ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಅಂಕಸದೊಡ್ಡಿ ಗ್ರಾಮದ ಹೊರವಲಯದಲ್ಲಿರುವ ಜಗದ್ಗುರು ಶ್ರೀ ಮೌನೇಶ್ವರ ದೇವಸ್ಥಾನದ ಆವರಣವನ್ನು ಅಭಿನಂದನ ಸಂಸ್ಥೆಯ ಸಂಡೇ ಫಾರ್ ಸೋಶಿಯಲ್ ವರ್ಕ್ ಸೇವಾ ಕಾರ್ಯದ ಅಡಿಯಲ್ಲಿ ದೇವಸ್ಥಾನದ ಆವರಣವನ್ನು ಸ್ವಚ್ಛಗೊಳಿಸಿ ಸುಣ್ಣ ಬಣ್ಣವನ್ನು ಹಚ್ಚುವ ಮೂಲಕ ಶ್ರಾವಣ ಮಾಸಕ್ಕೆ ಬರುವ ಭಕ್ತಾದಿಗಳಿಗೆ ಅನುಕೂಲಗಳನ್ನು ಮಾಡಿಕೊಡಲಾಯಿತು.ಈ ದೇವಸ್ಥಾನವು ಕಲ್ಯಾಣ ಚಾಲುಕ್ಯರ ಆಳ್ವಿಕೆಯಲ್ಲಿ ನಿರ್ಮಾಣವಾಗಿದ್ದು ಕಳೆದ ಹತ್ತಾರು ವರ್ಷಗಳಿಂದ ಈ ದೇವಸ್ಥಾನವು ಸುಣ್ಣ ಬಣ್ಣವನ್ನು ಕಂಡಿರಲಿಲ್ಲ ಹಾಗೂ ಆವರಣದ ಸುತ್ತ ಮುತ್ತ ಜಾಲಿ ಗಿಡಗಳು ಹೆಮ್ಮರವಾಗಿ ಬೆಳೆದಿದ್ದವು ಆದ್ದರಿಂದ ಈ ಸೇವಾ ಕಾರ್ಯವನ್ನು ಹಮ್ಮಿಕೊಳ್ಳಲಾಯಿತು.
ಈ ಸೇವಾ ಕಾರ್ಯದಲ್ಲಿ ಅಭಿನಂದನ ಸಂಸ್ಥೆಯ ಸಂಸ್ಥಾಪಕರಾದ ರಾಮಣ್ಣ ಹಂಪರಗುಂದಿ ಸದಸ್ಯರಾದ ಜಾಫರ್ಮಿಯಾ,ಮಲ್ಲಿಕಾರ್ಜುನ ಬಡಿಗೇರ,ಕಿಶೋರ,ವೆಂಕೊಬ,ಅಂಕುಸದೊಡ್ಡಿ ಗ್ರಾಮದ ಸಂತೋಷ್ ಗಚ್ಚಿನಮನಿ, ಮಲ್ಲಣ್ಣ,ಮಾನಯ್ಯ ಗ್ರಾಮ ಪಂಚಾಯಿತಿ ಸದಸ್ಯರು,
ಗುರುಭಾರ್ಗವ,ಉದಯ,
ನಿಂಗಣ್ಣ ಮೇಲ್ದಾಪುರ,
ಮರಿಬಸವ,ಬಸವರಾಜ ವಂದ್ಲಿ ಇತರರು ಉಪಸ್ಥಿತರಿದ್ದರು.