ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಬಸ್ ನಿಲ್ದಾಣಕ್ಕೆ ಕೆಕೆಆರ್‌ಟಿಸಿ ಎಂ ಡಿ ಎo.ರಾಚಪ್ಪ ಹಾಗೂ ವಿಭಾಗೀಯ ಸಂಚಲನ ಅಧಿಕಾರಿಯಾದ ಮಲ್ಲಯ್ಯ ಸ್ವಾಮಿ ಹಿರೇಮಠ್ ಮತ್ತು ಕಾರ್ಮಿಕ ಕಲ್ಯಾಣ ಅಧಿಕಾರಿಗಳಾದ ಬಂಗಾರಪ್ಪ ಕಟ್ಟಿಮನಿ ವಡಗೇರಾ ಬಸ್ ನಿಲ್ದಾಣಕ್ಕೆ ಆಗಮಿಸಿ ಬಸ್ ಸಂಚಾರದ ತೊಂದರೆಗಳ ಬಗ್ಗೆ ವಿಚಾರಿಸಿದರು ಆಗ ವಡಗೇರಾ ತಾಲೂಕಿನ ಜನತೆಗೆ ರಾಯಚೂರಿಗೆ ಹೋಗಲು ಮತ್ತು ಗುಲ್ಬರ್ಗಕ್ಕೆ ಹೋಗಲು ಇನ್ನೂ ಹೆಚ್ಚು ಬಸ್ಸಿನ ವ್ಯವಸ್ಥೆ ಒದಗಿಸಿಕೊಡಬೇಕು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಬಸ್ಸಿನ ಅತವ್ಯಸ್ಥ ಇರುವುದರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಇನ್ನು ಹೆಚ್ಚು ಬಸ್ಸುಗಳನ್ನು ಬಿಟ್ಟು ವಿದ್ಯಾರ್ಥಿಗಳ ತೊಂದರೆಗಳು ತಪ್ಪಿಸಬೇಕು ಬೆಂಗಳೂರಿಗೆ ಗೂಗಲ್ ನಿಂದ ಹೋಗುವ ಬಸ್ಸು ವಡಗೇರಾಕ್ಕೆ ಬಂದು ಹೋಗಬೇಕು ಮತ್ತು ವಡಗೇರಾಕ್ಕೆ ಬಸ್ಸು ಡಿಪೋ ಮಾಡಿಕೊಡಬೇಕು ಹಾಗೂ ವಡಗೇರಾ ಬಸ್ ನಿಲ್ದಾಣಕ್ಕೆ ಕರೆಂಟಿನ ವ್ಯವಸ್ಥೆ ಸ್ವಚ್ಛತೆಯ ವ್ಯವಸ್ಥೆ ಗಿಡ ಮರಗಳ ಪಾಲನೆ ಮಾಡಿಕೊಡಬೇಕೆಂದು ಮನವಿ ಮಾಡಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಮಾನ್ಯ ಶ್ರೀ ಶ್ರೀನಿವಾಸ್ ಚಾಪಲ್ ತಹಶೀಲ್ದಾರರು,ವಡಗೇರಾ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಶರಣಗೌಡ ಉಳ್ಳೆ ಸೂಗೂರು ಸಿದ್ದನಗೌಡ ಕಾಡoನೋರ್ ಕರವೇ ಜಿಲ್ಲಾ ಸಂಚಾಲಕರು ಶರಣು ಇಟ್ಟಿಗಿ ನಮ್ಮ ಕರ್ನಾಟಕ ಸೇನೆ ತಾಲೂಕ ಅಧ್ಯಕ್ಷರು ಸಂತೋಷ್ ಬೊಜ್ಜಿ ಯಲ್ಲಪ್ಪ ನಾಟೇಕರ್ ಬಸವರಾಜ್ ಬೊಜ್ಜಿ ಹಾಗೂ ಗ್ರಾಮಸ್ಥರು ಹಾಜರಿದ್ದರು.
ವರದಿ: ಶಿವರಾಜ ಸಾಹುಕಾರ ವಡಗೇರಾ