ನೀ ತಂಗಿದ ನಿಲ್ದಾಣ
ನಿನದಲ್ಲದೆ ಮತ್ತಾರದಾದೀತು
ಮುಂಜಾನೆಯ ಮಂಜಿನಲಿ
ಮಂಜಿನ ಸವಿಯನು ಸವಿದತಾಣ
ನೇಸರನು ಬೆಳಗುವ ಹೊತ್ತಿಗೆ
ನೀ ಕಾದು ಕಾದು ತಂಗಿದ ತಾಣ
ಸಂಜೆಗೆಂಪ ರವಿಯ ಸೊಬಗನ್ಹೀರುತ
ಸಂತಸದ ಕ್ಷಣವ ಕಳೆದ ತಾಣ
ಇರುಳ ತಂಪಾಗಿಸುವ ರವಿಯ
ಸೊಬಗ ಸವಿದತಾಣ
ಒಲವಿನ ಬಣ್ಣ ಬಳೆದು
ಸುಳ್ಳಿನ ಮಾಲೆಯ ಪೂಣಿಸಿದ ತಾಣ
ಒಲವಿನ ಬಣ್ಣ ಕಳಚಿ
ನಿಜರೂಪ ಕಂಡತಾಣ
ಒಲವಿನ ಛಾಯೆ ಅಳಿಸಿ
ಅನಾಮಿಕತೆಯ ಪರಿಚಯಿಸಿದ ತಾಣ
ನೀ ತಂಗಿದ ಈ ತಾಣ
ನಿನದಲ್ಲದೆ ಮತ್ತಾರದಾದೀತು ….?
ರಚನೆ:ಲೋಹಿತೇಶ್ವರಿ ಎಸ್ ಪಿ
