದ ಮತ್ಯಾವುದೋ ದೊಡ್ಡ ವಾಹನ ಇತನ ತಲೆಮೇಲೆ ಹತ್ತಿಸಿಕೊಂಡು ಹಾದು ಹೋಗಿದೆ ಪರಿಣಾಮ ಸ್ಥಳದಲ್ಲೇ ಹಸುನೀಗಿದ್ದಾನೆ
ತಲೆ ಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ
ಘಟನೆ ಮಾಹಿತಿ ಪಡೆದ ಅರಸೀಕೆರೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ತಾರಾಸಿಂಗ್ ಮತ್ತು ಸಿಬ್ಬಂಧಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಡೆಡ್ ಬಾಡಿಯನ್ನು ಪಾವಗಡ ಸರ್ಕಾರಿ ಆಸ್ಪತ್ರೆಗೆ ಕಳುಹಿಸುವ ಕೆಲಸ ಮಾಡಿದ್ದಾರೆ ಘಟನೆ ವಿವರವನ್ನು ಕಲೆ ಹಾಕುವ ಪ್ರಯತ್ನ ನಡೆಸುತ್ತಿದ್ದಾರೆ. ನಿಜಕ್ಕೂ ಭೀಭತ್ಸವಾದ ಘಟನೆ ಇದಾಗಿದ್ದು.ಪಾಪ ಕರ್ಮಗಳನ್ನು ಕಳೆದುಕೊಳ್ಳೋಣ ಎಂದು ಹರಕೆ ಹೊತ್ತು ಬಂದ ಭಕ್ತನ ಪ್ರಾಣ ಕ್ಷಣಾರ್ಧದಲ್ಲೇ ಹಾರಿ ಹೋಗಿದೆ.ಇನ್ನು ಮೃತ ದುರ್ದೇವಿಯ ಕುಟುಂಬಸ್ಥರು ಏನಾದರೂ ಕಣ್ಣಾರೆ ಕಂಡರೆ ಅವರ ಗೋಳು ಇನ್ನೆಷ್ಟಿರುತ್ತದೆಯೋ ಭಗವಂತನೇ ಬಲ್ಲ ಆತ್ಮಕ್ಕೆ ಶಾಂತಿ ಸಿಗಲಿ ಅವರ ಕುಟುಂಬಕ್ಕೆ ನೋವು ಬರಿಸುವ ಶಕ್ತಿ ಕರುಣಿಸಲಿ ಎಂದು ಅಷ್ಟೇ ಆಶೀಸೋಣ.
ವರದಿ: ಕೆ.ಮಾರುತಿ ಮುರಳಿ