ಬೈಕ್ ವೀಲಿಂಗ್,ಬೈಕ್ ಸ್ಟ್ಯಾಂಡ್ ಇತ್ತೀಚಿನ ಯುವಕರಲ್ಲಿ ಇದು ಹೆಚ್ಚುತ್ತಾ ಹೋಗುತ್ತಿದೆ.ಮೀಸೆ ಚಿಗುರದ ವಯಸ್ಸಿನಲ್ಲಿ ಹದಿಹರೆಯದ ವಿದ್ಯಾರ್ಥಿಗಳು ತಮ್ಮ ಮನಸ್ಸು ಇಚ್ಛೆಗೆ ಬಂದಂತೆ ಹೈವೇ ರೋಡ್ಗಳಲ್ಲಿ, ಹೆಣ್ಣು ಮಕ್ಕಳು ಇರುವ ಕಾಲೇಜು ಸ್ಥಳಗಳಲ್ಲಿ, ಅದರಲ್ಲೂ ರಸ್ತೆಯಲ್ಲಿ ಹೋಗೋ ಪ್ರಯಾಣಿಕ ನಡುವೆಯೂ ಯುವಕರು ತಮ್ಮ ಮನಸಿಗೆ ಬಂದಂತೆ ಬೈಕ್ ವೀಲಿಂಗ್ ಮಾಡುತ್ತಾ ಪ್ರಯಾಣಿಕರಿಗೂ ಕಿರಿಕಿರಿ ಮಾಡುವಂತಹ ಸಂದರ್ಭ ಹೆಚ್ಚಾಗುತ್ತಾ ಹೋಗುತಿದೆ. ಅದರಲ್ಲೂ ಕಾರ್,ಬೈಕ್ ಗಳನ್ನು ತಂದೆ ತಾಯಿಗಳು ಅವರ್ಗೆ ನೀಡುವುದರಿಂದ ಅವರು ಯಾವುದರ ಪರಿಜ್ಞಾನವಿಲ್ಲದೆ ತಮ್ಮ ಇಚ್ಛೆಗೆ ಡ್ರೈವಿಂಗ್ ಮಾಡುವುದರ ಮೂಲಕ ಕೆಲವು ಪ್ರಯಾಣಿಕರ ಪ್ರಾಣಕ್ಕೆ ಕುತ್ತು ತರುವ ಸಂದರ್ಭಗಳು ಹೆಚ್ಚಾಗುತ್ತಾ ಬಂದಿದೆ. ಬೈಕ್ ಹಿಂದೆ ಪ್ರೇಯಸಿದರೆ ಸಾಕು ಅವರನ್ನು ನೋಡದೆ ಅವರ ಮನಸ್ಸನ್ನು ಸಂತೋಷಪಡಿಸುವ ಸಲುವಾಗಿ ಡಬಲ್ ವೀಲಿಂಗ್, ತ್ರಿಬಲ್ ವಿನಿಂಗ್, ಮಾಡುವುದು.ಬೈಕ್ ಹ್ಯಾಂಡಲ್ ಎತ್ತಿ ಆರಿಸುವುದು. ಜೋರಾಗಿ ಶಬ್ದ ಮಾಡುವುದು,ಎದುರಿಗೆ ಬರುವ ಪ್ರಯಾಣಿಕರನ್ನ ಗದರಿಸುವುದು ಮತ್ತು ಎದುರಿಸುವುದು.ಇವುಗಳು ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿವೆ.
ಪ್ರಯಾಣಿಕರು ತಮ್ಮ ಜೀವನ ಹಂಗನ್ನು ತೊರೆದು ಇಂಥ ಪೋಲಿ ಪುಂಡರ ನಡುವೆ ಓಡಾಡುವುದೇ ದುಷ್ಟಕರ ಸಂಗತಿ.ಏನೇ ಆದರೂ ಸುರಕ್ಷಿತ ಜೀವನ ನಡೆಸುವುದಕ್ಕೆ ಪೊಲೀಸರು ಏನೇ ರೀತಿಯ ಕ್ರಮ ಕೈಗೊಂಡರು ಕೂಡ. ಕೆಲವು ಪೋಲಿ ಪುಂಡರು ಈ ನೀತಿ ನಿಯಮಗಳನ್ನು ಅನುಸರಿಸದೇ ತಾವು ಅಪಾಯಕ್ಕೆ ಒಳಗಾಗಿ ಮತ್ತೊಬ್ಬರ ಅಪಾಯಕ್ಕೆ ಒಳಗಾಗುವಂತೆ ಮಾಡುತ್ತಾರೆ.
ಇತ್ತೀಚಿಗೆ ತುಮಕೂರಿನ ಹೈವೇ ನಡೆದಂತ ಕೆಲವು ಘಟನೆಗಳಿಂದ ಜನರು ರೋಸಿ ಹೋಗಿದ್ದು ಹೈವೇಯಲ್ಲಿ ನಡೆದ ಬೈಕ್ ವೀಲಿಂಗ್ ಇಂದಾಗಿ ಪುಂಡರ ಬೈಕುಗಳನ್ನು ಹೈವೇ ಮೇಲಿಂದ ಕೆಳಗೆ ಹಾಕಿದ ಘಟನೆಗಳು ನಡೆದಿದೆ ಇದು ಜನರ ಆಕೋಶಕ್ಕೆ ಕಾರಣವಾಗಿದೆ.
-ಚಂದ್ರಶೇಖರಚಾರಿ ಎಂ ಶಿಕ್ಷಕರು,ವಿಶ್ವಮಾನವ ಶಾಲೆ ಚಿತ್ರದುರ್ಗ