ಪಾವಗಡ:19ನೇ ಶತಮಾನದ ಕಾಯಕಯೋಗಿ ವಚನಕಾರ ನೂಲಿಯ ಚಂದಯ್ಯನ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಉಪತಹಶೀಲ್ದಾರ್ ನರಸಿಂಹ ಮೂರ್ತಿರವರು ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಜಯಂತಿಯಲ್ಲಿ ಮಾತನಾಡಿ ತಿಳಿಸಿದರು.
ಪಟ್ಟಣದ ತಹಸಿಲ್ದಾರ್ ಕಚೇರಿಯಲ್ಲಿ ಶಿವಶರಣ ನೂಲಿಯ ಚಂದಯ್ಯನ 917ನೇ ಜಯಂತಿಯನ್ನು ಜಯಂತಿಯನ್ನು ಉದ್ದೇಶಿಸಿ ತಾಲೂಕು ಕೊರಚ ಸಮುದಾಯದ ಅಧ್ಯಕ್ಷ ಲೈನ್ ಮ್ಯಾನ್ ಗಂಗಪ್ಪ ಮಾತನಾಡಿ ತಾಲೂಕಿನಲ್ಲಿ ಕೊರಚ ಸಮುದಾಯವು ಅತ್ಯಂತ ಹಿಂದುಳಿದ ಬಡ ಸಮುದಾಯ ವಾಗಿದ್ದು ಸಮುದಾಯದ ಬಂಧುಗಳು ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ನೀಡಿ ಶೈಕ್ಷಣಿಕವಾಗಿ ಸರ್ಕಾರ ನೀಡುವ ಸೌಲಭ್ಯವನ್ನು ಪಡೆದು ಪ್ರಗತಿ ಸಾಧಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಯ ರಾಜಗೋಪಾಲ್. ಗುತ್ತಿಗೆದಾರರಾದ ಎ. ತಿಮ್ಮರಾಜು. ಸಂಘದ ಕಾರ್ಯದರ್ಶಿ ವೀರಭದ್ರಪ್ಪ. ನಿವೃತ್ತ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮುತ್ಯಾಲಪ್ಪ. ಈರಣ್ಣ . ನಾರಾಯಣ. ನಾಗರಾಜಪ್ಪ ಸಮುದಾಯದ ಬಂಧುಗಳು ಹಾಗೂ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.
ವರದಿ :ಕೆ.ಮಾರುತಿ ಮುರಳಿ