ಶಿವಮೊಗ್ಗ ಜಿಲ್ಲೆಯ,ಹಿಂದುಳಿದ ಜನ ಜಾಗೃತಿ ವೇದಿಕೆ ವತಿಯಿಂದ ಇಂದು ಪ್ರೆಸ್ ಕ್ಲಬ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಿಂದುಳಿದ ವರ್ಗಗಳ ಹರಿಕಾರ “ಡಿ.ದೇವರಾಜ ಅರಸು ರವರ ಜನ್ಮ ದಿನಾಚರಣೆ – ಪುಷ್ಪನಮನ – ವಿಚಾರ ಸಂಕಿರಣ”ದಲ್ಲಿ ಭಾಗವಹಿಸಿದ ಜಿ.ಬಿ. ವಿನಯ್ ಕುಮಾರ್ ರವರು ದೇವರಾಜ ಅರಸು ಕಿರುಪುಸ್ತಕ ಬಿಡುಗಡೆಗೊಳಿಸಿ ಸಭಿಕರನ್ನು ಉದ್ದೇಶಿಸಿ ಮಾತನಾಡಿದರು.
ವಿಚಾರ ಸಂಕಿರಣ: ವಿಷಯ ; “ಹಿಂದುಳಿದ ವರ್ಗಗಳ ಮೀಸಲಾತಿ” ಜನಜಾಗೃತಿ, ಸಂಘಟನೆ ಮತ್ತು ಜವಾಬ್ದಾರಿಯ ಉಪನ್ಯಾಸ ನೀಡಿದ ಸನ್ಮಾನ್ಯ ಶ್ರೀ ಕೆ.ಎನ್. ಲಿಂಗಪ್ಪ, ಕೆ.ಎ.ಎಸ್. (ನಿ.) ಮಾಜಿ ಸದಸ್ಯರು, ರಾಜ್ಯ ಹಿಂದುಳಿದ ವರ್ಗಗಳ ಆಯೋಗ (ಕಾಂತರಾಜ ಆಯೋಗ), ಮಾಜಿ ಸಂದರ್ಶಕ ಪ್ರಾಧ್ಯಾಪಕರು, ಮೈಸೂರು ವಿ.ವಿ. ದೇವರಾಜ ಅರಸು ಪೀಠ.
ಮುಖ್ಯ ಅತಿಥಿಗಳಾಗಿ ಸನ್ಮಾನ್ಯ ಶ್ರೀ ಮೊಹ್ಮದ್ ಸನಾವುಲ್ಲಾ ಮಾಜಿ ಉಪಮೇಯರ್, ಶಿವಮೊಗ್ಗ-ಭದ್ರಾವತಿ ಕಾರ್ಪೋರೇಷನ್, ಭದ್ರಾವತಿ. ಹಾಗೂ ಸನ್ಮಾನ್ಯ ಶ್ರೀ ಬಿ. ಗೋಪಾಲ್ ಅಧ್ಯಕ್ಷರು, ಪ್ರಜಾ ಪರಿವರ್ತನಾ ವೇದಿಕೆ, ಬೆಂಗಳೂರು ಆಗಮಿಸಿದ್ದರು.
ಕಾರ್ಯಕ್ರಮ ಉದ್ಘಾಟನೆ ಸನ್ಮಾನ್ಯ ಶ್ರೀ ರಾಚಪ್ಪ ಮಾಸ್ಟರ್ ಚಿಂತಕರು, ಪ್ರಗತಿಪರ ಸಂಘಟನೆಗಳ ಒಕ್ಕೂಟ, ಸೊರಬ ಇವರು ನೆರವೇರಿಸಿದರು.
ಪ್ರಾಸ್ತಾವಿಕ ಭಾಷಣವನ್ನು ಸನ್ಮಾನ್ಯ ಶ್ರೀ ತೀ.ನ. ಶ್ರೀನಿವಾಸ್ ಅಧ್ಯಕ್ಷರು, ಹಿಂದುಳಿದ ಜನಜಾಗೃತಿ ವೇದಿಕೆ, ಶಿವಮೊಗ್ಗ ಮಾಡಿದರು.
ಹಿಂದುಳಿದ ಜನ ಜಾಗೃತಿ ವೇದಿಕೆ ಗೌರವ ಅಧ್ಯಕ್ಷ ಪ್ರೊ. ಹೆಚ್. ರಾಚಪ್ಪ ಸಭೆಯ ಅಧ್ಯಕ್ಷತೆ ವಹಿಸಿದ್ದರು,
ಅಧ್ಯಕ್ಷತೆ : ಸನ್ಮಾನ್ಯ ಶ್ರೀ ಜಿ. ಪರಮೇಶ್ವರಪ್ಪ ಉಪಾಧ್ಯಕ್ಷರು, ಹಿಂದುಳಿದ ಜನಜಾಗೃತಿ ವೇದಿಕೆ, ಶಿವಮೊಗ್ಗ
ಈ ಕಾರ್ಯಕ್ರಮದಲ್ಲಿ ಪ್ರೊ. ಪ್ರಭಾಕರ್, ಪ್ರೊ. ಉಮೇಶ್ ಯಾದವ್, ಪ್ರೊ. ಜಿ. ಪರಮೇಶ್ವರಪ್ಪ, ಡಾ. ಕೆ.ಜಿ. ವೆಂಕಟೇಶ್, ಪಾಂಡುರಂಗಪ್ಪ, ಚನ್ನವೀರಪ್ಪ ಗಾಮನಗಟ್ಟಿ, ಜಿ.ಎಂ. ವಿಜಯ ಕುಮಾರ್, ಅಣ್ಣಪ್ಪ, ಶಿವಲಿಂಗಪ್ಪ, ಬಿ. ಜನಮೇಜಿರಾವ್, ಗುತ್ಯಪ್ಪ ಇತರರು ಪಾಲ್ಗೊಂಡಿದ್ದರು.